Udupi : ರಾಮ ಜನ್ಮ ಭೂಮಿಗೆ ಉಡುಪಿಯ ಕೊಡುಗೆ ಇದು

Udupi : ಎರಡನೇ ಬಾರೀ ಅಯೋಧ್ಯೆ ಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗಾಗಿ ಶಿಲೆಯನ್ನು ಕಳುಹಿಸುವ ಕರ್ನಾಟಕಕ್ಕೆ ಲಭಿಸಿದೆ. ಉಡುಪಿ (Udupi) ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಾರಿನಿಂದ ರಾಮನಗರಕ್ಕೆ ಕೃಷ್ಣ ಶಿಲೆ ಪ್ರಯಾಣ ಬೆಳೆಸಿದೆ.

ಮೊದಲ ಬಾರೀ ಮೈಸೂರು ಜಿಲ್ಲೆ ಹೆಗ್ಗಡೆದೇವನ ಕೋಟೆಯಿಂದ ಎರಡು ಶಿಲೆಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ನೇಪಾಳದ ಗಂಡಕೀ ನದಿಯಿಂದ ಎರಡು ಸಾಲಿಗ್ರಾಮ ಶಿಲೆಗಳು ಅಯೋಧ್ಯೆಗೆ ಬಂದಿವೆ.

ರಾಜಸ್ಥಾನದಿಂದ ಮೂರು ಅಮೃತ ಶಿಲೆಗಳು ತಲುಪಿವೆ. ಇನ್ನೂ ಒಡಿಶಾ ಮತ್ತು ತಮಿಳುನಾಡಿನಿಂದ ಶಿಲೆಗಳು ಅಯೋಧ್ಯೆಗೆ ಬರಲಿವೆ. ಎಲ್ಲ ಶಿಲೆಗಳು ತಲುಪಿದ ನಂತರ ಪರಿಣಿತ ಶಿಲ್ಪಿಗಳು ಹಾಗೂ ತಜ್ಞರ ಸಮಿತಿ ಪರೀಕ್ಷೆ ನಡೆಸಿ ರಾಮಲಲ್ಲಾನಿಗಾಗಿ ಶಿಲೆಯ ಆಯ್ಕೆ ಮಾಡಲಿದೆ.

ಕಾರ್ಕಳದ ನೆಲ್ಲಿಕಾರಿನಿಂದ ಗುರುವಾರ ರಾತ್ರಿ ಕೃಷ್ಣಶಿಲೆಗೆ ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಗೆ ರವಾನಿಸಲಾಗಿದ್ದು, ಶಿಲೆ ಆಯ್ಕೆಗಾಗಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಫೆಬ್ರವರಿಯಲ್ಲಿ ಕಾರ್ಕಳದ ವಿಶ್ವಹಿಂದು ಪರಿಷತ್‌ನ ಪ್ರಮುಖರನ್ನು ಸಂಪರ್ಕಿಸಿತ್ತು. ಬಳಿಕ ಅಯೋಧ್ಯೆಯಿಂದ ಶಿಲ್ಪಿ ಕುಶ್‌ದೀಪ್ ಬನ್ಸಾಲ್ ನೇತೃತ್ವದಲ್ಲಿ ಪರಿಣಿತ ತಜ್ಞರ ತಂಡವೊಂದು ನೆಲ್ಲಿಕಾರಿಗೆ ಬಂದು, ಅಲ್ಲಿನ ಶಿಲೆಗಳನ್ನು ಪರಿಶೀಲಿಸುವ ಕಾರ್ಯ ನಡೆಸಿತ್ತು.

ಪರಿಶೀಲನೆ ಕಾರ್ಯದ ವೇಳೆ ಕಾರ್ಕಳದ ಈದು ಗ್ರಾಮದ ತುಂಗ ಪುಜಾರಿ ಅವರ ಜಮೀನಿನಲ್ಲಿದ್ದ
9 ಟನ್ ತೂಕ, 9.5 ಅಡಿ ಉದ್ದ, 6 ಅಡಿ ಅಗಲ ಮತ್ತು 4.5 ಅಡಿ ದಪ್ಪವಿರುವ ಶಿಲೆಯನ್ನು ಬಲರಾಮನ ಮೂರ್ತಿ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡಲಾಗಿದೆ.

ಇನ್ನೂ ಈ ಶಿಲೆಯನ್ನು ಕಾರ್ಕಳದಿಂದ 2120 ಕಿ.ಮೀ. ದೂರದ ಅಯೋಧ್ಯೆಗೆ ಟ್ರಕ್ ಮೂಲಕ ಶಿಲೆಯನ್ನು ಕಳುಹಿಸಲಾಗುತ್ತಿದೆ. ಈಗಾಗಲೇ ನೇಪಾಳ, ರಾಜಸ್ಥಾನ ಮತ್ತು ಕರ್ನಾಟಕದ ಎಚ್.ಡಿ.ಕೋಟೆಯಿಂದ ಕಲ್ಲುಗಳು ಬಂದಿವೆ. ಎಲ್ಲ ಕಲ್ಲುಗಳು ಬಂದ ನಂತರ ಯಾವ ಶಿಲೆಯಿಂದ ಮೂರ್ತಿ ತಯಾರಿಸಲಾಗುತ್ತದೆ ಎಂಬುದು ಅಂತಿಮವಾಗಲಿದೆ.

Leave A Reply

Your email address will not be published.