Ranbir Kapoor : ಉರ್ಫಿಯ ಫ್ಯಾಷನ್‌ ಸೆನ್ಸ್‌ ಬಗ್ಗೆ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಏನಂದ್ರು ಗೊತ್ತೇ?

Ranbir Kapoor : ಸಾಮಾಜಿಕ ಮಾಧ್ಯಮಗಳ (social media)ಮೂಲಕ ಯುವಕರ ನಿದ್ದೆಯನ್ನು ಕೆಡಿಸುತ್ತಿರುವ ಉರ್ಫಿ ಜಾವೇದ್(urfi Javed) ತಮ್ಮ ಫ್ಯಾಶನ್(fashion) ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆಕೆಯ ವಿಚಿತ್ರ ಡ್ರೆಸ್‌ನಿಂದ (dress)ಅನೇಕ ಬಾರಿ ಅಪಹಾಸ್ಯಕ್ಕೆ ಒಳಗಾಗಿದ್ದ ಸಂದರ್ಭನೂ ಇದೆ. ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದ್ರು ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಉರ್ಫಿ (urfi) ಪ್ರತಿದಿನ ವಿಚಿತ್ರ ಡ್ರೆಸ್ ಮೂಲಕ ಕ್ಯಾಮರಾ (camera) ಮುಂದೆ ಬಂದು ತನ್ನ ಅಭಿಮಾನಿಗಳಿಗೆ ದಿರಿಸಿನ (dress) ಪ್ರದರ್ಶನವನ್ನು ಮಾಡಿ ಅಭಿಮಾನಿಗಳ ಕಣ್ತುಂಬಿಸಿಕೊಳ್ಳುವಂತೆ ಮಾಡುತ್ತಾಳೆ. ಅನೇಕರು ಉರ್ಫಿ ವಿರುದ್ಧ ಕಿಡಿ ಕಾರುತ್ತಾರೆ ಇನ್ನು ಕೆಲವರು ಹೊಗಳುತ್ತಾರೆ.

ಇದೀಗ ಉರ್ಫಿ ಬಗ್ಗೆ ಅತಿ ಸಂಭಾವನೆ ಪಡೆದ ಬಾಲಿವುಡ್ ಸ್ಟಾರ್ (Bollywood star) ರಣಬೀರ್ ಕಪೂರ್ (Ranbir Kapoor) ಮಾತನಾಡಿದ್ದಾರೆ. ನಟಿ ಕರೀನಾ ಕಪೂರ್ (Kareena Kapoor) ಜೊತೆಗಿನ ಮಾತುಕತೆಯಲ್ಲಿ ರಣಬೀರ್ ಕಪೂರ್ ಉರ್ಫಿ ಬಗ್ಗೆ ಮಾತನಾಡಿದ್ದಾರೆ.

ಉರ್ಫಿ ಜಾವೇದ್ ಫ್ಯಾಷನ್‌ಗೆ ನಾನು ಫ್ಯಾನ್ (fan) ಅಲ್ಲ, ಅದು ಕೆಟ್ಟ ಅಭಿರುಚಿ ಎಂದು ಅವಳು ಧರಿಸುವ ವಿಚಿತ್ರ ಡ್ರೆಸ್‌ನ ಬಗ್ಗೆ ರಣಬೀರ್ ಕಪೂರ್ ನಟಿ ಕರೀನಾ ಕಪೂರ್ ಜೊತೆ ಮಾತನಾಡಿಕೊಂಡಿದ್ದಾರೆ. ಕರೀನಾ ಕಪೂರ್, ಉರ್ಫಿಯ ಫಲಕವನ್ನು (board) ತೋರಿಸಿ ಈ ವ್ಯಕ್ತಿ ಯಾರೆಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.

ಉರ್ಫಿ ಎಂದು ಹೇಳಿದ ರಣಬೀರ್, ನಾನು ಈ ರೀತಿಯ ಎಲ್ಲ ಫ್ಯಾಷನ್ ಗೆ ಅಭಿಮಾನಿಯಲ್ಲ (fan). ಇದು ನನಗೆ ಇಷ್ಟಾನು ಆಗುದಿಲ್ಲ ಎಂದು ಹೇಳಿದರು. ಮತ್ತೆ ಇದರ ಬಗ್ಗೆ ಕರೀನಾ ಕಪೂರ್ ಇನ್ನಷ್ಟು ಮಾತನಾಡಿ, ಇದು ಒಳ್ಳೆಯ ಅಥವಾ ಕೆಟ್ಟದಾದ ಅಭಿರುಚಿನಾ (taste)ಎಂದು ಕೇಳಿದರು. ಈ ಮಾತಿಗೆ ಪ್ರತಿ ಉತ್ತರವಾಗಿ ನೀಡಿದ ನಟ ರಣಬೀರ್ ಕಪೂರ್ ತಕ್ಷಣಕ್ಕೆ ‘ಕೆಟ್ಟ ಅಭಿರುಚಿ’ (bad taste) ಎಂದು ಹೇಳಿದರು.

ಉರ್ಫಿ ಜಾವೇದ್ ನ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ಸ್ಟಾರ್ ಗಳ ಗಮನವನ್ನು ಸೆಳೆದಿದ್ದಾಳೆ. ಕಂಗನಾ ರಣಾವತ್, (Kangana Ranaut)ಮಸಾಬಾ ಗುಪ್ತಾ(masaba Gupta) ಸೇರಿದಂತೆ ಅನೇಕರು ಉರ್ಫಿ ಫ್ಯಾಷನ್ ಬಗ್ಗೆ ಮಾತನಾಡಿದ್ದಾರೆ. ಕಾಫಿ ವಿತ್ ಕರಣ್‌ (coffee with Karan)ಶೋನಲ್ಲಿ(show) ನಟ ರಣವೀರ್ ಸಿಂಗ್ ಕೂಡ ಉರ್ಫಿ ಬಗ್ಗೆ ಮಾತನಾಡಿದ್ದರು. ಹಾಗೆಯೇ ಇವಳನ್ನು ಫ್ಯಾಷನ್ ಐಕಾನ್(fashion icon) ಎಂದು ಹೇಳಿದ್ದರು. ಉರ್ಫಿ ತನ್ನ ಉಡುಗೆ ಮೂಲಕವೇ ನೆಟ್ಟಿಗರ ಹಾಗೆಯೇ ಸ್ಟಾರ್ ಗಳ ಗಮನ ಸೆಳೆಯುತ್ತಿದ್ದಾರೆ.

ರಣಬೀರ್ ಕಪೂರ್ ‘ತು ಜೂಟಿ ಮೈ ಮಕ್ಕಾರ್(tu jhooti Mai Makkar)’ ಸಿನಿಮಾ ಮೂಲಕ ತನ್ನ ಅಭಿಮಾನಿಗಳ ಮುಂದೆ ಇತ್ತೀಚೆಗಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ. ಲವ್ ರಂಜನ್ (love Ranjan)ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು ಎಲ್ಲರ ಬಾಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತು ಜೂಟಿ ಮೈ ಮಕ್ಕಾರ್ ಚಲನಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಶ್ರದ್ಧಾ ಕಪೂರ್ (Shraddha Kapoor)ನಾಯಕಿಯಾಗಿ (actress)ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್(box office) ನಲ್ಲೂ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.

ಅರ್ಜುನ್ ರೆಡ್ಡಿ(Arjun Reddy) ಖ್ಯಾತಿಯ ನಿರ್ದೇಶಕ(director) ಸಂದೀಪ್ ರೆಡ್ಡಿ ವಾಂಗ ಆಕ್ಷನ್ ಕಟ್ ಹೇಳುತ್ತಿರುವ ಅನಿಮಲ್ ಚಲನಚಿತ್ರದಲ್ಲಿ ಸದ್ಯಕ್ಕೆ ರಣಬೀರ್ ಕಪೂರ್ ನಟನೆಯಲ್ಲಿ ಇವಾಗ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ (rashmika mandanna)ನಾಯಕಿಯಾಗಿ ಕಾಣಸಿಕೊಂಡಿದ್ದಾರೆ.

Leave A Reply

Your email address will not be published.