Sri Lanka: ಈ ದೇಶಕ್ಕೆ ಭೇಟಿ ನೀಡುವ ಮೊದಲು ಕೆಲವೊಂದು ರಹಸ್ಯಗಳನ್ನು ತಿಳಿದುಕೊಂಡರೆ ಉತ್ತಮ!
Sri Lanka: ಪ್ರವಾಸ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!! ಪ್ರವಾಸ (Tour)ಎಂದರೇ ಸಾಕು ಮೈಮನವೆಲ್ಲ ಪುಳಕಗೊಳ್ಳುತ್ತದೆ. ಮನೆಯವರ, ಸ್ನೇಹಿತರ ಜೊತೆಗೆ ಖುಷಿಯಾಗಿ ಕಾಲ ಕಳೆಯುವ ಸುಮಧುರ ಅನುಭವಗಳ ಸರಮಾಲೆಯನ್ನು ನೆನಪಿನ ಬುತ್ತಿಯಲ್ಲಿ ಕೂಡಿಡಲು ಪ್ರವಾಸ ಅನುವು ಮಾಡಿಕೊಡುವುದು ಸುಳ್ಳಲ್ಲ. ನೀವು ಶ್ರೀಲಂಕಾಗೆ(Sri Lanka( ಹೋಗಬೇಕು ಎಂದುಕೊಂಡಿದ್ದೀರಾ?? ಹಾಗಾದ್ರೆ ಅಲ್ಲಿನ ಕೆಲವೊಂದಿಷ್ಟು ರಹಸ್ಯಗಳ ಜೊತೆಗೆ ಸ್ಥಳಗಳ ಬಗ್ಗೆ ನೀವು ತಿಳಿದುಕೊಂಡಿದ್ದರೆ ಉತ್ತಮ.
ಪ್ರಪಂಚದ ಅತ್ಯಂತ ಸುಂದರವಾದ ದ್ವೀಪ ರಾಷ್ಟ್ರವಾಗಿರುವ ಶ್ರೀಲಂಕಾ ಪ್ರವಾಸಿಗರ ಮನಸೆಳೆಯುವ ದ್ವೀಪವಾಗಿದೆ. ರಾಮಾಯಣದ ಜೊತೆಗೆ ಬೆಸೆದುಕೊಂಡಿರುವ ಶ್ರೀಲಂಕಾ ಭಾರತೀಯರ ಮನದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದರೂ ತಪ್ಪಾಗಲಾರದು. ಪ್ರವಾಸಿಗರ ಕಣ್ಮನ ಸೆಳೆಯುವ ಕರಾವಳಿ ತೀರಗಳು, ದಟ್ಟವಾದ ಕಾಡು ಮತ್ತು ಬೆಟ್ಟಗಳನ್ನು ಶ್ರೀಲಂಕಾ ಒಳಗೊಂಡಿದ್ದು, ಇನ್ನು ಭಾರತದಿಂದ ಸುಲಭವಾಗಿ ಶ್ರೀಲಂಕಾಕ್ಕೆ ತೆರಳಬಹುದು. ಅಷ್ಟೇ ಅಲ್ಲದೆ, ಶ್ರೀಲಂಕಾ(Sri Lanka) ಅನೇಕ ಕುತೂಹಲಕಾರಿ ವಿಚಾರಗಳನ್ನು ಒಳಗೊಂಡಿದೆ.
ಪ್ರಾಚೀನ ಪರಂಪರೆಯ ಹೆಗ್ಗುರುತಾಗಿರುವ ಸಿಗರಿಯಾ ಇದನ್ನು ‘ಲಯನ್ ರಾಕ್’ ಎಂದು ಕೂಡ ಕರೆಯಲಾಗುತ್ತದೆ. ಸಿಗರಿಯಾ ಪರ್ವತ ಯುನೆಸ್ಕೋ(Unesco) ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಹೆಸರು ಪಡೆದಿದೆ. ಈ ಪ್ರಾಚೀನ ಕಲ್ಲಿನ ಕೋಟೆಯು ದಂತಕಥೆಯೊಂದನ್ನ ಅರಹುತ್ತದೆ. ಹಿಂದೂಗಳ(Hindu) ಸಂಪತ್ತಿನ ದೇವರಾದ ಕುಬೇರನಿಂದ ಈ ತಾಣವು ನಿರ್ಮಿಸಲಾಗಿದೆ ಎನ್ನಲಾಗಿದೆ. ಇದು ಶ್ರೀಲಂಕಾದ ಸಂಕೇತಗಳಲ್ಲಿ ಒಂದಾಗಿದ್ದು, ಈ ಪ್ರಾಚೀನ ಕಲ್ಲಿನ ಕೋಟೆಯ ಮೇಲಿನಿಂದ ನಿಂತು ನೋಡಿದರೆ ಸುಂದರ ದೃಶ್ಯಗಳನ್ನು ಕಣ್ಣಾರೆ ನೋಡಬಹುದು.
ಶ್ರೀಲಂಕಾದ ರಾಜಧಾನಿಯಾಗಿರುವ( Capital of Sri Lanka)ಕೊಲಂಬೊ (Colombo)ಸುಮಾರು 2000 ವರ್ಷಗಳಷ್ಟು ಇತಿಹಾಸವನ್ನು ಸಾರುವುದಲ್ಲದೆ, ಇದೊಂದು ಸುಂದರವಾದ ಪ್ರಾಚೀನ ನಗರವಾಗಿದ್ದು ವಿಶಿಷ್ಟ ಶ್ರೀಮಂತ ಸಂಸ್ಕೃತಿಯ ಜೊತೆಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. ಕೊಲಂಬೊದ ಡೆಹಿವಾಲಾ-ಮೌಂಟ್ ಲ್ಯಾವಿನಿಯಾದಲ್ಲಿರುವ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ‘ನಮ್ಮ ಆಮೆಗಳ ಸಂರಕ್ಷಣಾ ಯೋಜನೆ’ ಮೂಲಕ ಆಮೆ ಮೊಟ್ಟೆಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಋತುವಿನಲ್ಲಿ ಸಮುದ್ರ ಆಮೆಗಳು ತಮ್ಮ ಮೊಟ್ಟೆಗಳನ್ನ ಇಡಲು ಇಲ್ಲಿಗೆ ಬರುತ್ತವಂತೆ.
ಬೌದ್ಧರ (Buddhism )ಪ್ರಮುಖ ಯಾತ್ರಾ ಸ್ಥಳವಾಗಿರುವ ಕ್ಯಾಂಡಿಯಲ್ಲಿರುವ ಟೆಂಪಲ್ ಆಫ್ ದಿ ಟೂತ್ ಶ್ರೀಲಂಕಾದ ಪ್ರಮುಖ ಬೌದ್ಧ ಸ್ಥಳವಾಗಿದೆ. ಶ್ರೀಲಂಕಾದ ಈ ಶ್ರೀ ದಳಿದ ಮಾಳಿಗಾವ(Sri Dalada Maligawa) ಪುರಾತನವಾದ ಆಲಯವಾಗಿದ್ದು, ನೂರಾರು ವರ್ಷಗಳಿಂದ ಹಲ್ಲಿನ ಅವಶೇಷವನ್ನು ಉಳಿಸಿಕೊಂಡು ಬರಲಾಗುತ್ತಿದೆ. ಈ ಆಲಯದಲ್ಲಿರುವ ಹಲ್ಲಿನ ಅವಶೇಷವು ಭಗವಾನ್ ಬುದ್ದನದು ಎಂಬ ನಂಬಿಕೆಯಿದೆ.
ಸಾಮಾನ್ಯವಾಗಿ ದ್ವೀಪ ರಾಷ್ಟ್ರಗಳ ಪ್ರವಾಸ ಕೈಗೊಂಡ ಸಂದರ್ಭ ಜನರು ಹೆಚ್ಚಾಗಿ ಅನ್ವೇಷಣೆ ಮಾಡುವುದು ರಮಣೀಯವಾದ ಕಡಲತೀರ ಎಂದರೆ ತಪ್ಪಾಗದು. ಕಡಲತೀರಗಳ ಪ್ರೇಮಿಗಳನ್ನು ಸಂತುಷ್ಟಗೊಳಿಸುವ ಮಿರಿಸ್ಸಾ ಶ್ರೀಲಂಕಾದ ಪ್ರಸಿದ್ಧ ತಾಣಗಳಲ್ಲಿ ಒಂದಾಗಿದೆ. ಶ್ರೀಲಂಕಾ ದ್ವೀಪ ರಾಷ್ಟ್ರದ ತ್ರಿಕೋನಮಲೈ ಬಳಿ ಮಾರ್ಚ್ ಮತ್ತು ಜುಲೈ ತಿಂಗಳ ನಡುವಲ್ಲಿ ನೂರಾರು ತಿಮಿಂಗಿಲಗಳು ಮತ್ತು ಡಾಲ್ಫಿನ್ಗಳು ಸಾಗರದ ನೀರಿನಲ್ಲಿ ಕುಣಿದು ಕುಪ್ಪಳಿಸುವ ದೃಶ್ಯ ನೋಡುವುದೇ ಚೆಂದ. ಅರಾಕ್ ಸಾಮಾನ್ಯವಾಗಿ ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಉತ್ಪಾದಿಸುವ ಬಟ್ಟಿ ಇಳಿಸಿದ ಮದ್ಯವಾಗಿದ್ದು, ಇದನ್ನು ತೆಂಗಿನ ಹೂವುಗಳು ಅಥವಾ ಕಬ್ಬಿನ ಹುದುಗಿಸಿದ ರಸದಿಂದ ಸಿದ್ದ ಪಡಿಸಲಾಗುತ್ತದೆ.ಅಷ್ಟೆ ಅಲ್ಲದೇ ಇದು ವಿಶೇಷವಾದ ಪರಿಮಳವನ್ನು ಹೊಂದಿದ್ದು, ಶ್ರೀಲಂಕಾದಲ್ಲಿ ಮಾತ್ರ ಇದನ್ನು ಸಂರಕ್ಷಿಸಲಾಗಿದೆಯಂತೆ.
ಪ್ರಪಂಚದ ಅತ್ಯಂತ ರಮಣೀಯ ರೈಲು ಪ್ರಯಾಣಗಳಲ್ಲಿ ಕ್ಯಾಂಡಿಯಿಂದ ಪಯಣಿಸುವ ರೈಲು ಪ್ರಯಾಣವು ಸುಂದರ ದೃಶ್ಯ ವೈಭವ ನೀಡುವುದು ಸುಳ್ಳಲ್ಲ. ರೈಲು ಬೆಟ್ಟಗಳ ಮೂಲಕ ಹಾದುಹೋಗುವಾಗ ಹಚ್ಚ ಹಸಿರಿನ ಗುಡ್ಡಗಾಡು ಪ್ರದೇಶದ ಸುಂದರ ಪ್ರಕೃತಿಯ ಸೊಬಗನ್ನು ಸವಿಯುವುದೇ ಕಣ್ಣಿಗೆ ಹಬ್ಬ. ಇನ್ನೂ ಇಲ್ಲಿನ ನಳಪಾಕದ ವಿಶೇಷತೆ ಏನು ಅಂತ ಗಮನಿಸಿದರೆ, ಶ್ರೀಲಂಕಾದ ಪಾಕಪದ್ಧತಿಯಲ್ಲಿ ವಾಟಾಲಪ್ಪಂ ಒಂದು ಪ್ರಮುಖ ಸಿಹಿತಿಂಡಿಯಂತೆ. ಇದು ತೆಂಗಿನ ಹಾಲು, ಬೆಲ್ಲ, ಮೊಟ್ಟೆ, ಸಂಸ್ಕರಿಸಿದ ಹಿಟ್ಟು, ಗೋಡಂಬಿ ಮತ್ತು ಏಲಕ್ಕಿ, ಲವಂಗ ಮತ್ತು ಜಾಯಿಕಾಯಿಯಂತಹ ಮಸಾಲೆಗಳಿಂದ ಸಿದ್ದ ಪಡಿಸಿದ ತೆಂಗಿನಕಾಯಿ ಪುಡಿಂಗ್ ಆಗಿದೆ.
ಪೊನ್ನಿಯ ಸೆಲ್ವನ್ ಅನುರಾಧಪುರದ ಅಲ್ಲಿನ ಬೌದ್ಧ ದೇವಾಲಯಗಳು, ವಿಶ್ವದ ರಮಣ ಬುದ್ಧ ಸ್ತೂಪ, ಪುರಾತನ ಅರಮನೆಗಳು ಪ್ರಾಚೀನ ಸಂಸ್ಕೃತಿಯ ಮೆರುಗನ್ನು ಕಣ್ತುಂಬಿ ಕೊಳ್ಳುವ ಅವಕಾಶ ನೀಡುತ್ತದೆ. ಗಲ್ಲೆ ಶ್ರೀಲಂಕಾದ ನೈಋತ್ಯ ಕರಾವಳಿಯಲ್ಲಿರುವ ಸುಂದರವಾದ ವಸಾಹತುಶಾಹಿ ಪಟ್ಟಣವಾಗಿದ್ದು, ಐತಿಹಾಸಿಕ ಕೋಟೆ ಮತ್ತು ವಸಾಹತುಶಾಹಿ ಯುಗದ ಕಟ್ಟಡಗಳಿಂದ ಕೂಡಿದ ಕಿರಿದಾದ ಬೀದಿಗಳಲ್ಲಿ ಓಡಾಡುವುದೇ ಪ್ರವಾಸಿಗರಿಗೆ ಸುಂದರ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: K.Sudhakar : ಬಿಜೆಪಿ ಪ್ರಣಾಳಿಕೆ ಭಗವದ್ಗೀತೆಯಷ್ಟೇ ಪವಿತ್ರ- ಸಚಿವ ಡಾ.ಕೆ.ಸುಧಾಕರ್!