Pramod Muthalik: ರಾಜ್ಯದಲ್ಲಿ ನಿಲ್ಲದ ಧರ್ಮ ದಂಗಲ್…! ಯುಗಾದಿ ಹಬ್ಬಕ್ಕೂ ʻಹಲಾಲ್ ಕಟ್ ಬಹಿಷ್ಕಾರ ಅಭಿಯಾನ – ಪ್ರಮೋದ್ ಮುತಾಲಿಕ್
Pramod Muthalik: ಬೆಂಗಳೂರು: ಕರ್ನಾಟಕದಲ್ಲಿ ಹಿಂದೂಗಳ ಪವಿತ್ರ ಹಬ್ಬವಾದ ಯುಗಾದಿ ಹಬ್ಬಕ್ಕೂ ಹಲಾಲ್ ಕಟ್ ಅಭಿಯಾನ ಮುಂದುವರಿಯಲಿದೆಂದು ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸದಿಲ್ಲದೇ ಧರ್ಮ ದಂಗಲ್ ಭುಗಿಲೆದಿದ್ದು, ಹಿಂದೂಗಳ ಪವಿತ್ರ ಹಬ್ಬವಾದ ಯುಗಾದಿ ಹಬ್ಬಕ್ಕೂ ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಹಲಾಲ್ ಕಟ್ ಅಭಿಯಾನ ಮನ್ನಲೆಗೆ ಬಂದಿದೆ. ಈ ಬಾರಿಯೂ ಹಲಾಲ್ ಕಟ್ ಅಭಿಯಾನಕ್ಕೆ ಬ್ರೇಕ್ ಬಿದ್ದಿಲ್ಲ. ಈ ವರ್ಷದ ಯುಗಾದಿ ಹಬ್ಬದಂತೂ ಹಲಾಲ್ ಕಟ್ ಅಭಿಯಾನ ಮುಂದುವರಿಯಲಿದೆ ಎಂದು ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Muthalik) ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ತಲೆ ಎತ್ತಿದ ಹಿಜಾಬ್ ವಿವಾದ ವಿಚಾರವಾಗಿ ಧರ್ಮದಂಗಲ್ ಶುರುವಾಯ್ತು ಈ ಬೆನ್ನಲ್ಲೆ ಹಲಾಲ್ ವಿರುದ್ಧ ಜಟ್ಕಾ ಕಟ್ ಮುನ್ನಲೆಗೆ ಬಂದಿತ್ತು. ಈ ಬಾರಿ ತಣ್ಣಗಾಗಿದ್ದ ಅಭಿಯಾನ ಮತ್ತೆ ತಾರಕ್ಕೇರಲಿದ್ದು ಈ ಬಾರಿಯ ಯುಗಾದಿ ಹಬ್ಬಕ್ಕೂ ಬಿಸಿ ತಟ್ಟಲಿದ್ದು, ಇದರಿಂದ ಮುಸ್ಲಿಂ ಮಾಂಸ ವ್ಯಾಪಾರಕ್ಕೆ ಅಡ್ಡಿ ಉಂಟಾಗಲಿದೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ಹಲಾಲ್ ಮಾಂಶ ಇಸ್ಲಾಂ ಸಮುದಾಯಕ್ಕೆ ಸೇರಿದ್ದಾಗಿದೆ, ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದೂಗಳು ಕಟ್ ಮಾಡಿದ ಮಾಂಸ ತಿನ್ನುವುದಿಲ್ಲ. ನಾವು ಯಾಕೆ ಅವರ ಹಲಾಲ್ ಮಾಂಸವನ್ನು ತಿನ್ನಬೇಕು? ಹಾಲಾಲ್ನಿಂದ ಜಲಾಮ್-ಉಲೇಮಾ ಟ್ರಸ್ಟ್ಗೆ ಎರಡು ಲಕ್ಷ ಕೋಟಿ ಆದಾಯವಿದೆ. ಈ ಹಣವನ್ನು ಉಗ್ರಗಾಮಿಗಳಿಗೆ ಬಳಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.