Actor Rishab Shetty: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ ರಿಷಬ್ ಶೆಟ್ಟಿಯಿಂದ! ಏನಂದ್ರು ಶೆಟ್ರು ಗೊತ್ತಾ?

Actor Rishab Shetty: ಕಾಂತಾರ ನಟ ರಿಷಬ್ ಶೆಟ್ಟಿ (actor Rishab Shetty) ಅವರು ವಿಶ್ವಸಂಸ್ಥೆಗೆ ಭಾರತದ ಪ್ರತಿನಿಧಿಯಾಗಿ ತೆರಳಿದ್ದು, ಇದೀಗ ಭಾರತಕ್ಕೆ ಹಿಂದಿರುಗಿದ್ದಾರೆ. ಅಲ್ಲಿಂದ ಬರುತ್ತಿದ್ದಂತೆ ಬೆಂಗಳೂರು ( Bengaluru ) ಮಲ್ಲೇಶ್ವರಂ ಕ್ಷೇತ್ರದ ಸುಬ್ರಮಣ್ಯ ನಗರದಲ್ಲಿ ರಿಷಬ್‌ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಭಾನುವಾರ ಉದ್ಘಾಟಿಸಿದ್ದು, ಆ ಸಂದರ್ಭದಲ್ಲಿ, ತಾವು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾವೊಂದನ್ನು (film ) ಖುಷಿಯಿಂದ ನೆನಪಿಸಿಕೊಂಡಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ರಿಷಬ್‌ ಶೆಟ್ಟಿ, ”ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ಕೀಳಾಗಿ ಕಾಣುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ (government schools ) ಓದಿದ ಮಕ್ಕಳೇ ಹೆಚ್ಚು ಪ್ರತಿಭಾವಂತರು ಎನ್ನುವುದು ಸಾಕಷ್ಟು ಬಾರಿ ಉದಾಹರಣೆ ಸಹಿತ ಸಾಬೀತಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಹೆಚ್ಚು ಹೆಚ್ಚು ಅಭಿವೃದ್ಧಿಗೊಳಿಸಬೇಕು. ನಮ್ಮ ಹಳ್ಳಿಗಳಲ್ಲೂ ಈ ರೀತಿಯ ಶಾಲೆಗಳು ಇರಬೇಕು ” ಎಂದು ಅಭಿಪ್ರಾಯ ತಿಳಿಸಿದರು.

ಈಗಾಗಲೇ 2018ರಲ್ಲಿ ರಿಷಬ್‌ ಶೆಟ್ಟಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಟಿಸಿದ್ದರು. ಈ ಚಿತ್ರದ ಮೂಲಕ ಅವರು ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದರು. 3 ಕೋಟಿ ಬಜೆಟ್‌ನಿಂದ ತಯಾರಾದ ಸಿನಿಮಾ 20 ಕೋಟಿ ರೂಪಾಯಿ ಲಾಭ ಮಾಡಿತ್ತು.

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಅನಂತ್‌ ನಾಗ್‌, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡು ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದರು. ಈ ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು, 2018ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ 2019ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಕೂಡಾ ಗಿಟ್ಟಿಸಿತ್ತು .

ಅದಲ್ಲದೆ ರಿಷಬ್‌ ಶೆಟ್ಟಿ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಷಬ್‌ ಶೆಟ್ಟಿ ಕೂಡಾ ಭಾಗವಹಿಸಿದ್ದು, ಪರಿಸರ ಸಂರಕ್ಷಣೆ ಕುರಿತಾಗಿ ಕನ್ನಡದಲ್ಲೇ ಮಾತನಾಡಿದ್ದು, ಈ 18 ಸೆಕೆಂಡ್‌ಗಳ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಕನ್ನಡಿಗರು ರಿಷಬ್‌ ಶೆಟ್ಟಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇನ್ನು ‘ಕಾಂತಾರ’ ಕನ್ನಡ ಚಿತ್ರಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆ ನಂತರ ತೆಲುಗು, ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ ಡಬ್‌ ಆಗಿ ಬಿಡುಗಡೆ ಆಯ್ತು. ಇಂಗ್ಲಿಷ್‌ಗೂ ಡಬ್‌ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಿತ್ತು. ಇದೀಗ ಮತ್ತಷ್ಟು ವಿದೇಶಿ ಭಾಷೆಗಳಿಗೆ ಡಬ್‌ ಆಗುತ್ತಿದೆ.

ಒಟ್ಟಿನಲ್ಲಿ ರಿಷಬ್ ಶೆಟ್ಟಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಅವರ ಸಾಧನೆ ಅಪಾರವಾದುದು, ಇನ್ನು ಉಡುಗೆ – ತೊಡುಗೆ , ಭಾವನೆಯ ಮಾತುಗಳು ರಿಷಬ್ ಅವರ ಸರಳತೆ ಮತ್ತು ವ್ಯಕ್ತಿತ್ವ ವನ್ನು ಎತ್ತಿ ಹಿಡಿಯುತ್ತದೆ. ಇವೆಲ್ಲವೂ ಜನರ ಮನಸ್ಸನ್ನು ಗೆದ್ದಿದೆ .

Leave A Reply

Your email address will not be published.