LIC Children Policy : ‘LIC’ಯಲ್ಲಿದೆ ಮಕ್ಕಳಿಗಾಗಿ ಸೂಪರಾದ ಪಾಲಿಸಿ ; ಕಡಿಮೆ ಹಣ ಹೂಡಿಕೆಗೆ ಮಕ್ಕಳ ಭವಿಷ್ಯ ಭದ್ರ!

LIC Children Policy : ಭಾರತೀಯ ವಿಮಾ ನಿಗಮ (LIC) ದಲ್ಲಿ ಮಕ್ಕಳಿಗಾಗಿ ಹಣ ಹೂಡಿಕೆ ಮಾಡಲು ಇಲ್ಲಿದೆ ಉತ್ತಮ ಪಾಲಿಸಿ. ಎಲ್ಲರಿಗೂ ತಿಳಿದಿರುವ ಹಾಗೇ ಭಾರತೀಯ ವಿಮಾ ನಿಗಮ (LIC) ಹಣ ಹೂಡಿಕೆ ಜೀವನದಲ್ಲಿ ಅತ್ಯುತ್ತಮ ಆಯ್ಕೆ ಆಗಿದೆ. ಈ ಯೋಜನೆಯ ಅಡಿಯಲ್ಲಿ ಜನರಿಗೆ ಅನೇಕ ಉಪಯೋಗ ಅನೇಕ ಯೋಚನೆಯನ್ನು ತರುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ಮಕ್ಕಳಿಗಾಗಿಯೇ ಹೊಸ ಪಾಲಿಸಿ (policy) ಯೊಂದನ್ನು ತಂದಿದ್ದಾರೆ.ಈ ಯೋಜನೆಯೂ ಮಕ್ಕಳ ಉಜ್ವಲ ಭವಿಷ್ಯ(LIC Children Policy)ಕ್ಕಾಗಿವೆ ಎಂದು ಹೇಳಬಹುದು.

ಜನರ ಭದ್ರತೆಗಾಗಿ ಹಣಹೂಡಿಕೆ ಗೆ ಎಲ್ಐಸಿ (LIC) ಒಂದು ಮಾರ್ಗವಾಗಿದೆ. ಜನರು ಹಣ ವನ್ನು ಯಾವುದೇ ಭಯವಿಲ್ಲದೇ ಇದರಲ್ಲಿ ಹೂಡಿಕೆ ಮಾಡುತ್ತಾರೆ. ಈ ಎಲ್ಐಸಿ (LIC)  ಯೋಜನೆಯು ಮಕ್ಕಳಿಂದ ವೃದ್ಧರವರೆಗೆ ಇವೆ.

ಮಕ್ಕಳ ಎಲ್ಐಸಿ (LIC) ಯೋಜನೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ:

ಈ ಯೋಜನೆಯ ಹೆಸರು ಜೀವನ್ ತರುಣ್ ಪಾಲಿಸಿ (Jeevan Tharun Policy), ಈ ಯೋಚನೆಯೇ ಸಹಾಯದಿಂದ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಬಹುದು. ಇದೊಂದು ಪ್ರಿಮಿಯಂ ಪಾವತಿಯ ಯೋಜನೆಯಾಗಿದೆ. ಇದರಿಂದ ಮಕ್ಕಳ ಜೀವನಕ್ಕೆ ಸುರಕ್ಷತೆಯ ಸೌಲಭ್ಯ ಕಲ್ಪಿಸುತ್ತದೆ. ಈ ಪಾಲಿಸಿ ಮಕ್ಕಳಿಗೆ ಮಾಡಿಸಲು ಅವರ ವಯಸ್ಸಿನ ಮಿತಿಯ 90 ದಿನಗಳಿಂದ 13 ವರ್ಷಗವರೆಗೆ ಆಗಿರಬೇಕು, ಹಣವನ್ನು ಮಗುವಿಗೆ 20 ವರ್ಷ ಆಗುವವರೆಗೂ ಪಾವತಿಸಬಹುದು. ಇದರ ಅವಧಿ 25 ವರ್ಷಗಳವರೆಗೆ ಅದಾದ ನಂತರ ಇದು ಕೊನೆಗೊಳ್ಳುತ್ತದೆ.  ಈ ಯೋಜನೆಯಲ್ಲಿ ಕನಿಷ್ಠವಾಗಿ  ವಿಮಾ 75000  ಇರಬೇಕು ಗರಿಷ್ಠ ಎಂದು ಯಾವುದೇ ಮಿತಿ ಇಲ್ಲ. ಮಕ್ಕಳ ಜೀವನಕ್ಕೆ ಇದೊಂದು ಒಳ್ಳೆಯ ಮಾರ್ಗವಾಗಿದೆ.

ಈ ಜೀವನ್ ತರುಣ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ ಮಕ್ಕಳ ಪೋಷಕರು ಯಾವುದೇ ಕಾರಣದಿಂದ ಸಾವನ್ನಪ್ಪಿದರು ಎಲ್ಲಾ ಭವಿಷ್ಯದ ಪ್ರೀಮಿಯಂ ಪಾವತಿಯನ್ನು ಮನ್ನಾ ಮಾಡಲಾಗುತ್ತದ. ಹಾಗೂ ಈ ಯೋಜನೆಯ ಅಡಿಯಲ್ಲಿ ₹ 26 ಲಕ್ಷದವರೆಗೆ ವಿಮೆ ಪಡೆಯಬಹುದು.

ಜೀವನ್ ತರುಣ್ ಪಾಲಿಸಿ ಒಂದೊಳ್ಳೆ ಪಾಲಿಸಿ (policy) ಆಗಿದೆ ಹಾಗಾಗೀ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನಂಬಿಕೆಯಿಂದ ಹಣ ಹೂಡಿಕೆ ಮಾಡಿ ನೆಮ್ಮದಿಯಿಂದ ಬದುಕಬಹುದು.

Leave A Reply

Your email address will not be published.