K.Sudhakar : ಬಿಜೆಪಿ ಪ್ರಣಾಳಿಕೆ ಭಗವದ್ಗೀತೆಯಷ್ಟೇ ಪವಿತ್ರ- ಸಚಿವ ಡಾ.ಕೆ.ಸುಧಾಕರ್!

Dr K Sudhakar: ಜನರನ್ನು ಸುಳ್ಳು ಭರವಸೆ ನೀಡಿ ವಂಚಿಸಿ, ಮತ ಪಡೆಯುವ ಕೆಲಸವನ್ನು ಬಿಜೆಪಿ(BJP) ಎಂದಿಗೂ ಮಾಡುವುದಿಲ್ಲ. ಪ್ರಣಾಳಿಕೆಯನ್ನು ಯಾರೂ ಬೇಕಾದರೂ ಘೋಷಿಸಬಹುದಾಗಿದ್ದು, ಆದರೆ ನಾವು ಎಲ್ಲರ ಬಳಿಯೂ ಅಭಿಪ್ರಾಯ ಸಂಗ್ರಹಿಸಿಕೊಂಡ ಬಳಿಕವೇ ಜನರಿಗೆ ಅನುಕೂಲವಾಗುವ ಪ್ರಣಾಳಿಕೆಯನ್ನು ಬಿಜೆಪಿ ರೂಪಿಸುವುದಾಗಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ( Minister of Health and Family Welfare and Medical Education of Karnataka)ಡಾ.ಕೆ.ಸುಧಾಕರ್‌(Dr K Sudhakar) ಅವರು ಮಾಹಿತಿ ನೀಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ(Election) ಬಿಜೆಪಿ ಪಕ್ಷದ ಪ್ರಣಾಳಿಕೆ ಕರಡು ರೂಪಿಸಲು ಆರೋಗ್ಯ, ವೈದ್ಯಕೀಯ ಶಿಕ್ಷಣ, ಫಾರ್ಮಾ, ನರ್ಸಿಂಗ್ ಮತ್ತು ಸಂಬಂಧಿತ ವಿಜ್ಞಾನಗಳ ತಜ್ಞರಿಂದ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಸೋಮವಾರ ನಗರದಲ್ಲಿ ಸಭೆ ನಡೆಸಿದ ವೇಳೆ ಅನೇಕ ವಿಚಾರಗಳ ಕುರಿತು ಸಮಾಲೋಚನೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ ಸಚಿವರು ಬಿಜೆಪಿಯಲ್ಲಿ ಪ್ರತಿಯೊಬ್ಬರ ಆಲೋಚನೆಗಳು ಮತ್ತು ಕನಸುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿಯ ಪಾಲಿಗೆ ಚುನಾವಣಾ ಪ್ರಣಾಳಿಕೆ ಪವಿತ್ರ ಭಗವದ್ಗೀತೆಯ (Bhagavad Gita)ಸಮಾನ. ನಾವು ಅಧಿಕಾರಕ್ಕೆ ಬಂದ ಬಳಿಕ ನಾವು ನೀಡಬಹುದಾದ ಭರವಸೆಗಳನ್ನು ಮಾತ್ರ ಘೋಷಿಸುತ್ತೇವೆ. ಈ ಪ್ರಣಾಳಿಕೆಯಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರಿಗೆ ವಂಚನೆ ಮಾಡುವ ಉದ್ದೇಶವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr K. Sudhakar) ಅವರು ಇದೇ ವೇಳೆಯಲ್ಲಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ಬಿಜೆಪಿ ಪ್ರಣಾಳಿಕೆಯಲ್ಲಿ ವಾಸ್ತವ ಮಾತ್ರವಿರುತ್ತದೆ. ಆದರೆ, ಜನಸಾಮಾನ್ಯರಿಗೆ ಬೇಕಾದ ವಿಚಾರಕ್ಕೆ ಮಾತ್ರ ಬಿಜೆಪಿ ಪ್ರಾಮುಖ್ಯತೆ ನೀಡಲಿದೆ. ಕಾಂಗ್ರೆಸ್‌ನಂತೆ ಘೋಷಣೆಗೆ ಸೀಮಿತವಾಗುವ ಭರವಸೆಗಳನ್ನು ನಮ್ಮ ಸರ್ಕಾರ ನೀಡುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.

ಎಲ್ಲಾ ವರ್ಗದ ಅಭಿಪ್ರಾಯ ಆಲಿಸಿ ಜನಪ್ರಿಯ ಕಾರ್ಯಕ್ರಮವನ್ನು ರೂಪಿಸಲು ಯೋಜನೆ ಹಾಕಲಾಗಿದ್ದು, ನಿಮ್ಮ ಸಲಹೆಗಳನ್ನು ಸಲಹಾ ಬಾಕ್ಸ್‌ಗಳಲ್ಲಿ, ಪತ್ರದ ಮೂಲಕ ಅಥವಾ ಬಿಜೆಪಿಯ ವೆಬ್‌ಸೈಟ್‌ ಮೂಲಕ ನಮಗೆ ಕಳುಹಿಸಬಹುದು ಎಂದು ಸುಧಾಕರ್ ಅವರು ಹೇಳಿದ್ದಾರೆ. ಕರ್ನಾಟಕವು ಮೆಡಿಕಲ್‌ ಕಾಲೇಜುಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶದ ಬಳಿಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 67 ಕಾಲೇಜು, 11,000 ಎಂಬಿಬಿಎಸ್‌, 5,000 ಪಿಜಿ ವಿದ್ಯಾರ್ಥಿಗಳಿದ್ದು, ಇಲ್ಲಿ ವೈದ್ಯರು ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕಾಗಿದ್ದು, ವೈದ್ಯರ ಕೊರತೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮನಾದ ಆರೋಗ್ಯ ಮೂಲಸೌಕರ್ಯಗಳು, ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಆಗಬೇಕು ಎಂದು ಸಚಿವರಾದ ಸುಧಾಕರ್ ರವರು ತಿಳಿಸಿದ್ದಾರೆ.

Leave A Reply

Your email address will not be published.