Farooq Abdullah : ಶ್ರೀರಾಮ ಹಿಂದೂಗಳಿಗೆ ಮಾತ್ರ ದೇವರಲ್ಲ, ಎಲ್ಲರಿಗೂ ದೇವರು – ಫಾರೂಕ್​ ಅಬ್ದುಲ್ಲಾ

Farooq Abdullah :ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ (Farooq Abdullah) ಭಗವಾನ್ ಶ್ರೀರಾಮ(Lord Shri Ram) ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ, ಎಲ್ಲರಿಗೂ ದೇವರು ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಮಾಜಿ ಮುಖ್ಯಮಂತ್ರಿ ಡಾ.ಫಾರೂಕ್ ಅಬ್ದುಲ್ಲಾ ಪಕ್ಷವು ಕೇವಲ ಮತಕ್ಕಾಗಿ ಶ್ರೀರಾಮನ ಹೆಸರನ್ನು ಬಳಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಮಾತನಾಡಿದ್ದಾರೆ. ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ, ಬಿಜೆಪಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಶ್ರೀರಾಮನ ಹೆಸರನ್ನು ಬಳಸುತ್ತಿದೆ ಎಂದು ಗುರುವಾರ ಪ್ಯಂಥರ್ಸ್ ಪಾರ್ಟಿ ಆಯೋಜಿಸಿದ್ದ ಯಾರ್ಲಿ ಕುರಿತು ಮಾತನಾಡುವಾಗ ತಿಳಿಸಿದ್ದಾರೆ.

ಭಗವಾನ್ ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ, ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳಿಗೂ ದೇವರು ಎಂದರು. ರಾಮನ ಮೇಲೆ ಕ್ರಿಶ್ಚಿಯನ್ ಆಗಿರಬಹುದು, ಅಮೆರಿಕನ್ ಅಥವಾ ರಷ್ಯನ್ ಆಗಿರಬಹುದು. ಯಾರೇ ಆಗಿದ್ದರೂ, ರಾಮನ ಮೇಲೆ ನಂಬಿಕೆ ಇಟ್ಟರೆ ಅವರಿಗೆಲ್ಲ ದೇವರೇ ಎಂದು ಹೇಳಿದರು. ರಾಮ ಕೇವಲ ಹಿಂದೂಗಳಿಗೆ ದೇವರು ಎಂದು ನಿಮ್ಮ ಮನಸಿನಲ್ಲಿದ್ದರೆ ಅದನ್ನು ತೆಗೆದು ಹಾಕಿ, ರಾಮನ ಹೆಸರು ಹೇಳಿಕೊಂಡು ಲಾಭ ಪಡೆಯಲು ಬಯಸುತ್ತಿದ್ದಾರೆ. ಅವರು ರಾಮನ ಮೇಲೆ ಪ್ರೀತಿ ಇಲ್ಲ ಇಟ್ಟಿಲ್ಲ ಕೇವಲ ಅಧಿಕಾರದ ಮೇಲೆ ಪ್ರೀತಿ ಇಟ್ಟು ರಾಮನ ಹೆಸರು ಬಳಸುತ್ತಿದ್ದಾರೆ ಎಂದರು.

ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಜಮ್ಮು ಅಲ್ಲಿಯೂ ಕೂಡ ರಾಜ್ಯ ಸ್ಥಾನಮಾನ ವನ್ನು ನೀಡಿ ಸಾರ್ವತ್ರಿಕ ಚುನಾವಣೆ ಅನ್ನು ನಡೆಸಬೇಕು, ಯಾಕೆ ಕೇಂದ್ರ ಸರ್ಕಾರ ಚುನಾವಣೆ ನೆಡೆಸುತ್ತಿಲ್ಲ ಎಂದು ಪ್ರಶ್ನಿಸಿದರು? ಜಮ್ಮು ಕಾಶ್ಮೀರದ ಸ್ಥಾನಮಾನವನ್ನು ಮರು ಸ್ಥಾಪಿಸಬೇಕು ಎಂದರು. ಹಾಗೂ ಬಿಜೆಪಿಯೇತರ ಪಕ್ಷಗಳ ನಡುವಿನ ಒಗ್ಗಟ್ಟಿನ ಕುರಿತು ಪ್ರತಿಕ್ರಿಯಿಸಿ, “ನಮ್ಮ ಒಗ್ಗಟ್ಟಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅದು ಯಾವುದೇ ಆಗಿದ್ದರೂ, ಕೂಡ ಅಡ್ಡಿ ಬರುವುದಿಲ್ಲ. ನಾವು ಕೇವಲ ಜನರಿಗಾಗಿ ಹೋರಾಡುತ್ತೇವೆ ಮತ್ತು ಅವರಿಗಾಗಿ ಸಾಯುತ್ತೇವೆ. ನಾವೆಲ್ಲರೂ ಒಗ್ಗಟ್ಟಿನಿಂದಲೇ ಇರುತ್ತೇವೆ’ ಎಂದು ಹೇಳಿದರು. ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಿ ಎಂದು ಕೇಳಿಕೊಂಡರು.

 

Leave A Reply

Your email address will not be published.