Romance In Moving Car : ಚಲಿಸುತ್ತಿದ್ದ ಕಾರನ್ನು ಆಟೋಮೋಡ್‌ನಲ್ಲಿಟ್ಟ ಪತಿ, ಪತ್ನಿಯೊಂದಿಗೆ ಸರಸ! ಕೊನೆಗೇನಾಯ್ತು?

Romance In Moving Car: ಸೋಷಿಯಲ್ ಮೀಡಿಯಾದಲ್ಲಿ (social media) ಪ್ರತಿದಿನ ಹಲವಾರು ವಿಚಾರಗಳು ಹರಿದಾಡುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನೀವು ಏನಂತಿರೋ!!. ಯಾಕೆ ಅಂತೀರಾ? ಇಲ್ಲೊಬ್ಬ ಚಲಿಸುತ್ತಿದ್ದ ಕಾರನ್ನು ಆಟೋಮೋಡ್‌ನಲ್ಲಿಟ್ಟು ತನ್ನ ಪತ್ನಿಯೊಂದಿಗೆ ಸರಸವಾಡಿದ್ದಾನೆ (Romance In Moving Car). ಮುಂದೇನಾಯ್ತು ಗೊತ್ತಾ? ಬನ್ನಿ ಸ್ಟೋರಿ ಓದಿ.

 

ಪತಿ-ಪತ್ನಿಯ ಜೊತೆ ಹೈವೇಯಲ್ಲಿ ಅತಿವೇಗದಲ್ಲಿ ಓಡುವ ಕಾರಿನಲ್ಲಿ ರೀಲ್ ಮಾಡಿದ್ದಾನೆ. ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ತನ್ನ ಪತ್ನಿಯ ಜೊತೆ ಸರಸವಾಡಿದ್ದಾನೆ. ನಂತರ ಈ ರೀಲ್ ಅನ್ನು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೇರ್ ಮಾಡಿದ್ದೇ ತಡ, ವಿಡಿಯೋ ಸಖತ್ ವೈರಲ್ (viral video) ಆಗಿದ್ದು, ಕೊನೆಗೆ ಈ ಜೋಡಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

ಈತ ಅಧಿಕಾರಿಯಾಗಿದ್ದು, ಸವಾಯಿ ಮಾಧೋಪುರ ನಿವಾಸಿ, ವ್ಯಾಪಾರದ ನಿಮಿತ್ತ ಕೋಟಾದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಮಾರ್ಚ್ 1 ರಂದು, ಅವರು ತಮ್ಮ ಪತ್ನಿ ನಜ್ಮಾ ಬಾನೊ ಅವರೊಂದಿಗೆ ಟೋಂಕ್‌ನ ನಿವಾಯ್‌ನಲ್ಲಿರುವ ತಮ್ಮ ಸಹೋದರಿಯ ಮನೆಗೆ ಹೋಗುತ್ತಿದ್ದರು. ಕಾರಿನಲ್ಲಿ ಹೋಗುವಾಗ ಇಬ್ಬರು ಮೋಜಿನ ಮೂಡ್‌ನಲ್ಲಿದ್ದರು. ಹಾಗಾಗಿ ಪತ್ನಿ ರೀಲ್‌ ಮಾಡುವಂತೆ ಹೇಳಿದ್ದಾರೆ. ನಂತರ ಕಾರನ್ನು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ ಅಂದರೆ ಆಟೋ ಮೋಡ್‌ನಲ್ಲಿ ಹಾಕಿ ಅಧಿಕಾರಿ ಪತ್ನಿಯ ಜೊತೆ ರೀಲ್‌ ಮಾಡಿದ್ದಾರೆ.

ಈ ಬಗ್ಗೆ ಈತ ಮಾತನಾಡಿದ್ದು, ನನ್ನ ಬಳಿ ಎಸ್‌ಯುವಿ 700 ಕಾರು (suv 700 car) ಇದೆ. ಟೋಂಕ್‌ಗಿಂತ 15 ಕಿಲೋಮೀಟರ್‌ ಮುಂದೆ ಹೋಗುವಾಗ ರಸ್ತೆ ಖಾಲಿ ಇತ್ತು. ಹಾಗಾಗಿ ಕಾರನ್ನು ಆಟೋ ಮೋಡ್‌ನಲ್ಲಿರಿಸಿ ಪತ್ನಿಯೊಂದಿಗೆ ರೀಲ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದಾಗಿ ಹೇಳಿದ್ದಾರೆ. ಇದು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದಂತೆ. ಈ ತಪ್ಪು ನನ್ನನ್ನು ತೊಂದರೆಗೆ ಸಿಲುಕಿಸುತ್ತದೆ ಎಂಬುದರ ಅರಿವು ನನಗಿರಲಿಲ್ಲ. ನಾನು ಕೈ ಜೋಡಿಸಿ ವಿನಂತಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ.

ಹಾಗೇ ಇನ್ನು ಮುಂದೆ ಎಂದಿಗೂ ಆಟೋ ಪೈಲಟ್ ಮೋಡ್‌ನಲ್ಲಿ ಓಡಿಸುವುದಿಲ್ಲ ಎಂದಿದ್ದಾರೆ. ಈ ರೀತಿಯಾಗಿ ಮಾಡುವುದು ಕಾರು ಮತ್ತು ಬೈಕ್ ಸ್ಟ್ಯಾಂಡ್ ಮೋಟಾರು ವಾಹನ ಕಾಯ್ದೆಯಲ್ಲಿ ಅಪರಾಧ ಎಂದು ಹೆಚ್ಚುವರಿ ಎಸ್ಪಿ ಹಿಮಾಂಶು ಶರ್ಮಾ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಕೋಟ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.