PM Modi : ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರಿಗೆ ಬಂಪರ್‌ ಆಫರ್‌, ಕೇಂದ್ರ ಸರಕಾರದಿಂದ ದೊರಕಲಿದೆ ಲಕ್ಷ ರೂಪಾಯಿ!

PM modi : ನಿಮಗೆ ಮನಸ್ಸಿದ್ದರೆ ಸಾಧಿಸುವ ಛಲವಿದ್ದರೆ ಮನೆಯಲ್ಲೇ ಕುಳಿತು ಹಣ ಸಂಪಾದಿಸಬಹುದು. ನಿಮ್ಮಲ್ಲಿ ಛಾಯಾಗ್ರಹಣದ(photography) ಕೌಶಲ್ಯವಿದ್ದರೆ ಸುಲಭವಾಗಿ ಮನೆಯಿಂದಲೇ ಹಣ ಮಾಡಬಹುದು. ಇದೀಗ ಸುಲಭವಾಗಿ ಹಣ ಗಳಿಸಲು ಕೇಂದ್ರ ಸರ್ಕಾರದಿಂದ (PM modi) ಬಂಪರ್ ಆಫರ್ ನೀಡಲಾಗುತ್ತಿದೆ. ಹೌದು, ಒಂದು ಸುಂದರವಾದ ಫೋಟೋವನ್ನು ಕ್ಲಿಕ್ ಮಾಡಿ ಭಾರತ ಸರ್ಕಾರಕ್ಕೆ ಕಳುಹಿಸಿದ್ರೆ ನಿಮ್ಮ ಖಾತೆಗೆ (account ) ಲಕ್ಷ ರೂಪಾಯಿ ಹಣ ಜಮೆ ಆಗಲಿದೆ.

ಸದ್ಯ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಭಾರತ ಸರ್ಕಾರ ದೇಶಾದ್ಯಂತ ನಡೆಯುವ ಹಬ್ಬಗಳು ಮತ್ತು ಜಾತ್ರೆಗಳನ್ನು ಜನಪ್ರಿಯಗೊಳಿಸಲು ಸ್ಪರ್ಧೆ ಆಯೋಜಿಸಿದ್ದು, ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವವರು ಈ ಸ್ಪರ್ಧೆಯಲ್ಲಿ ಭಾಗಿಯಾಗಬಹುದು. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ನೀವೂ ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಸದ್ಯ ಈ ಮೇಳ ಕ್ಷಣಗಳ ಛಾಯಾಗ್ರಹಣ ಸ್ಪರ್ಧೆಯನ್ನು ಸಂಸ್ಕೃತಿ ಸಚಿವಾಲಯವು ಮೈಗೌ ಸಹಯೋಗದೊಂದಿಗೆ ಆಯೋಜಿಸುತ್ತಿದೆ. ನಿಮ್ಮ ಊರಿನಲ್ಲಿ ಅಥವಾ ನಿಮ್ಮ ಸಮೀಪದಲ್ಲಿ ನಡೆಯುವ ಹಬ್ಬ ಹರಿದಿನಗಳು, ಜಾತ್ರೆಗಳು, ಹಬ್ಬಗಳಿಗೆ ಹೋಗಿ ಒಳ್ಳೆಯ ಫೋಟೋ ತೆಗೆದು, ಅದನ್ನು ಸರಕಾರಕ್ಕೆ ಕಳುಹಿಸಬೇಕು.

ನೀವು ಸೆರೆ ಹಿಡಿದಿರುವ ಫೋಟೋ (photo) ಉತ್ತಮವಾಗಿ, ಆಕರ್ಷಕವಾಗಿ ಇದ್ದರೆ ನಿಮಗೆ ಬಹುಮಾನ ಸಿಗಲಿದೆ. ಒಟ್ಟು ಇಬ್ಬರಿಗೆ ಈ ಬಹುಮಾನ ಸಿಗಲಿದೆ.

ಮುಖ್ಯವಾಗಿ ಮೇಳ ವೈಬ್ಸ್, ಚಟ್ಟೋರಿಗುಲ್ಲಿ, ಮೇಳ ಮುಖಗಳು, ಮೇಳ ಸ್ಟಾಲ್‌ಗಳು ಎಂಬ ನಾಲ್ಕು ವಿಭಾಗಗಳ ಅಡಿಯಲ್ಲಿ ನಿಮ್ಮ ನೆಚ್ಚಿನ ಫೋಟೋವನ್ನು ನೀವು ಕಳುಹಿಸಬಹುದು. ಈ ಸ್ಪರ್ಧೆಯು ಆರು ತಿಂಗಳವರೆಗೆ ಇರುತ್ತದೆ. ಪ್ರತಿ ತಿಂಗಳು ಪ್ರತಿ ವರ್ಗದ ಅಡಿಯಲ್ಲಿ ಮೂರು ಫೋಟೋಗಳನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ.

ಈ ವಿಭಾಗದಲ್ಲಿಯ ವಿಜೇತರಿಗೆ 10 ಸಾವಿರ ರೂಪಾಯಿ, ದ್ವಿತೀಯ ಸ್ಥಾನಕ್ಕೆ 7,500 ರೂ ಮತ್ತು ಮೂರನೇ ಸ್ಥಾನಕ್ಕೆ 5 ಸಾವಿರ ರೂಪಾಯಿ ನೀಡಲಾಗುತ್ತದೆ. ಏಪ್ರಿಲ್​ನಲ್ಲಿ ಈ ಸ್ಪರ್ಧೆಯ ಗ್ರ್ಯಾಂಡ್​ ಫಿನಾಲೆ ನಡೆಯಲಿದ್ದು, ಪ್ರತಿ ವಿಭಾಗದಲ್ಲಿ ಆಯ್ಕೆಯಾದ ಮೂರು ಫೋಟೋಗಳು ಗ್ರ್ಯಾಂಡ್​ ಫಿನಾಲೆಗೆ ಸ್ಪರ್ಧೆ ಮಾಡಲಿದೆ. ಇಲ್ಲಿ ವಿಜೇತರಾದವರಿಗೆ ಒಂದು ಲಕ್ಷ ರೂಪಾಯಿಯನ್ನು ಬಹುಮಾನವಾಗಿದೆ.

ಎರಡನೇ ಸ್ಥಾನಕ್ಕೆ 75 ಸಾವಿರ ರೂಪಾಯಿ ಬಹುಮಾನ ಸಿಗಲಿದೆ. ಇನ್ನು ಮೂರನೇ ಸ್ಥಾನಕ್ಕೆ 50 ಸಾವಿರ ರೂಪಾಯಿ ಬಹುಮಾನವಾಗಿ ಸಿಗಲಿದೆ.

ಈ ಸ್ಪರ್ಧೆಯು ಮಾರ್ಚ್ 31 ರವರೆಗೆ ನಡೆಯಲಿದ್ದು, ಪ್ರತಿ ತಿಂಗಳ ಕೊನೆಯ ದಿನಾಂಕದೊಳಗೆ ಫೋಟೋಗಳನ್ನು ಸಲ್ಲಿಸಬೇಕು. ಆ ತಿಂಗಳ ವಿಜೇತ ಫೋಟೋಗಳ ಪಟ್ಟಿಯಲ್ಲಿ ನಿಮ್ಮನ್ನು ಸೇರಿಸಲಾಗುತ್ತದೆ. ನಂತರ ಗ್ರ್ಯಾಂಡ್ ಫಿನಾಲೆಯಲ್ಲಿ ನಿಮ್ಮ ಫೋಟೋ ಸ್ಪರ್ಧಿಸಲಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವವರು ಮೈ ಗೌ ವೆಬ್‌ಸೈಟ್‌ಗೆ ಹೋಗಿ ತಮ್ಮ ಫೋಟೋಗಳನ್ನು ಕಳುಹಿಸಬಹುದು ಎಂದು ಮಾಹಿತಿ ನೀಡಲಾಗಿದೆ. ಈ ಮೂಲಕ ಒಂದು ಸುಂದರವಾದ ಫೋಟೋವನ್ನು ಕ್ಲಿಕ್ ಮಾಡಿ ಭಾರತ ಸರ್ಕಾರಕ್ಕೆ ಕಳುಹಿಸಿದ್ರೆ ಲಕ್ಷ ರೂಪಾಯಿ ಹಣ ಬಹುಮಾನ ಪಡೆಯಬಹುದಾಗಿದೆ.

ಇದನ್ನೂ ಓದಿ : Ration Card Latest Updates : ಪಡಿತರ ವಿತರಣೆಯಲ್ಲಿ ಬದಲಾವಣೆ ತಂದ ಸರ್ಕಾರ!

Leave A Reply

Your email address will not be published.