Aadhaar-PAN Linking: ಆಧಾರ್-ಪಾನ್ ಲಿಂಕ್ ಡೆಡ್ಲೈನ್ಗೆ ಕೆಲವೇ ದಿನ ಬಾಕಿ! ಪಾನ್, ಆಧಾರ್ ಜೊತೆ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
Aadhaar-PAN Linking :ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್‌ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. ಹೀಗಾಗಿ ಸರ್ಕಾರ ನಿಗದಿತ ಮಾಡಿದ ದಿನಾಂಕದೊಳಗೆ ನಿಮ್ಮ ಆಧಾರ್ ಮತ್ತು ಪಾನ್ ಲಿಂಕ್ ಮಾಡಿಸಿಕೊಳ್ಳಿ. ಹಾಗಾದ್ರೆ ಸರ್ಕಾರ ನೀಡಿದ ಕೊನೆಯ ದಿನಾಂಕ ಯಾವುದು?
ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಹೀಗಾಗಿ ಕಳೆದ ವರ್ಷ(2022) ಮಾರ್ಚ್ 31 ವರೆಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಆದರೆ ಈ ಅವಧಿಯನ್ನು ಸರ್ಕಾರ 2023 ಮಾರ್ಚ್ 31ವರೆಗೆ ವಿಸ್ತರಿಸಿತ್ತು. ಸದ್ಯ ಈ ಗಡುವು ಮುಕ್ತಾಯವಾಗಲು ಇನ್ನು ಕೆಲವೇ ದಿನಗಳು ಭಾಕಿ ಇವೆ. ಆದ್ದರಿಂದ ಇನ್ನೂ ಕೂಡ ಯಾರು ಆಧಾರ್ ಗೆ ಪಾನ್ ಕಾರ್ಡ್ ಲಿಂಕ್ (Aadhaar-PAN Linking) ಮಾಡಿಸಿಲ್ಲವೊ ಆದಷ್ಟೂ ಶೀಘ್ರವಾಗಿ ಮಾಡಿಸಿಕೊಳ್ಳಿ.
ಇದೀಗ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಮಾರ್ಚ್ 31ರವರೆಗೆ ಮಾತ್ರ ಕಾಲಾವಕಾಶ ಇದೆ. ಏಪ್ರಿಲ್ 1ರಿಂದ ಆಧಾರ್ ಜೊತೆ ಜೋಡಣೆಯಾಗದ ಪಾನ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ. ಆ ಬಳಿಕ ಆಧಾರ್ ನಂಬರ್ಗೆ ಪಾನ್ ಲಿಂಕ್ ಮಾಡಲು ಅವಕಾಶ ಇರುತ್ತದೆಯಾದರೂ ದುಬಾರಿ ಶುಲ್ಕ ತೆರಬೇಕಾಗುತ್ತದೆ. ಅಲ್ಲದೇ, ನಿಷ್ಕ್ರಿಯಗೊಂಡ ಪಾನ್ ಕಾರ್ಡನ್ನು ನೀವು ಗೊತ್ತಿದ್ದೋ ಗೊತ್ತಿಲ್ಲದೆಯೇ ಹಣಕಾಸು ವಹಿವಾಟುಗಳಲ್ಲಿ ಬಳಕೆ ಮಾಡಿದ್ದೇ ಆದಲ್ಲಿ ಭಾರೀ ದಂಡ ಕಟ್ಟಬೇಕಾಗುತ್ತದೆ. ಹಣಕಾಸು ಅಪರಾಧ ಆರೋಪದ ಮೇಲೆ ಜೈಲಿಗೂ ಹೋಗಬೇಕಾಗಬಹುದು.
ಆಧಾರ್ ಮತ್ತು ಪಾನ್ ಲಿಂಕ್ ಮಾಡುವುದು ಹೇಗೆ?
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ https://www.incometax.gov.in/iec/foportal/ ಪ್ರವೇಶಿಸಿ. ಎಡಬದಿಯಲ್ಲಿ Quick Liks ಕಾಣಿಸುತ್ತದೆ. ಅಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ. ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ, ಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your PAN is already linked to given Aadhaar” (ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆ) ಎಂಬಂತಹ ಸಂದೇಶ ಬರುತ್ತದೆ. ಈ ಪ್ರಕ್ರಿಯೆಯು ನೀವು ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ಗೆ ಲಾಗಿನ್ ಅಗದೆಯೇ ಪಡೆಯಬಹುದಾದ ಸೇವೆ ಆಗಿದೆ.
ಒಂದು ವೇಳೆ ನೀವು ಈಗಾಗಲೇ ಪಾನ್ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ ಗೊತ್ತಾ? ಇಲ್ಲಿದೆ ವಿವರ.
ನಿಮ್ಮ ಪಾನ್‌ಕಾರ್ಡ್ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೇ ಅನ್ನೋದನ್ನು ತಿಳಿಯಲು ಈ ಕೆಳಗಿನಂತೆ ಫಾಲೋ ಮಾಡಿ
ಗೂಗಲ್‌ನಲ್ಲಿ www.incometax.gov.in ವೆಬ್‌ಸೈಟ್ ಓಪನ್ ಮಾಡಿ. ಈಗ ‘ಕ್ವಿಕ್ ಲಿಂಕ್ಸ್’ನ ಅಡಿಯಲ್ಲಿ ಕಾಣುವ ‘ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಒತ್ತಿರಿ. ಈಗ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಹೊಸ ಪುಟ ತೆರೆಯುತ್ತದೆ. ಈಗ ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ. ವಿವರಗಳನ್ನು ಹಾಕಿದ ನಂತರ ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ನಿಮ್ಮ ಪಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸುವ ಪುಟ ಕಾಣಿಸಿಕೊಳ್ಳುತ್ತದೆ.
ಪಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡೋದು ಯಾಕೆ ಕಡ್ಡಾಯ? : 2017ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಆದಾಯ ತೆರಿಗೆ ಕಾಯ್ದೆಯಲ್ಲಿ 139AA ಎಂಬ ಹೊಸ ಸೆಕ್ಷನ್ ತಂದಿದೆ. ಆ ಪ್ರಕಾರ ಹೊಸ ಪಾನ್‌ಗೆ ಅರ್ಜಿ ಸಲ್ಲಿಸುವಾಗ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಹೀಗಾಗಿ ಇದಕ್ಕೂ ಮೊದಲೇ ಪಾನ್ ಕಾರ್ಡ್ ಹೊಂದಿದ್ದವರು ಸರ್ಕಾರ ನಿಗದಿ ಪಡಿಸಿದ ಸಮಯಕ್ಕೂ ಮೊದಲೇ ಆಧಾರ್ ಜೊತೆ ಲಿಂಕ್ ಮಾಡೋದು ಕಡ್ಡಾಯ. ಸರ್ಕಾರ ನಿಗದಿಪಡಿಸಿದ ಗಡುವಿನ ಒಳಗೆ ಲಿಂಕ್ ಮಾಡದಿದ್ದರೆ ಆ ಪಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.