Actress Avantika Shetty : ರಂಗಿತರಂಗ ನಟಿ ಆವಂತಿಕಾ ಶೆಟ್ಟಿ ಐದು ವರ್ಷಗಳ ಬಳಿಕ ಭರ್ಜರಿ ಎಂಟ್ರಿಗೆ ರೆಡಿ!
Actress Avantika Shetty : ಕನ್ನಡದ ರಂಗಿತರಂಗ ಖ್ಯಾತಿ ನಟಿ ಆವಂತಿಕ ಶೆಟ್ಟಿ (Actress Avantika Shetty) ಮತ್ತೆ ಕನ್ನಡ ಸಿನಿತೆರೆಯಲ್ಲಿ (Kannada film industry) ಕಾಣಿಸಿಕೊಳ್ಳಲುತ್ತಿದ್ದಾರೆ. ನಾನು ಕನ್ನಡ ಚಿತ್ರರಂಗಕ್ಕೆ ಮತ್ತೆ ಆಗಮಿಸಲಿದ್ದೇನೆ ನನ್ನ ಕನಸು (dream) ನನಸಾಗುವ ಭರವಸೆಯಲ್ಲಿದ್ದೇನೆ ಎಂದು ತನ್ನ ಸಾಮಾಜಿಕ ಜಾಣತಾಣದಲ್ಲಿ (social media) ಬರೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ (Sandalwood) ಆವಂತಿಕಾ ಶೆಟ್ಟಿ ಹೆಚ್ಚು ಸಿನಿಮಾಗಳನ್ನು ಮಾಡದಿದ್ದರೂ ತನ್ನ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಅವರು ಮಾಡಿರೋ ಸ್ವಲ್ಪ ಸಿನಿಮಾಗಳು ಸಾಕಷ್ಟು ಸದ್ದು ಮಾಡಿರುವುದಂತೂ ನಿಜ.
ರಾಜು ಕನ್ನಡ ಮೀಡಿಯಂ (Raju Kannada medium) ಸಿನಿಮಾ ಅಂತೂ ಸಕ್ಕತ್ತಾಗಿ ಸದ್ದು ಮಾಡಿದೆ. ಆದ್ರೆ ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಗುರುನಂದನ್ (Guru Nandan) ಜೊತೆಗೆ ಆವಂತಿಕ ನಟಿಸಿದ್ದರು. ಆದರೆ ಈ ಚಿತ್ರದ ರಿಲೀಸ್ (release) ಸಮಯದಲ್ಲಿ ಸ್ವಲ್ಪ ಗಲಿಬಿಲಿಯಾಗಿ ಹೋಯಿತು. ಇದರಿಂದ ತುಂಬಾನೇ ಬೇಸರವನ್ನು ವ್ಯಕ್ತಪಡಿಸಿದ್ದ ಆವಂತಿಕಾ ಶೆಟ್ಟಿ ಮತ್ತೆ ಕನ್ನಡ ಸಿನಿತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಆವಂತಿಕಾ ಶೆಟ್ಟಿ ರಂಗಿತರಂಗ (Rangita Ranga) ಚಿತ್ರದ ಮೂಲಕ ಕನ್ನಡ ಸಿನಿರಂಗದಲ್ಲಿ ಗುರುತಿಸಿಕೊಂಡ ನಟಿ ಎನ್ನಬಹುದು. ತಮ್ಮ ವಿಶೇಷ ಅಭಿನಯದ ಮೂಲಕ ತನ್ನ ಅಭಿಮಾನಿಗಳ ಗಮನ ಸೆಳೆದ ನಟಿ ಈಕೆ. ಈ ಸಿನಿಮಾದ ನಂತರ ರಿಯಲ್ ಸ್ಟಾರ್ ಉಪೇಂದ್ರ (real star Upendra) ಅಭಿನಯದ ಕಲ್ಪನಾ-2 ಸಿನಿಮಾದಲ್ಲಿ ನಟಿಸಿದ್ದರು. ರಂಗಿತರಂಗ ಮತ್ತು ರಾಜರಥ ಟೀಮ್ ಜೊತೆಗೆ ತುಂಬಾನೇ ಕ್ಲೋಸ್ ಆಗಿರುವ ಆವಂತಿಕಾ ಶೆಟ್ಟಿ, ಈ ಚಿತ್ರಗಳ ಚಿತ್ರೀಕರಣದ ದಿನವನ್ನು ನೆನಪಿಸಿಕೊಂಡು ತುಂಬಾನೇ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ರಂಗಿತರಂಗ ಸಿನಿಮಾದ ಆಡಿಯೋ ರಿಲೀಸ್ ಆಗಿತ್ತು ಅಂತಲೂ ಆವಂತಿಕಾ ಹೇಳಿಕೊಂಡಿದ್ದಾರೆ.
ರಾಜರಥ ಚಿತ್ರ (Rajarata Film) ಸಹ ತುಂಬಾನೇ ವಿಭಿನ್ನವಾಗಿದೆ. ಈ ಚಿತ್ರ 2018 ಮಾರ್ಚ್ 23 ರಂದು ರಿಲೀಸ್ (release) ಆಗಿತ್ತು. ಇಂತಹ ಚಿತ್ರಗಳನ್ನು ಕೊಟ್ಟ ಕನ್ನಡ ಚಿತ್ರರಂಗದಲ್ಲಿ (Kannada industry)ಅತ್ಯುತ್ತಮ ವಿಭಿನ್ನ ರೀತಿಯ ಅಭಿರುಚಿಯನ್ನು ಹೊಂದಿರುವ ಫಿಲ್ಮಂ ಮೇಕರ್ಸ್ ಇದ್ದಾರೆ. ಇವರಿಂದ ನಾನು ನನ್ನ ಜೀವನದಲ್ಲಿ ಮೊದಲ ಸಕ್ಸಸ್ (first success) ಕಂಡಿದ್ದೇನೆ ಅಂತಲೂ ತನ್ನ ಅಭಿಮಾನಿಗಳ (fans) ಬಳಿ ತಿಳಿಸಿದ್ದಾರೆ. ಆವಂತಿಕಾ ಶೆಟ್ಟಿ ಕನ್ನಡ ಸಿನಿಮಾಗಳಲ್ಲಿ (Kannada film industry) ಅಭಿನಯಿಸದೇ ಐದು ವರ್ಷಗಳೇ ಕಳೆದು ಹೋಗಿದೆ. ಇದೀಗ ಮತ್ತೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸೋ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ತಮ್ಮ ಕನಸು ಬೇಗ ನನಸಾಗುತ್ತದೆ ಅನ್ನೋ ಭರವಸೆಯನ್ನು ಕೂಡ ಇಟ್ಟುಕೊಂಡಿದ್ದೇನೆ. ಆದಷ್ಟು ಬೇಗ ನನಸಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ (social media) ಬರೆದು ಕೊಂಡಿದ್ದಾರೆ.