Heart Break Insurance: ಲವ್ ಬ್ರೇಕಪ್‌ಗೆ ಬಂದಿದೆ ಹೊಸ ವಿಮೆ ; ಯಾರೆಲ್ಲ ಇದ್ದೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ
Heart Break Insurance: ಎಲ್ಲರಿಗೂ ಗೊತ್ತಿರುವ ಹಾಗೆ ಜೀವ ವಿಮೆ (life insurence) ಇದೆ. ಇದರಿಂದ ಅಪಘಾತವಾದಾಗ (accident) ಆರ್ಥಿಕ ಸಹಕಾರ ಒದಗುತ್ತದೆ. ಒಂದು ವೇಳೆ ಮಧ್ಯದಲ್ಲಿ ಮರಣ ಹೊಂದಿದರೆ ನಾಮಿನಿಗೆ ಹಣ ಸೇರುತ್ತದೆ. ಆದರೆ ನಿಮಗೆ ಗೊತ್ತಾ? Heart Break Insurance ಕೂಡ ಇದೆ. ಏನಿದು ವಿಮೆ? ಬನ್ನಿ ತಿಳಿಯೋಣ.
ಹಾರ್ಟ್ ಬ್ರೇಕ್ ಇನ್ಶೂರೆನ್ಸ್ ಅಂದ್ರೆ, ಪ್ರೀತಿಯ ಮೇಲೆ ಹೂಡಿಕೆ ಮಾಡುವಂತದ್ದು, ಲವ್ ಬ್ರೇಕಪ್ (love breakup) ಆದಾಗ ಮೋಸ ಹೋದ ವ್ಯಕ್ತಿಗೆ ಆ ಮೊತ್ತ ಲಭಿಸುತ್ತದೆ. ಇದೀಗ ಪ್ರೀತಿಯಲ್ಲಿ ಬಿದ್ದು, ಮೊಸ ಹೋಗಿರುವ ಯುವಕನೊಬ್ಬ ಈ ರೀತಿಯಾಗಿ ಹಣ ಹೂಡಿಕೆ ಮಾಡಿದ್ದಾನೆ. ಇದನ್ನು ತನ್ನ ಸೋಷಿಯಲ್ ಮೀಡಿಯಾ (social midea) ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಪ್ರತೀಕ್ ಆರ್ಯನ್ ಎಂಬಾತ ಯುವತಿಯೋರ್ವಳನ್ನು ಪ್ರೀತಿಸಿದ್ದು, ನಂತರದ ದಿನದಲ್ಲಿ ಇವರಿಬ್ಬರು Heart Break Insurance (HIF) ನಲ್ಲಿ ಹೂಡಿಕೆ ಮಾಡಿದ್ದಾರೆ. ಹಲವು ವರ್ಷಗಳ ಪ್ರೀತಿಯ ಬಳಿಕ ಇದೀಗ ಆತನನ್ನು ಗೆಳತಿ ತೊರೆದಿದ್ದಾಳೆ. ಪ್ರೀತಿಯ ನೋವು, ಸಮಸ್ಯೆಗಳ ಪರಿಹಾರವಾಗಿ ಪ್ರತೀಕ್ ಗೆ ವಿಮೆಯಿಂದ 25,000 ರೂಪಾಯಿ ಲಭಿಸಿದ್ದು, ಈ ಬಗ್ಗೆ ಆತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
“ಇಬ್ಬರೂ ಡೇಟಿಂಗ್ ಆರಂಭಿಸಿದಾಗ ಜಾಯಿಂಟ್ ಬ್ಯಾಂಕ್ ಖಾತೆ ಬಳಸಿ ಅದರಲ್ಲಿ ಹಣ ಹೂಡಿಕೆ ಮಾಡಿದ್ದು, ಮಾಸಿಕ ರೂ. 500 ಠೇವಣಿ ಇಡಲಾಗಿತ್ತು. ಲವ್ ಬ್ರೇಕ್ ಆದರೆ, ಖಾತೆಯಲ್ಲಿ ಜಮೆಯಾದ ಸಂಪೂರ್ಣ ಮೊತ್ತವು ಮೋಸಹೋದವರಿಗೆ ಸೇರುತ್ತದೆ ಎಂದು ಜಂಟಿಯಾಗಿ ಒಪ್ಪಿಕೊಳ್ಳಲಾಗಿತ್ತು. ಅದರಂತೆ ನನ್ನ ಗೆಳತಿ ನನಗೆ ಮೋಸ ಮಾಡಿದ್ದರಿಂದ ನನಗೆ 25 ಸಾವಿರ ರೂಪಾಯಿ ಸಿಕ್ಕಿತು” ಎಂದು ಟ್ವಿಟ್ ಮಾಡಿದ್ದಾರೆ.
ಸದ್ಯ ಈ ಟ್ವೀಟ್ ಸಖತ್ ವೈರಲ್ ಆಗಿದ್ದು, ಸೋಷಿಯಲ್ಸ್ ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬರು ನೆಟ್ಟಿಗರು ಕಾಮೆಟ್ ಮಾಡಿದ್ದು, “ ಈ ಹಣವನ್ನು ಏನು ಮಾಡಲು ಬಯಸುತ್ತೀರಿ” ಎಂದು ಕೇಳಿದ್ದಾರೆ ಅದಕ್ಕೆ ಪ್ರತ್ಯುತ್ತರವಾಗಿ, “ಇನ್ನೊಂದು ಪ್ರೀತಿಗಾಗಿ ಅದನ್ನು ತೆಗದಿಡುತ್ತೇನೆ” ಎಂದು ಪ್ರತೀಕ್ ಹೇಳಿದರು.
I got Rs 25000 because my girlfriend cheated on me .When Our relationship started we deposited a monthly Rs 500 each into a joint account during relationship and made a policy that whoever gets cheated on ,will walk away with all money.
That is Heartbreak Insurance Fund ( HIF ).— Prateekaaryan (@Prateek_Aaryan) March 15, 2023