Hyundai Verna : ಸುರಕ್ಷಾ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಿದೆ ಹುಂಡೈ ವೆರ್ನಾ ಕಾರು ಬಿಡುಗಡೆ! 2023ರ ಅತ್ಯಾಧುನಿಕ ಸೂಪರ್‌ ಕಾರು!

Hyundai Verna 2023: ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ಇದೀಗ ಹ್ಯುಂಡೈ ವೆರ್ನಾ ಸೆಡಾನ್ ಅನ್ನು ಮಾರ್ಚ್ 21 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಈ ಹೊಸ ವೆರ್ನಾ ಕಾರಿನ ಆಕರ್ಷಕ ಫೀಚರ್ ಬಗ್ಗೆ ಇನ್ನಷ್ಟು ಕಾತುರ ಮತ್ತು ನಿರೀಕ್ಷೆ ಇದೆ.

ಸದ್ಯ ಈ ಹೊಸ ಹ್ಯುಂಡೈ ವೆರ್ನಾ (hyundai verna 2023) ಕಾರಿನ ಪ್ರಾರಂಭಿಕ ಬೆಲೆಯು ರೂ, 10.89 ಲಕ್ಷವಾಗಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರು EX, S, S ಮತ್ತು SX (O) ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಬ್ಯವಿದ್ದು , ಈ ಕಾರಿನಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಮತ್ತು 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಇದರಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಮಾದರಿಗಳ ಬೆಲೆಯು ರೂ,10.89 ಲಕ್ಷ ದಿಂದ ರೂ.16.19 ಲಕ್ಷಗಳಾದರೆ, ಟರ್ಬೊ-ಪೆಟ್ರೋಲ್ ರೂಪಾಂತರಗಳ ಬೆಲೆಯು ರೂ,14.83 ಲಕ್ಷದಿಂದ ರೂ.17.37 ಲಕ್ಷಗಳಾಗಿದೆ. ಈ ಮೇಲಿನ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಮೂಲವಾಗಿದೆ.

ಹೊಸ ಹ್ಯುಂಡೈ ವೆರ್ನಾ ಕಾರು ಕಾರಿನ EX ಮತ್ತು S ರೂಪಾಂತರಗಳಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 113.4 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ iVT ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಇನ್ನು ಈ ಕಾರಿನ S ಮತ್ತು SX (O) ರೂಪಾಂತರಗಳಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಮಾದರಿಯಲ್ಲಿ 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.ಈ ಎಂಜಿನ್ 158bhp ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ DCT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

2023ರ ಹ್ಯುಂಡೈ ವೆರ್ನಾ ಕಾರಿನಲ್ಲಿ ಡ್ಯುಯಲ್-ಡಿಸ್ ಪ್ಲೇಯಂತಹ ಕೆಲವು ಸೆಗ್ಮೆಂಟ್-ಮೊದಲ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಈ ಕಾರಿನಲ್ಲಿ ಒಂದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್‌ಸ್ ಡಿಸ್ ಪ್ಲೇಯನ್ನು ಹೊಂದಿದೆ. ಇಲ್ಲಿ ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಹೊಸ ಟಚ್- ಆಧಾರಿತ ಕ್ಲೈಮೆಂಟ್ ಕಂಟ್ರೋಲ್, ಚಾಲಕ ಹೊಂದಾಣಿಕೆಯ ಮಾಡಬಹುದಾದ ಸೀಟ್ ಅನ್ನು ಹೊಂದಿದೆ.

ಅದಲ್ಲದೆ ಮೌಂಟೆಡ್ ಆಡಿಯೋ ಮತ್ತು ಕ್ರೂಸ್ ಕಂಟ್ರೋಲ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್-ಟೋನ್ ಬೀಜ್ ಮತ್ತು ಲೆದರ್ ಅಪ್ಹೋಲ್ಸ್ಟರಿ ಅನ್ನು ಹೊಂದಿದೆ.

ಈ ಕಾರಿನಲ್ಲಿ 65+ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್ಸ್ ಗಳೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಹ ಪಡೆಯುತ್ತದೆ. ಹೊಸ ವೆರ್ನಾದ ಪ್ರಮುಖ ವೈಶಿಷ್ಟ್ಯವೆಂದರೆ ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ತಂತ್ರಜ್ಞಾನವನ್ನು ಹೊಂದಿದೆ.

ಈ ADAS ಸೂಟ್ 17 ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತದೆ, ಜೊತೆಗೆ ಸ್ಟಾಪ್ ಮತ್ತು ಗೋ ಜೊತೆಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಷನ್ ಅಲರ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಕೀಪ್ ಅಸಿಸ್ಟ್, ಲೇನ್ ಫಾಲೋಯಿಂಗ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್ ಮತ್ತು ರಿಯರ್ ಕ್ರಾಸ್ ಟ್ರಾಫಿಕ್ ಅನ್ನು ಹೊಂದಿದೆ.

ಈ ಹೊಸ ಹ್ಯುಂಡೈ ವೆರ್ನಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಸ್ಕೋಡಾ ಸ್ಲಾವಿಯಾ, ಫೋಕ್ಸ್ ವ್ಯಾಗನ್ ವಿಟ್ರಸ್ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಇದನ್ನೂ ಓದಿ: Tata punch: ದೇಶೀಯ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಟಾಟಾ ಪಂಚ್ !! 

Leave A Reply

Your email address will not be published.