Exchange Old AC With New One Offer : ನಿಮ್ಮಲ್ಲಿ ಹಳೆ ಎಸಿ ಇದೆಯಾ? ಅದನ್ನು ಕೊಟ್ಟು ಈ ಹೊಸ ಎಸಿ ನಿಮ್ಮದಾಗಿಸಿ!

Flipkart AC exchange offer : ಬಿರುಬಿಸಿಲಿನ ಬೇಗೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಕರಾವಳಿಯ ಪರಿಸ್ಥಿತಿ ಹೇಳುವುದೇ ಬೇಡ!!ಎಸಿ(AC), ಕೂಲರ್ (Cooler) ಇಲ್ಲದೇ ಬದುಕಲು ಸಾಧ್ಯವೇ ಇಲ್ಲವೇನೋ ಎಂಬಂತೆ ಸೆಖೆಯ ಝಳದಿಂದ ಪಾರಾಗಲು ಜನರು ಒದ್ದಾಡುತ್ತಿದ್ದಾರೆ. ಈ ನಡುವೆ ಬೇಸಿಗೆಯ ಕಾವು ಹೆಚ್ಚಿದಂತೆ ಫ್ಯಾನ್, ಎಸಿ, ಕೂಲರ್ ಗಳಿಗೆ ಎಲ್ಲಿಲ್ಲದ ಬೇಡಿಕೆ. ಡಿಮ್ಯಾಂಡ್ ಹೆಚ್ಚಿದಂತೆ ಬೆಲೆ ಏರಿಕೆಯ ಬಿಸಿ ಜನರನ್ನು ತಟ್ಟುತ್ತಿದೆ. ನೀವೇನಾದರೂ ಈ ಪರಿಸ್ಥಿತಿ ಎದುರಿಸುತ್ತಿದ್ದರೆ ಚಿಂತಿಸಬೇಕಾಗಿಲ್ಲ. ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ.
ನಿಮ್ಮ ಹಳೆಯ ACಯನ್ನು ಬದಲಾಯಿಸಿ ಹೊಸ ಎಸಿ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಈಗಲೇ ಈ ಕಾರ್ಯವನ್ನು ಮಾಡಿ ಮುಗಿಸಿ. ಯಾಕೆ ಅಂತೀರಾ??
ಹೊಸ ಎಸಿಯನ್ನು ಖರೀದಿ ಮಾಡಲು ಹೆಚ್ಚು ಹಣ ಬೇಕಾಗುತ್ತದೆ. ಆದರೆ ಇದೀಗ ಸೂಪರ್ ಡೂಪರ್ ಆಫರ್ ಒಂದು ನಿಮಾಗಾಗಿ ಎದುರು ನೋಡುತ್ತಿದೆ. ಹೌದು!!ನಿಮ್ಮ ಹಳೆಯ ACಯನ್ನು ಕೊಟ್ಟು ಹೊಸ ಎಸಿಯನ್ನು ಮನೆಗೆ ತರುವ ವಿಶೇಷ ಆಫರ್ (Flipkart AC exchange offer)ಅನ್ನು ಫ್ಲಿಪ್‌ಕಾರ್ಟ್ (Flipkart) ಪರಿಚಯಿಸಿದೆ. ಹೀಗಾಗಿ, ಫ್ಲಿಪ್ ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಎಸಿಯನ್ನು ಎಕ್ಸ್ಚೇಂಜ್ ಮಾಡುವ( Exchange Old AC With New One Offer)ಕಾರ್ಯಕ್ರಮವನ್ನು ಪರಿಚಯಿಸಿದ್ದು, ನೀವು ಕೂಡ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ.

ಹಾಗಿದ್ರೆ, ಫ್ಲಿಪ್‌ಕಾರ್ಟ್ ಏರ್ ಕಂಡೀಷನರ್ ಎಕ್ಸ್‌ಚೇಂಜ್(Flipkart Air Conditioner Exchange ) ಪ್ರೋಗ್ರಾಂ ಅನ್ನು ಹೇಗೆ ಬಳಸೋದು ಅಂತೀರಾ ?

ಮೊದಲು, ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಿ ಇಲ್ಲವೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್ ತೆರೆದುಕೊಳ್ಳಿ. ಆ ಬಳಿಕ, ನೀವು ಖರೀದಿ ಮಾಡಲು ಇಚ್ಛಿಸುವ ಏರ್ ಕಂಡಿಷನರ್ ಅನ್ನು ಸರ್ಚ್ ಮಾಡಿಕೊಳ್ಳಿ. ಆಗ ನಿಮಗೆ ಪ್ರಾಡಕ್ಟ್ ಪೇಜ್ ನಲ್ಲಿ, ಏರ್ ಕಂಡಿಷನರ್ ಎಕ್ಸ್ಚೇಂಜ್ ಪ್ರೊಗ್ರಾಮ್ ಆಯ್ಕೆ ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಹಳೆಯ AC ಯ ಬ್ರ್ಯಾಂಡ್, ಮಾಡೆಲ್ , ವರ್ಷ ಮುಂತಾದ ವಿವರಗಳನ್ನು ನಮೂದಿಸಬೇಕು.

ಅಗತ್ಯ ವಿವರಗಳನ್ನು ಭರ್ತಿ ಮಾಡಿದ ಬಳಿಕ, ವಿನಿಮಯ ಮೌಲ್ಯವನ್ನು ಲೆಕ್ಕಹಾಕಿ ಸ್ಕ್ರೀನ್ ಮೇಲೆ ಕಂಡುಬರುತ್ತದೆ. ಇದರ ನಂತರ ಪ್ರೋಸೆಸ್ ಮಾಡಬೇಕಾಗಿದ್ದು, ಆರ್ಡರ್ ಮಾಡಿದ ನಂತರ, Flipkart ನಿಂದ ಕಾಂಫರ್ಮೆಶನ್ ಇಮೇಲ್ ಮತ್ತು SMS ಬರಲಿದೆ. ಈ ಪ್ರಕ್ರಿಯೆ ಬಳಿಕ, ನಿಮ್ಮ ಹಳೆಯ AC ಅನ್ನು ಅನ್‌ಇನ್‌ಸ್ಟಾಲ್ ಮಾಡಲು Flipkart ಕಡೆಯಿಂದ ಟೆಕ್ನಿಷಿಯನ್ ಬರುತ್ತಾರೆ. ಟೆಕ್ನಿಷಿಯನ್ ಹಳೆಯ ಎಸಿಯನ್ನು ಉಚಿತವಾಗಿ ಅನ್‌ಇನ್‌ಸ್ಟಾಲ್ ಮಾಡಿ ಕೊಡುತ್ತಾರೆ. ಆದರೆ, ಇಲ್ಲಿ ಗಮನಿಸಬೇಕಾದ ವಿಚಾರ ಏನಪ್ಪಾ ಅಂದರೆ, ಅನ್‌ಇನ್‌ಸ್ಟಾಲ್ ಮಾಡುವ ದಿನದಂದು, ವಿನಿಮಯ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಹಳೆಯ AC ಯ ಸ್ಥಿತಿಯನ್ನು ಪರಿಶೀಲನೆ ನಡೆಸಲಾಗುತ್ತದೆ.

ಪರಿಶೀಲನೆ ಪೂರ್ಣಗೊಂಡ ನಿಮಗೆ ಅನ್ ಇನ್ಸ್ಟಾಲ್ ಮೆಂಟ್ ಸರ್ಟಿಫಿಕೆಟ್ (Uninstallment Certificate) ಸಿಗಲಿದೆ. ಹೊಸ AC ಯ ವಿತರಣೆಯ ಸಮಯದಲ್ಲಿ ಈ ಸರ್ಟಿಫಿಕೆಟ್ ಅಗತ್ಯವಿರುವುದರಿಂದ ಅದನ್ನು ಭದ್ರವಾಗಿ ಇರಿಸುವುದು ಉತ್ತಮ. ಆ ಬಳಿಕ, ಡೆಲಿವರಿ ಏಜೆಂಟ್ ಹೊಸ AC ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಟೆಕ್ನಿಷಿಯನ್ ನೀಡಿದ ಅನ್ ಇನ್ಸ್ಟಾಲ್ ಮೆಂಟ್ ಸರ್ಟಿಫಿಕೆಟ್ ಅನ್ನು ವಿತರಣಾ ಏಜೆಂಟ್ ಪರಿಶೀಲಿಸಿ, ಚೆಕ್‌ಗಳು ಹೊಂದಾಣಿಕೆಯಾದಲ್ಲಿ, ಡೆಲಿವರಿ ಏಜೆಂಟ್ ಹೊಸ AC ಅನ್ನು ಡೆಲಿವರಿ ಮಾಡಿ, ಹಳೆಯ AC ಅನ್ನು ಸ್ವೀಕರಿಸುತ್ತಾರೆ.

ಫ್ಲಿಪ್‌ಕಾರ್ಟ್ ಸ್ಟ್ಯಾಂಡರ್ಡ್ ಇ- ವೇಸ್ಟ್ ರಿಸೈಕ್ಲಿಂಗ್ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎನ್ನಲಾಗಿದ್ದು, ಹೀಗಾಗಿ, ನೀವೂ ಕೂಡಾ ಹೊಸ AC ಖರೀದಿ ಮಾಡಲು ಚಿಂತನೆ ನಡೆಸಿದ್ದರೆ, ಹಳೆಯ ಎಸಿಯನ್ನು ಎಕ್ಸ್ಚೇಂಜ್ ಮಾಡುವುದಾದರೆ, ಈ ಕಾರ್ಯಕ್ರಮದ ಮೂಲಕ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಲು ಅವಕಾಶವಿದ್ದು, ಇದಕ್ಕಾಗಿ Flipkart ಹೊರತಂದಿರುವ ಎಕ್ಸ್ಚೇಂಜ್ ಪ್ರೋಗ್ರಾಮ್ ನಲ್ಲಿ ಭಾಗಿಯಾಗಬೇಕಾಗುತ್ತದೆ.

ಇದನ್ನೂ ಓದಿ: Cadaver: 9 ವರ್ಷಗಳ ಹಿಂದೆ ಸಮಾಧಿಯಾದ ವ್ಯಕ್ತಿ ಮತ್ತೆ ಪ್ರತ್ಯಕ್ಷ!! ಏನಿದು ಚಮತ್ಕಾರ?

Leave A Reply

Your email address will not be published.