Nothing Ear (2) : ನಥಿಂಗ್ ಇಯರ್(2) ಇಂದಿನಿಂದ ಭರ್ಜರಿ ಸೇಲ್‌ಗೆ ರೆಡಿ! ಹೆಚ್ಚಿನ ಮಾಹಿತಿ ಇಲ್ಲಿದೆ
Nothing Ear 2 Earbuds: ಹೊಸ ಶೈಲಿಯಲ್ಲಿ ಸ್ಮಾರ್ಟ್ ಫೋನ್ ಗಳು ಬದಲಾವಣೆ ಅಂದಂತೆ ವಿಭಿನ್ನ ರೀತಿಯ ಇಯರ್‌ಬಡ್ಸ್‌ಗಳು ಹೆಚ್ಚಾಗಿದೆ. ಇದೀಗ ಗ್ರಾಹಕರು ನಥಿಂಗ್ ಇಯರ್ ಬಡ್ಸ್ ಗಳಿಗೂ ಬೇಡಿಕೆ ಇಡುತ್ತಿದ್ದಾರೆ.
2ದಿನಗಳ ಹಿಂದಷ್ಟೇ ಭಾರತ ಮತ್ತು ಇತರ ದೇಶದಲ್ಲಿಯೂ ನಥಿಂಗ್ ಇಯರ್ (2) ಬಿಡುಗಡೆಯಾಗಿದ್ದು, ನಥಿಂಗ್ ಇಯರ್(Nothing Ear 2 Earbuds) ಬಡ್ಸ್ ನ ಯಾವುದೆಲ್ಲ ಹೊಸ ಫೀಚರ್ಸ್ ಒಳಗೊಂಡಿದೆ ಅದು ಹೇಗಿದೆ ಹಾಗೂ ಇದರ ಬೆಲೆ ಎಷ್ಟು ತಿಳಿಯಿರಿ.
ನಥಿಂಗ್ ಇಯರ್ (2) ನಿಮ್ಮ ಕಿವಿಗೆ ಯಾವ ರೀತಿಯೂ ಕಿವಿಗೆ ಹಾನಿದಂತೆ ಡ್ಯುಯಲ್-ಚೇಂಬರ್ ವಿನ್ಯಾಸವನ್ನು ಒಳಗೊಂಡಿದೆ. ಬಡ್ಸ್‌ಗಳು AI ನಾಯ್ಸ್ ರೆಡ್ಯೂಕ್ಷನ್ ಅಲ್ಗಾರಿದಮ್ ಇರಲಿವೆ.
ಇಯರ್‌ಬಡ್ಸ್ ಸುಧಾರಿತ 11.6 ಎಂಎಂ ಕಸ್ಟಮ್ ಡ್ರೈವರ್, ಸ್ಮಾರ್ಟ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್‌ನೊಂದಿಗೆ 40 dB ವರೆಗೆ ಶಬ್ದ ಕಡಿತವನ್ನು ನೀಡುತ್ತದೆ. 20 ಮಿಲಿಯನ್ ಸೌಂಡ್ ಮಾಡ್ಯುಲ್‌ಗಳನ್ನು ಫಿಲ್ಟರ್ ಮಾಡಲಿವೆ. ಸುಧಾರಿತ ವಿಂಡ್ ಪ್ರೂಫ್ ಮತ್ತು ಕ್ರೌಡ್-ಪ್ರೂಫ್ ಕ್ಲಿಯರ್ ವಾಯ್ಸ್ ಟೆಕ್ನಾಲಜಿಯನ್ನು ಹೊಂದಿದೆ.
ಈ ನಥಿಂಗ್ ಇಯರ್ (2)ಬಡ್ಸ್‌ಹೈ-ರೆಸ್ ಆಡಿಯೋ, LHDC 5.0 ಕೊಡೆಕ್‌ಗಳು ಮತ್ತು ಕಡಿಮೆ ಲ್ಯಾಗ್ ಮೋಡ್‌ನೊಂದಿಗೆ ನಥಿಂಗ್ ಎಕ್ಸ್ ಆಪ್ ಮೂಲಕ ಶ್ರವಣ ಪರೀಕ್ಷೆಯನ್ನು ಮಾಡಲಾಗಿದ್ದು, ವೈಯಕ್ತಿಕ ಸೌಂಡ್ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ.
ಪ್ರೊಫೈಲ್ ಅನ್ನು ಸೆಟ್ ಮಾಡಿದ ಬಳಿಕ ನಥಿಂಗ್ ಇಯರ್ (2) ಸೂಕ್ತ ಧ್ವನಿ ಗುಣಮಟ್ಟಕ್ಕಾಗಿ ನೈಜ ಸಮಯದಲ್ಲಿ ಈಕ್ವಲೈಜರ್ ಸೆಟ್ಟಿಂಗ್‌ಗಳನ್ನು ಮಾಡಿಕೊಳ್ಳಬಹುದು. ಗೂಗಲ್ ಫಾಸ್ಟ್ ಪೇರ್ ಮತ್ತು ಡ್ಯುಯಲ್ ಸಂಪರ್ಕ ಬೆಂಬಲವನ್ನು ಈ ನಥಿಂಗ್ ಇಯರ್ (2) ಬಳಕೆದಾರರಿಗೆ ಎರಡು ಡಿವೈಸ್‌ಗಳಿಗೆ ಏಕಕಾಲದಲ್ಲಿ ಸಂಪರ್ಕಿಸಲು ಮತ್ತು ಸಂಗೀತವನ್ನು ಪ್ಲೇ ಮಾಡಲು ಅನುಕೂಲವಾಗುತ್ತದೆ.
ನಥಿಂಗ್ ಇಯರ್‌ಬಡ್ಸ್ 485mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಇಯರ್‌ಬಡ್ 33mAh ಸೆಲ್‌ನಲ್ಲಿ ಒಳಗೊಂಡಿದೆ. ಹಾಗೆಯೇ ಒಂದು ಪೂರ್ಣ ಚಾರ್ಜ್‌ನಲ್ಲಿ ಇವುಗಳನ್ನು 6.3 ಗಂಟೆಗಳ ವರೆಗೆ ಬಳಕೆ ಮಾಡಿಕೊಳ್ಳಬಹುದು ಎಂದು ನಥಿಂಗ್ ಸಂಸ್ಥೆ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಫ್ಲಿಪ್‌ಕಾರ್ಟ್, ಮೈಂತ್ರಾ ಸೇರಿದಂತೆ ಇತರೆ ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಖರೀದಿಸಬಹುದಾಗಿದೆ ನಥಿಂಗ್ ಇಯರ್ ಬಡ್ಸ್ (2)ಗೆ 9,999 ರೂ. ಗಳ ಬೆಲೆ ನಿಗದಿಪಡಿಸಲಾಗಿದೆ.