Prewedding Photoshoot in Mud : ಎಲ್ಲಾ ಆಯಿತು, ಇನ್ನು ಈ ಮಣ್ಣಿನಲ್ಲಿ ನಡೆಯಿತು ಈ ಪ್ರೀ ವೆಡ್ಡಿಂಗ್‌ ಫೊಟೋ ಶೂಟ್‌!

Pre Wedding Photoshoot: ಫೋಟೋ (Photo)ತೆಗೆಯುವ ಕ್ರೇಜ್ ಎಲ್ಲರಿಗೂ ಇರುವಂತದ್ದೇ. ಬೇರೆ ಊರಿಗೆ ಹೋದಾಗ, ಪರಿಸರದ ನಡುವೆ, ಮದುವೆ (Marriage), ಎಂಗೇಜ್ಮೆಂಟ್(Engagement), ನಾಮಕರಣ ಹೀಗೆ ಪ್ರತಿ ಸುಮಧುರ ಕ್ಷಣವನ್ನು ನೆನಪಿನಲ್ಲಿ ಹಚ್ಚ ಹಸಿರಾಗಿ ಉಳಿಸಲು ಫೋಟೋಶೂಟ್ ಮಾಡುವ ಟ್ರೆಂಡ್ ಕಾಮನ್ .

ಪ್ರೀ – ವೆಡ್ಡಿಂಗ್, ಎಂಗೇಜ್ಮೆಂಟ್ ಸಮಯದಲ್ಲಿ ಫೋಟೊ ಶೂಟ್ ಮಾಡುವಾಗ ಎಲ್ಲರೂ ವಿಶೇಷ ಗಮನ ಕೊಡುವುದು ಸುತ್ತಲಿನ ಪರಿಸರ, ಕಣ್ಮನ ಸೆಳೆಯುವ ಪ್ರಕೃತಿಯ ಮಡಿಲಲ್ಲಿ, ಈಜುಕೊಳ, ಇಲ್ಲವೇ ಬೀಚ್ , ರೆಸಾರ್ಟ್ , ಹೀಗೆ ವಧು – ವರರ ಅಭಿರುಚಿಗೆ ತಕ್ಕಂತೆ ಕ್ಯಾಮರಾ ಕಣ್ಣಲ್ಲಿ ಫೋಟೋ ಕ್ಲಿಕ್ಕಿಸುವುದು ತಿಳಿದಿರುವ ವಿಷಯವೇ!!.. ಇತ್ತೀಚೆಗಷ್ಟೇ ಹದಗೆಟ್ಟ ರಸ್ತೆಯಲ್ಲಿ ಫೋಟೋ ಕ್ಲಿಕಿಸಿ ಕೇರಳದ ನವ ವಧು ಒಬ್ಬರು ಸುದ್ದಿಯಾಗಿದ್ದರು. ಇದೀಗ, ಹೊಸ ದಾಂಪತ್ಯ ಜೀವನಕ್ಕೆ ಅಡಿಯಿಡಲೂ ಮುಂದಾಗಿರುವ ಜೋಡಿಯೊಂದು ಕೆಸರಿನಲ್ಲಿ ಪ್ರೀ ವೆಡ್ಡಿಂಗ್ (Pre Wedding Photoshoot)ಫೋಟೋಶೂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈ ಜೋಡಿ ಯಾಕೆ ಕೆಸರಿನಲ್ಲಿ(in the mud) ಫೋಟೊ ಶೂಟ್ ಮಾಡಿಸಿದ್ದಾರೆ ಅಂತ ತಿಳಿದರೆ ನೀವು ಕೂಡ ಮೆಚ್ಚುಗೆ ಸಲ್ಲಿಸೋದಂತು ಪಕ್ಕಾ!!

ನಾವು ಸೇವಿಸುವ ಪ್ರತಿ ಆಹಾರ ಕೃಷಿಯಿಂದ ಅದರಲ್ಲಿಯೂ ವಿಶೇಷವಾಗಿ ರೈತರ ಶ್ರಮದಿಂದ ದೊರೆಯುತ್ತಿದೆ ಎಂಬ ಸತ್ಯ ತಿಳಿದಿದ್ದರೂ ಕೂಡ ಕೃಷಿ ಎಂದರೆ ಅಸಡ್ಡೆ ತೋರುವವರೆ ಹೆಚ್ಚು. ಹೀಗಿದ್ದಾಗ ಕೃಷಿಯ ಕಡೆ ಒಲವು ತೋರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಅನ್ನೋದು ಕೂಡ ಅಷ್ಟೇ ಸತ್ಯ. ಹಗಲಿರುಳು ಎನ್ನದೆ ದುಡಿಯುವ ಈ ಕೃಷಿಕನಿಗೆ ಸಮಾಜದಲ್ಲಿ ಯಾವ ಗೌರವ ಕೂಡ ದೊರೆಯುತಿಲ್ಲ ಅನ್ನೋದು ವಿಪರ್ಯಾಸದ ಸಂಗತಿ. ಇದೀಗ, ಕೃಷಿಯನ್ನು ನಂಬಿ ಜೀವನ ನಡೆಸುತ್ತಿರುವ ತಮ್ಮ ಕುಟುಂಬದ ಆಧಾರಸ್ತಂಭವಾಗಿರುವ ಕೃಷಿಯ ಕಷ್ಟ – ಸುಖದ ಬಗ್ಗೆ ಜಗತ್ತಿಗೆ ಅನಾವರಣ ಮಾಡುವ ದೆಸೆಯಲ್ಲಿ ಹೊಸ ಪ್ರಯತ್ನಕ್ಕೆ ಜೋಡಿಯೊಂದು ಕೈ ಹಾಕಿದೆ.

ಕೃಷಿಯನ್ನೇ ತಮ್ಮ ಮೂಲ ವೃತ್ತಿಯಾಗಿಸಿಕೊಂಡಿರುವ ಈ ಜೋಡಿ, ಹೊಸ ಜೀವನ ಶುರು ಮಾಡುವ ಮೊದಲು ಕೆಸರಿನಲ್ಲಿ ಫೋಟೋಶೂಟ್ ಮಾಡಲು ತೀರ್ಮಾನ ಕೈಗೊಂಡಿದ್ದು,24 ವರ್ಷದ ಜಾನ್ಸಿ ಮತ್ತು 21 ವರ್ಷದ ಇಮೆ ಎಂಬ ಜೋಡಿ ಮದುವೆಗೂ ಮುನ್ನ ಫೋಟೋಶೂಟ್‌ Pre Wedding Photoshoot in the mud)ಮೂಲಕ ಎಲ್ಲರ ಚಿತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನು ಇಮೆ ಕುಟುಂಬದ ಭತ್ತದ ಗದ್ದೆಯಲ್ಲಿ ಮಾಡಲಾಗಿದ್ದು, ಇದಕ್ಕೆ ಈ ಜೋಡಿ ಕಾರಣವನ್ನು ಕೂಡ ಹೇಳಿಕೊಂಡಿದೆ.ತಾವು ರೈತರ ಕುಟುಂಬದಲ್ಲಿ ಬೆಳೆದಿದ್ದು, ಹೀಗಾಗಿ, ಕುಟುಂಬದ ವೃತ್ತಿಯನ್ನು ಗಮನದಲ್ಲಿರಿಸಿ ತಮ್ಮ ಪ್ರಿ ವೆಡ್ಡಿಂಗ್ ಶೂಟ್‌ಗೆ ಥೀಮ್(Theme) ಅನ್ನು ಫೈನಲ್ ಮಾಡಲಾಗಿತ್ತು.

ಬೇಸಿಗೆಯ ಕಾವು ಹೆಚ್ಚಿದಂತೆ ಆ ಬಿಸಿಲಿನ(Summer) ಬೇಗೆಗೆ ಬೇಸಾಯ ಮಾಡುವುದು ಎಷ್ಟು ಕಠಿಣ ಎಂಬ ವಿಚಾರ ವನ್ನು ಜನರಿಗೆ ಅರ್ಥ ಮಾಡಿಸುವ ಸಲುವಾಗಿ ಈ ಜೋಡಿ ಹೀಗೆ ಫೋಟೋ ತೆಗೆದುಕೊಳ್ಳಲು ನಿರ್ಧರಿಸಿದರಂತೆ. ಕೆಸರಿನಲ್ಲಿ ನಡೆಯುವುದರ ಜೊತೆಗೆ ಅಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಜಗತ್ತಿಗೆ ಜಗಜ್ಜಾಹೀರಾಗುವಂತೆ ಮಾಡುವ ಸಲುವಾಗಿ ಫೋಟೊ ತೆಗೆದಿರುವ ಬಗ್ಗೆ ಇಮೆ ಮಾಹಿತಿ ನೀಡಿದ್ದಾರೆ.

ಫಿಲಿಪೈನ್ಸ್‌ನ ಸರ್ಕಾರಿ ಶಾಲೆಯ ಶಿಕ್ಷಕಿ ವೃತ್ತಿ ಮಾಡುತ್ತಿರುವ ಇಮೆ, ತಾನು ಕೃಷಿಯನ್ನು(Agriculture) ಉದ್ಯೋಗ ಇಲ್ಲವೇ ವೃತ್ತಿಯಾಗಿ ಪ್ರದರ್ಶಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೃಷಿಗೆ ಸರಿಯಾದ ಬೆಲೆ ಗೌರವ ದೊರೆಯಬೇಕು. ಹೀಗಾಗಿ, ರೈತರಿಗೆ (Farmers) ಕೃತಜ್ಞತೆ ಸಲ್ಲಿಸಬೇಕು ಎಂದು ಈ ಜೋಡಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ರೈತ ಕುಟುಂಬಗಳು ಎಷ್ಟೇ ಕಷ್ಟಪಟ್ಟರೂ ಕೂಡ ಅದರ ಬಗ್ಗೆ ದೂರದೆ ಉಳಿದವರಿಗೆ ಸ್ಫೂರ್ತಿ ಆಗುವ ರೀತಿ ನೆಮ್ಮದಿಯಿಂದ ಜೀವಿಸುತ್ತಿರುವುದು ವಿಶೇಷ. ಹೀಗಾಗಿ, ಪ್ರಕೃತಿಯ (Nature) ಮೇಲಿನ ಪ್ರೀತಿ ಮತ್ತು ಉತ್ಸಾಹವನ್ನು ತೋರಿಸುವ ಪ್ರಯತ್ನಕ್ಕೆ ಜೋಡಿಯೊಂದು ಮುಂದಾಗಿದೆ.

ಇದನ್ನೂ ಓದಿ: Money : ತನ್ನ ಶಿಕ್ಷಣಕ್ಕೆಂದು ಇಟ್ಟ ಹಣ ಅಣ್ಣನ ಮದುವೆಗೆ ಬಳಕೆ! ತಂಗಿ ಏನು ಮಾಡಿದಳು ಗೊತ್ತೇ?

Leave A Reply

Your email address will not be published.