Cyber Frauds : SBI ಹಾಗೂ HDFC ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ : ನಿಮಗೂ ಈ ಸಂದೇಶ ಬಂದಿದ್ದರೆ ತಪ್ಪಿಯೂ ಮಾಡಬೇಡಿ ಈ ಕೆಲಸ!

Cyber Frauds : ಟೆಕ್ನಾಲಜಿಗಳು ಮುಂದುವರಿಯುತ್ತ ಹೋದಂತೆ ವಂಚಕರ ಸಂಖ್ಯೆಯೂ ಏರಿಕೆ ಆಗುತ್ತಾ ಹೋಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಇಂದಿನ ಮುಂದುವರಿದ ಪ್ರಪಂಚದಲ್ಲಿ ಎಲ್ಲ ವಹಿವಾಟುಗಳು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಅನೇಕರು ವಂಚನೆ ಮಾಡಲು ಮುಂದಾಗಿದ್ದಾರೆ.

ಹೌದು. ಇತ್ತೀಚೆಗೆ ಬ್ಯಾಂಕ್ ಹೆಸರಿನಲ್ಲಿ ಹಲವಾರು ಸಂದೇಶಗಳು ರವಾನೆಯಾಗುತ್ತಿದ್ದು, ಗ್ರಾಹಕರಿಗೆ ಪಂಗನಾಮ ಹಾಕಲಾಗುತ್ತಿದೆ. ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದವರಂತೆ ನಕಲಿ ಸಂದೇಶ ಕಳುಹಿಸಿ ಹಣವನ್ನು ದೋಚಲಾಗುತ್ತಿದೆ. ಅದರಂತೆ ಇದೀಗ ಸೈಬರ್ ಅಪರಾಧಿಗಳು (Cyber Frauds) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್(HDFC) ಗ್ರಾಹಕರನ್ನು ಗುರಿಯಾಗಿಸಿಕೊಂಡಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರ ಫೋನ್‌ಗಳಿಗೆ ಸೈಬರ್ ಅಪರಾಧಿಗಳು ವಿವಿಧ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಖಾತೆಯ ವಿವರಗಳನ್ನು ಅಪ್ಡೇಟ್​ ಮಾಡಲು ಮತ್ತು ತಕ್ಷಣವೇ PAN ವಿವರಗಳನ್ನು ಆಡ್ ಮಾಡಲು ಬ್ಯಾಂಕ್ ಬ್ಯಾಂಕ್​ಗೆ ಸಂಬಂಧಪಟ್ಟ ಮೆಸೇಜ್​ಗಳನ್ನು ಕಳುಹಿಸುತ್ತಿದ್ದಾರೆ. ಒಂದು ವೇಳೆ ಅಪ್ಡೇಟ್ ಮಾಡದಿದ್ದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ.

ಆತ್ಮೀಯ ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರೇ, ನಿಮ್ಮ ಪ್ಯಾನ್ ವಿವರಗಳನ್ನು ಸೇರಿಸದಿದ್ದರೆ, ಖಾತೆಯನ್ನು ರದ್ದುಗೊಳಿಸಲಾಗುತ್ತದೆ. ‘ದಯವಿಟ್ಟು ಖಾತೆ ವಿವರಗಳನ್ನು ಸಲ್ಲಿಸಿ’ ಎಂಬ ಸಂದೇಶ ಬಂದಿರುವುದನ್ನು ಗಮನಿಸಿ ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗಮನಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ಅದೇ ಸಂದೇಶದಲ್ಲಿ ಲಿಂಕ್ ಕೂಡ ಶೇರ್​​ ಮಾಡುತ್ತಾರೆ. ಒಂದು ವೇಳೆ ಆ ಲಿಂಕ್ ಓಪನ್ ಮಾಡಿ ಡೀಟೇಲ್ಸ್​ ನೀಡಿದ್ರೆ ಬ್ಯಾಂಕ್​ ಅಕೌಂಟ್​ ಕಂಪ್ಲೀಟ್ ಹ್ಯಾಕ್ ಆಗುತ್ತದೆ. ಹಾಗೆಯೇ ಪಾಸ್​​ವರ್ಡ್​, ಪ್ರೈವಸಿಗಳು ಎಲ್ಲವೂ ವಂಚಕರ ಕೈಸೇರುತ್ತದೆ. ಈ ಮೂಲಕ ವಂಚಕರು ಬ್ಯಾಂಕ್​ ಖಾತೆಯಲ್ಲಿರುವ ಹಣವನ್ನು ದೋಚಲು ಪ್ರಯತ್ನಿಸುತ್ತಾರೆ.

ಎಸ್ ಬಿಐ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಗಳು ‘ಬ್ಯಾಂಕ್ ಹೆಸರಿನಲ್ಲಿ ಬರುವ ನಕಲಿ ಸಂದೇಶಗಳನ್ನು ನಂಬಬೇಡಿ’ ಎಂದು ಸಲಹೆ ನೀಡಿದ್ದಾರೆ. ಇನ್ನು ಮೆಸೇಜ್​ನಲ್ಲಿರುವ ಲಿಂಕ್​ಗಳನ್ನು ಕ್ಲಿಕ್ ಮಾಡದಂತೆ ತಿಳಿಸಲಾಗಿದೆ. HDFC ಬ್ಯಾಂಕ್ ತನ್ನ hdfcbk / hdfcbn ಅಧಿಕೃತ ಐಡಿಯಿಂದ ಬ್ಯಾಂಕ್ ಸಂದೇಶಗಳನ್ನು ಮಾತ್ರ ಕಳುಹಿಸಲಾಗುವುದು ಎಂದು ಸಲಹೆ ನೀಡುತ್ತದೆ. ಸಂದೇಶಗಳ ಮೂಲಕ ಗ್ರಾಹಕರ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. ಹಾಗಾಗಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

Leave A Reply

Your email address will not be published.