Love Better : ಬ್ರೇಕಪ್ ಆದ ಯುವಕರೇ ಇತ್ತ ಗಮನಿಸಿ; ನಿಮಗಾಗಿಯೇ ಖರ್ಚು ಮಾಡಲು ರೆಡಿಯಾಗಿದೆ ಸರಕಾರ, ಎಷ್ಟು ಗೊತ್ತಾ?

Love Better: ಪ್ರೀತಿಯಲ್ಲಿ ಬ್ರೇಕಪ್ (love breakup) ಆದಾಗ ನೋವುಂಟಾಗೋದು ಸಾಮಾನ್ಯ. ಕೆಲವರು ಇದರಿಂದ ಭಾರೀ ದುಃಖಿತರಾಗಿ ಕೊನೆಗೆ ತಮ್ಮ ಜೀವವನ್ನೇ ಕಳೆದುಕೊಳ್ಳುವವರಿದ್ದಾರೆ. ಇಂತಹ ಯುವಕರಿಗೆ ಬೆಂಬಲವಾಗಿ ಸರ್ಕಾರ ನಿಂತಿದ್ದು, ಬ್ರೇಕಪ್ ಆದ ಯುವಕರಿಗೆ ಸರಕಾರ (government) ಹಣ ಖರ್ಚು ಮಾಡಲು ರೆಡಿಯಾಗಿದೆ. ಅಷ್ಟಕ್ಕೂ ಇದು ಎಲ್ಲಿ ? ಇಂತಹ ಅವಕಾಶ ಎಲ್ಲಿ ಇರೋದು?

ನ್ಯೂಜಿಲೆಂಡ್ (New Zealand) ಸರ್ಕಾರವು ‘ಲವ್ ಬೆಟರ್’ (Love Better) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು,
ಯುವಕರು ‘ಬ್ರೇಕ್​ಅಪ್’ ನಿಂದ (Breakup) ಚೇತರಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ‘ಲವ್ ಬೆಟರ್’ ಅಭಿಯಾನವನ್ನು ಪ್ರಾರಂಭಿಸಿದೆ. ನ್ಯೂಜಿಲೆಂಡ್‌ನ ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಮೂರು ವರ್ಷಗಳ ಅವಧಿಯಲ್ಲಿ ಸುಮಾರು $4 ಮಿಲಿಯನ್‌ನ ಯೋಜಿತ ಬಜೆಟ್‌ನೊಂದಿಗೆ ಅಭಿಯಾನವನ್ನು ನಡೆಸುತ್ತದೆ ಎನ್ನಲಾಗಿದೆ.

ಯುವಕರು ‘ಬ್ರೇಕ್​ಅಪ್’ ಅನ್ನು ಉತ್ತಮವಾಗಿ ನಿಭಾಯಿಸಲು ಮತ್ತು ಮತ್ತು ಸಂಬಂಧಗಳ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ನಿರ್ಮಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ‘ಲವ್ ಬೆಟರ್’ ಅಭಿಯಾನವನ್ನು ಪ್ರಾರಂಭಿಸಿದೆ. ಅಲ್ಲದೆ, ಯುವ ಪೀಳಿಗೆಗಳಲ್ಲಿ ‘ನೊಂದರೂ ಉತ್ತಮವಾಗಿ ಜೀವನ ನಡೆಸುವ’ ಮನೋಭಾವವನ್ನು ಬೆಳೆಸಲು ಕುಟುಂಬ ಹಾನಿ ತಡೆಗಟ್ಟುವಿಕೆಗೆ ಈ ಯೋಜನೆಯಾಗಿದೆ.

ಗಾರ್ಡಿಯನ್ ವರದಿಯು ‘ನ್ಯೂಜಿಲೆಂಡ್‌ನ ಜನಸಂಖ್ಯೆಯಲ್ಲಿ 87% 16-24 ವರ್ಷ ವಯಸ್ಸಿನವರು, ಸಂಬಂಧದಲ್ಲಿದ್ದವರು ಸಾಮಾನ್ಯ ಬ್ರೇಕ್​ಅಪ್​ಗಿಂತ ಹೆಚ್ಚಿನ ಹಾನಿಯನ್ನು ಅನುಭವಿಸಿದ್ದಾರೆ’ ಎಂದು ಹೇಳಿದೆ. ಈ ಕಾರಣವೂ ಸರ್ಕಾರ ಈ ಅಭಿಯಾನ ನಡೆಸುತ್ತಿದೆ.

“1,200 ಕ್ಕೂ ಹೆಚ್ಚು ಯುವಕರು ಪ್ರೀತಿ ಮತ್ತು ನೋವಿನ ಆರಂಭಿಕ ಅನುಭವಗಳನ್ನು ಎದುರಿಸಲು ಬೆಂಬಲ ಬೇಕು ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ಕುಟುಂಬ ಮತ್ತು ಲೈಂಗಿಕ ಹಿಂಸೆಯ ಅಂಕಿಅಂಶಗಳು ಅವಮಾನಕರ ಫಲಿತಾಂಶವನ್ನು ಹೊಂದಿದೆ ಇದನ್ನು ತಡೆಯಲು ನಮಗೆ ನವೀನ ವಿಧಾನಗಳ ಅಗತ್ಯವಿದೆ. ಇಂದು ನಾವು ಲವ್‌ಬೆಟರ್ ಎಂಬ ವಿಶ್ವ-ಪ್ರಮುಖ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದು ನಮ್ಮ ಯುವಕರನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ” ಎಂದು ಸಾಮಾಜಿಕ ಅಭಿವೃದ್ಧಿ ಮತ್ತು ಉದ್ಯೋಗದ ಸಹಾಯಕ ಸಚಿವ ಪ್ರಿಯಾಂಕಾ ರಾಧಾಕೃಷ್ಣನ್ ಹೇಳಿದ್ದಾರೆ.

Leave A Reply

Your email address will not be published.