Petrol-CNG Car : ಅತ್ಯುತ್ತಮ ಮೈಲೇಜ್ ‌ನೀಡುವ10 ಲಕ್ಷ ರೂ.ದೊಳಗಿನ ಪೆಟ್ರೋಲ್, ಸಿಎನ್ ಜಿ ಕಾರುಗಳಿವು!

Petrol-CNG Car: ಜನಪ್ರಿಯ ಕಾರು (car) ತಯಾರಿಕಾ ಕಂಪನಿಗಳು ಮಾರುಕಟ್ಟೆಗೆ ಹಲವು ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಅತ್ಯುತ್ತಮ ವೈಶಿಷ್ಟ್ಯತೆ, ಕಣ್ಮನ ಸೆಳೆಯುವ ಬಣ್ಣಗಳ ಆಯ್ಕೆ ಹೊಂದಿರುವ ಕಾರುಗಳನ್ನು ಪರಿಚಯಿಸುತ್ತಿದೆ. ಹಾಗೆಯೇ ಜನರು ಆಕರ್ಷಿತರಾಗಿ ಕಾರು ಕೊಳ್ಳಲು ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡಿದರೂ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಏನೂ ತಗ್ಗಿಲ್ಲ. ಹೌದು, ಅತ್ಯುತ್ತಮ ಮೈಲೇಜ್ ‌ನೀಡುವ 10 ಲಕ್ಷ ರೂ.ದೊಳಗಿನ ಪೆಟ್ರೋಲ್, ಸಿಎನ್ ಜಿ ಕಾರುಗಳ (Petrol-CNG Car) ಪಟ್ಟಿ ಇಲ್ಲಿದೆ.

ಹುಂಡೈ ಔರಾ (Hyundai aura): ಜಾಗತಿಕ ಮಾರುಕಟ್ಟೆಯಲ್ಲಿ ಹ್ಯುಂಡೈ (Hyundai) ಕಾರುಗಳನ್ನು ಪ್ರತಿಯೊಬ್ಬ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಹ್ಯುಂಡೈ ಔರಾ ಐದು ಪೆಟ್ರೋಲ್ ಮತ್ತು ಎರಡು CNG ರೂಪಾಂತರಗಳಲ್ಲಿ ಬರುತ್ತದೆ. ಇದು ಸ್ಟಾರಿ ನೈಟ್ ಹಾಗೂ ಆಕ್ವಾ ಟೀಲ್ ಸೇರಿದಂತೆ ಆರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ನವೀಕರಿಸಿದ ಹುಂಡೈ ಔರಾ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. CNG ಮೋಡ್ ನಲ್ಲಿ 69 PS ಪವರ್, 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿ ಲಭ್ಯವಾಗಲಿದೆ.

ಇದು 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, TPMS (ಟೈರ್ ಪ್ರೆಜರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಔರಾ CNG 25kmpl ಮೈಲೇಜ್ ನೀಡುತ್ತದೆ. S ಮತ್ತು SX CNG ರೂಪಾಂತರಗಳನ್ನು ಕ್ರಮವಾಗಿ 8.10 ಲಕ್ಷ ರೂ. ನಿಂದ 8.87 ಲಕ್ಷ ರೂ. ಬೆಲೆಗಳಲ್ಲಿ ನೀಡಲಾಗುತ್ತಿದೆ.

ಮಾರುತಿ ಸುಜುಕಿ ವ್ಯಾಗನ್-R: ಮಾರುತಿ ಸುಜುಕಿ ವ್ಯಾಗನ್ ಆರ್ (Maruti Suzuki Wagon R ) 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಗಳ ಆಯ್ಕೆಗಳನ್ನು ಹೊಂದಿವೆ. ಈ ಕಾರನ್ನು ಹೊಸ ಪ್ಲಾಟ್ಫಾರ್ಮ್ನಲ್ಲಿ ತಯಾರಿಸಲಾಗಿದ್ದು, ಈ ಮಾದರಿಯು ಮಾರುತಿ ಸುಜುಕಿ ಸ್ವಿಫ್ಟ್ನಂತಹ ಇತರ ಉನ್ನತ-ವಿಭಾಗದ ಕಾರುಗಳಿಗೆ ಬೇಸ್ ರೀತಿ ಕಾರ್ಯ ನಿರ್ವಹಿಸುತ್ತದೆ. ಮಾರುತಿ ಸುಜುಕಿ ವ್ಯಾಗನ್ಆರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ವ್ಯಾಗನ್ಆರ್ 5-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟವಾಗುತ್ತಿದೆ. ವ್ಯಾಗನ್‌ಆರ್ 1.0L ಪೆಟ್ರೋಲ್ 24.35kmpl (ಮ್ಯಾನುಯಲ್) ಮತ್ತು 25.19kmpl (ಆಟೋಮ್ಯಾಟಿಕ್) ಮೈಲೇಜ್ ನೀಡುತ್ತದೆ. ಇದರ 1.2L ಪೆಟ್ರೋಲ್ ಆವೃತ್ತಿಯು 23.56kmpl (ಮ್ಯಾನುಯಲ್) ಮತ್ತು 24.43kmpl (ಆಟೋಮ್ಯಾಟಿಕ್) ಮೈಲೇಜ್ ನೀಡುತ್ತದೆ. ವ್ಯಾಗನ್‌ಆರ್ ಸಿಎನ್‌ಜಿ ಎಲ್‌ಎಕ್ಸ್‌ಐ ಮತ್ತು ವಿಎಕ್ಸ್‌ಐ ರೂಪಾಂತರಗಳು 34.05 ಕಿಮೀ/ಕೆ.ಜಿ ಮೈಲೇಜ್ ನೀಡುತ್ತವೆ. ಇದರ ಬೆಲೆಯು 6.43 ಲಕ್ಷ ಹಾಗೂ 6.88 ಲಕ್ಷ ರೂ. ಇದೆ.

ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಗ್ರಾಹಕರ ಆಯ್ಕೆಗೆ ಪೂರಕವಾಗುವ ಅನೇಕ ವಿಶೇಷತೆ ಒಳಗೊಂಡ ಅತ್ಯುತ್ತಮ ಸಿಟಿ ಕಾರುಗಳಲ್ಲಿ ಒಂದಾಗಿದೆ. ಈ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರು 1.0-ಲೀಟರ್ NA ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಈ ಎಂಜಿನ್ 66.6bhp ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಕೂಡ ಒಳಗೊಂಡಿದೆ. ಸೆಲೆರಿಯೊ VXi AMT ರೂಪಾಂತರವು 26.68kmpl ಮೈಲೇಜ್ ನೀಡುತ್ತದೆ. ಇದರ ಬೆಲೆ 6.37 ಲಕ್ಷ ರೂ. ಇದೆ. ಹ್ಯಾಚ್‌ಬ್ಯಾಕ್ ಮಾಡೆಲ್ ಪ್ರಸ್ತುತ ರೂ. 5.35 ಲಕ್ಷದಿಂದ ರೂ. 7.13 ಲಕ್ಷ ಬೆಲೆಯಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಬಲೆನೊ: ಕಳೆದ ವರ್ಷ ಬಿಡುಗಡೆಯಾದ ಮಾರುತಿ ಸುಜುಕಿ ಬಲೆನೊ CNG, 1.2L, 4-ಸಿಲಿಂಡರ್ K12N ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಮತ್ತು ಫ್ಯಾಕ್ಟರಿ-ಫಿಟ್ಡ್ CNG ಕಿಟ್‌ನೊಂದಿಗೆ ಲಭ್ಯವಿದೆ. 77.5bhp ಮತ್ತು 98.5Nm ಟಾರ್ಕ್‌ನ ಹೊರಹಾಕುತ್ತದೆ. ಬಲೆನೊ CNG 30.61km/kg ಮೈಲೇಜ್ ನೀಡುತ್ತದೆ ಎಂದು ಕಾರು ತಯಾರಕರು ಹೇಳುತ್ತಾರೆ. ಹ್ಯಾಚ್‌ಬ್ಯಾಕ್ 55-ಲೀಟರ್‌ಗಳ CNG ಟ್ಯಾಂಕ್ ಅನ್ನು ಹೊಂದಿದೆ. ಮಾರುತಿ ಸುಜುಕಿ ಬಲೆನೊ (Maruti Suzuki Baleno) 18,592 ಯುನಿಟ್ಗಳನ್ನು (ಶೇ.48ಷ್ಟು ವಾರ್ಷಿಕ ಬೆಳವಣಿಗೆ) ಮಾರಾಟವಾಗಿದೆ. ಡೆಲ್ಟಾ ಮತ್ತು ಝೀಟಾ ಎಂಬ ಎರಡು CNG ರೂಪಾಂತರಗಳಿದ್ದು, ಇವು ರೂ. 8.30 ಲಕ್ಷ ಮತ್ತು ರೂ. 9.23 ಲಕ್ಷ ಬೆಲೆ ಹೊಂದಿವೆ.

ಟಾಟಾ ಟಿಯಾಗೊ: ಟಾಟಾ ಟಿಯಾಗೊ (tata Tiago) ಹ್ಯಾಚ್‌ಬ್ಯಾಕ್ ಆರು ರೂಪಾಂತರಗಳಲ್ಲಿ ನೀಡಲಾಗುತ್ತಿದೆ. ಈ ಎಲ್ಲಾ ರೂಪಾಂತರಗಳು 1.2L, 3-ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿವೆ. ಹ್ಯಾಚ್ ಮಾದರಿಯ ಶ್ರೇಣಿಯು ಐದು CNG ರೂಪಾಂತರಗಳನ್ನು ಹೊಂದಿದೆ. ಇದು 86bhp ಮತ್ತು 113Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. CNG ಕಿಟ್‌ನೊಂದಿಗೆ, ಪೆಟ್ರೋಲ್ ಮೋಟಾರ್ 73bhp ಮತ್ತು 95Nm ಟಾರ್ಕ್ ಉತ್ಪಾದಿಸುತ್ತದೆ. Tiago CNG 26.49km/kg ಇಂಧನ ದಕ್ಷತೆಯನ್ನು ನೀಡುತ್ತದೆ. ಇದರ ಬೆಲೆಗಳು ರೂ. 6.44 ಲಕ್ಷ ದಿಂದ ರೂ. 8.05 ಲಕ್ಷದವೆರೆಗೆ ಇದೆ.

ಇದನ್ನೂ ಓದಿ: RBI Recruitment 2023: RBI ನಲ್ಲಿ ಉದ್ಯೋಗವಕಾಶ! ಆಸಕ್ತರು ಈ ಮಾಹಿತಿ ಓದಿ!

Leave A Reply

Your email address will not be published.