Assembly Election -2023 : ಇದೇ ನೋಡಿ ಚುನಾವಣೆಯಲ್ಲಿ ಸಿದ್ದು ಕಣಕ್ಕಿಳಿಯೋ ಕ್ಷೇತ್ರ! ಅಷ್ಟಕ್ಕೂ ಮಗ ಯತೀಂದ್ರ ಬಿಚ್ಚಿಟ್ಟ ಸುಳಿವೇನು ಗೊತ್ತಾ?

Assembly Election -2023 : ಮೈಸೂರು(Mysore) ಊರಿನ ಪ್ರಾಂತ್ಯಾಧಿಕಾರಿ ಮಾಜಿ ಸಿಎಂ, ವಿಪಕ್ಷನಾಯಕ ಸಿದ್ದರಾಮಯ್ಯ(Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಖುದ್ದು ಸಿದ್ದರಾಮಯ್ಯರಿಂದ ಹಿಡಿದು ಕಾಂಗ್ರೆಸ್(Congress) ಘಟಾನುಘಟಿ ನಾಯಕರುಗಳಿಗೇ ಪ್ರಶ್ನೆಯಾಗಿ ಉಳಿದಿದೆ. ಹೀಗಿರುವಾಗ, ಸದ್ಯ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಬಹುತೇಕ ಪಕ್ಕ ಆಗಿದೆ ಎನ್ನಲಾಗಿದೆ.

ಈತನಕ ಸಿದ್ದರಾಮಯ್ಯನವರು ಕೋಲಾರ(Kolara) ಕ್ಷೇತ್ರದಿಂದ ಸ್ಪರ್ಧಿಸುವುದು ಎಂದು ನಿರ್ಧರಿಸಿದ್ದರು. ಅದರಂತೆ ಚುನಾವಣಾ ತಯಾರಿ, ಪ್ರಚಾರ ಎಲ್ಲಾ ನಡೆದಿತ್ತು. ಆದರೆ ಎರಡು ದಿನಗಳ ಹಿಂದೆ ದೊಡ್ಡ ಬೆಳವಣಿಗೆಯೊಂದು ನಡೆದಿತ್ತು. ಕಾಂಗ್ರೆಸ್ ಹೈಕಮಾಂಡ್ ಮಧ್ಯಂತರ ಪ್ರವೇಶಿಸಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದು ಬೇಡ, ವರುಣಾದಿಂದಲೇ ಕಣಕ್ಕಿಳಿಯಲಿ ಎಂದು ಆದೇಶ ನೀಡಿತ್ತು. ಆ ನಂತರ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಅದರಂತೆ ಈಗ ಮಾಜಿ ಸಿಎಂ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವುದು (Assembly Election -2023) ಬಹುತೇಕ ಖಚಿತವಾಗಿದೆ. ಈ ಬಗ್ಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ.

ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದರಾಮಯ್ಯ(Yatindra Siddaramaiah), ನಮ್ಮ ತಂದೆ ಇನ್ನು 2-3 ದಿನಗಳಲ್ಲಿ ತಾವು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ತಿಳಿಸಲಿದ್ದಾರೆ. ನಾನು ಈ ಹಿಂದೆಯೇ ವರುಣಾದಿಂದ ಸ್ಪರ್ಧಿಸಿ ಎಂದು ಹೇಳಿದ್ದೆ. ಹೈಕಮಾಂಡ್ ನಾಯಕರೂ ಕೂಡ ಸಿದ್ದರಾಮಯ್ಯನವರಿಗೆ ವರುಣಾದಿಂದ ಸ್ಪರ್ಧಿಸಲು ಹೇಳಿದ್ದರು ಎಂದು ತಿಳಿಸಿದ್ದಾರೆ. ಅದರ ಪರಿಣಾಮ ವರುಣಾದಲ್ಲಿ ಸಿದ್ದು ವರ್ಸಸ್ ಎಲ್ಲಾ ವಿರೋಧಿಗಳು ಏಕಕಾಲದಲ್ಲಿ ಸಿದ್ದು ವಿರುದ್ಧ ಸೆಣಸಾಡಲಿದ್ದಾರೆ.

ವರುಣಾ(Varuna) ದಲ್ಲಿ ಕಾಂಗ್ರೆಸ್ ಆಂತರಿಕ ಸಮೀಕ್ಷೆ ನಡೆಸಿದೆ. ಹಾಗೂ ನಾನು ನಡೆಸಿರುವ ಆಂತರಿಕ ಸಮೀಕ್ಷೆ ಫಲಿತಾಂಶಗಳು ಸಿದ್ದರಾಮಯ್ಯ ಪರವಾಗಿ ಬಂದಿವೆ. ಹೀಗಾಗಿ ಇನ್ನು ಎರಡು ಮೂರು ದಿನಗಳಲ್ಲಿ ತಂದೆಯವರು ತಮಕ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಸಿದ್ದು ಪುತ್ರ ತಿಳಿಸಿದ್ದಾರೆ. ಆದರೆ ಹೈಕಮಾಂಡ್ ಮಾತ್ರ ಯಾವ ಕಾರಣಕ್ಕೆ ಕೋಲಾರ ಬಿಟ್ಟು ವರುಣಾದಿಂದ ಸ್ಪರ್ಧಿಸುವಂತೆ ತಿಳಿಸಿದೆಯೋ ಗೊತ್ತಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಚಾಮುಂಡೇಶ್ವರಿ(Chamundeshwari) ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಬಾರಿ ಬಾದಾಮಿ(Badami) ಕ್ಷೇತ್ರದಲ್ಲಿ ಗೆದ್ದಿದ್ದರು. ಈ ಬಾರಿ ಅವರು ಬಾದಾಮಿ ಬಿಟ್ಟು ಕೋಲಾರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಇಲ್ಲಿ ಮನೆ ಕೂಡ ಮಾಡಿ ಗೆಲುವಿನ ಕನಸನ್ನೂ ಕಂಡಿದ್ದರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿದ್ದರಾಮಯ್ಯನವರಿಗೆ ಕೋಲಾರದಿಂದ ಹಿಂದೆ ಸರಿಯುವಂತೆ ಹೇಳಿದ್ದು, ವರುಣಾದಿಂದ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಗೊಂದಲದಲ್ಲಿ ಸಿಲುಕಿದ್ದರು. ಹೈಕಮಾಂಡ್ ಸೂಚನೆ ಮೇರೆಗೆ ಇದೀಗ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಎಲ್ಲಾ ಮಟ್ಟಿನ ತಯಾರಿಗಳು ಬರದಿಂದ ಸಾಗುತ್ತಿವೆ. ಇನ್ನು ಎರಡೇ ದಿನಗಳಲ್ಲಿ ಸಿದ್ದು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬರಲಿದೆ.

ಇದನ್ನೂ ಓದಿ: Uri- Nanje Gowda: ಉರಿ-ನಂಜೇಗೌಡರ ವಿಚಾರಕ್ಕೆ ರೋಚಕ ಟ್ವಿಸ್ಟ್ : ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

Leave A Reply

Your email address will not be published.