Siddaramaiah: ಸಿದ್ದರಾಮಯ್ಯ 2 ಕ್ಷೇತ್ರಗಳಿಂದ ಕಣಕ್ಕಿಳಿಯೋದು ಖಚಿತ : ಯತೀಂದ್ರ ಸಿದ್ದರಾಮಯ್ಯ! ಹಾಗಿದ್ರೆ ಆ ಎರಡು ಕ್ಷೇತ್ರಗಳು ಯಾವುವು?

Yathindra Siddaramaiah : ಚುನಾವಣೆ ಹತ್ತಿರವಾದರೂ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಕುರಿತು ಸ್ವತಃ ಸಿದ್ದು ಗೆ ಸ್ಪಷ್ಟತೆ ಇಲ್ಲ. ಕೋಲಾರ ಹಾಗೂ ವರುಣಾ ಕ್ಷೇತ್ರಗಳೇ ಅವರಿಗೆ ಗೊಂದಲವಾಗಿ ಬಿಟ್ಟಿದೆ. ಇದರ ಬೆನ್ನಲ್ಲೆ ಸಿದ್ದರಾಮಯ್ಯ ತಮ್ಮ ಹಾಲಿ ಕ್ಷೇತ್ರವಾದ ಬಾದಾಮಿಯಲ್ಲೇ (Badami) ಸ್ಪರ್ಧೆ ಮಾಡುತ್ತಾರೆ ಎಂಬ ಗುಮಾನಿ ಹುಟ್ಟಿತ್ತು. ಆದರೀಗ ಇವೆಲ್ಲಕ್ಕೂ ತೆರೆ ಎಳಿಯುವಂತೆ ಸಿದ್ದರಾಮಯ್ಯ (Siddaramaiah) ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಸ್ವರ್ಧಿಸಲು ನಿರ್ಧರಿಸಿದ್ದಾರೆ ಎಂದು ಪುತ್ರ ಡಾ. ಯತೀಂದ್ರ (Yathindra Siddaramaiah ) ಖಚಿತಪಡಿಸಿದ್ದಾರೆ.

 

ಹೌದು, ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಕೋಲಾರ (Kolar) ಬೇಡ ವರುಣಾದಲ್ಲಿ (Varuna) ಸ್ಪರ್ಧಿಸಿ ಅಂತಾ ಹೇಳಿತ್ತು. ಈ ಸಮಯದಲ್ಲಿ ಕೋಲಾರ ಕ್ಷೇತ್ರದಿಂದ ಹಿಂದೆ ಸರಿದರೆ ಕಾಂಗ್ರೆಸ್‌ಗೆ (Congress) ಹಿನ್ನಡೆಯಾಗುತ್ತೆ ಅಂತಾ ಅಲ್ಲಿನ ನಾಯಕರು ಹೇಳಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಕೋಲಾರ ಬಿಡುವಂತಿಲ್ಲ. ಹೈಕಮಾಂಡ್ ಸೂಚನೆಯಂತೆ ವರುಣಾ ಕ್ಷೇತ್ರ (Varuna Constituency) ಬಿಡಲೂ ಆಗಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಕೋಲಾರ – ವರುಣಾ ಎರಡೂ ಕ್ಷೇತ್ರಗಳಲ್ಲೂ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವರುಣಾ ಒಂದರಲ್ಲಿ ನಿಂತುಕೊಳ್ಳಿ ಅಂತಾ ನಾನು ಮೊದಲು ಸಲಹೆ ಕೊಟ್ಟಿದ್ದೆ. ಸಿದ್ದರಾಮಯ್ಯ ಅವರು ಯಾವುದೇ ಕ್ಷೇತ್ರದಲ್ಲಿ ನಿಂತರೂ ಅವರ ವೈರಿಗಳು ಒಂದಾಗಿ ಸೋಲಿಸಲು ಯತ್ನಿಸುತ್ತಾರೆ. ಸಿದ್ದರಾಮಯ್ಯ ವಿರುದ್ಧ ಅವರ ಶತ್ರುಗಳು ಹಣದ ಹೊಳೆ ಹರಿಸುತ್ತಾರೆ. ಇದಕ್ಕೆಲ್ಲ ಹೆದರೋಕೆ ಆಗಲ್ಲ. ಸಿದ್ದರಾಮಯ್ಯ ಮಾಸ್ ಲೀಡರ್. ಆಕಸ್ಮಾತ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತಾರೆ. ಇದನ್ನು ಸಹಿಸಲು ಬಲಪಂಥೀಯರಿಗೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯನವರು ಎರಡು ಕ್ಷೇತ್ರದಲ್ಲಿ ಗೆದ್ದರೆ ಕೋಲಾರ ಕ್ಷೇತ್ರದಲ್ಲಿ ತಮ್ಮ ಶಾಸಕತ್ವವನ್ನು ಮುಂದುವರಿಸಿ ವರುಣಾದಲ್ಲಿ ರಾಜೀನಾಮೆ ನೀಡಿ ತಮ್ಮ ಪುತ್ರನಿಗೆ ಮತ್ತೆ ಮರಳಿ ಆ ಕ್ಷೇತ್ರವನ್ನು ಬಿಟ್ಟು ಕೊಡುವ ಹುನ್ನಾರ ಇದರ ಹಿಂದೆ ಇದ್ದರೂ ಇರಬಹುದು.

Leave A Reply

Your email address will not be published.