Foreign University : ವಿದೇಶೀ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿಯೇ ಶಿಕ್ಷಣ ಸೌಲಭ್ಯಕ್ಕೆ ಒತ್ತಾಯ – ಖಡಕ್‌ ನಿಯಮ ಜಾರಿ

Foreign University: ಭಾರತದಲ್ಲಿ ಆಗಲಿದೆ ವಿದೇಶಿ ಶಿಕ್ಷಣ ಸಂಸ್ಥೆಗಳು. ಹೌದು!! ಹಲವಾರು ವಿಧ್ಯಾರ್ಥಿಗಳು ನಮ್ಮ ಓದನ್ನು ಮುಂದುವರಿಸಲು ವಿದೇಶಕ್ಕೆ ಹೋಗಿ ಅಲ್ಲಿಯ ಸಂಸ್ಥೆ (University) ಯಲ್ಲಿ ಕಲಿಯಬೇಕೆಂಬ ಹಂಬಲದಿಂದ ಭಾರತ ದಿಂದ ದೂರದ ವಿದೇಶಕ್ಕೆ ಪ್ರಯಾಣಿಸುತ್ತಾರೆ. ಆದರೆ ಇದೀಗ ನಮ್ಮ ದೇಶಕ್ಕೆ ವಿದೇಶಿ ಶಿಕ್ಷಣ ಸಂಸ್ಥೆಗಳು ಬರಲಿವೆ.

ನಮಗೆಲ್ಲ ತಿಳಿದಿರುವಂತೆ ವಿದೇಶಿ ಶಿಕ್ಷಣ(Foreign Education) ಎಂದರೆ ಹೆಚ್ಚಿನ ಹಣ ಕಾಸುಗಳ( Financial Need)ಅಗತ್ಯ ಇರುತ್ತದೆ. ಈ ಹಣಕಾಸಿನ ವಿಷಯದಿಂದಲೇ ಹಲವಾರು ವಿದ್ಯಾರ್ಥಿಗಳು ತಮ್ಮ ವಿದೇಶದಲ್ಲಿ ಓದುವ ಕನಸನ್ನು ನನಸು ಮಾಡಲಾಗದೆ ಕನಸನ್ನು ಬಿಟ್ಟು ಬಿಡುತ್ತಾರೆ. ಅಂತವರಿಗಾಗಿಯೇ ಇದೀಗ ವಿದೇಶದ ವಿಶ್ವವಿದ್ಯಾಲಯಗಳು (Foreign University) ನಮ್ಮ ಭಾರತದಲ್ಲಿಯೇ( India) ಆರಂಭವಾಗಲಿದೆ. ಹಲವಾರು ವರ್ಷಗಳಿಂದ ಈ ವಿಷಯದ ಬಗ್ಗೆ ಚರ್ಚೆ ಆಗುತ್ತಿದ್ದು ಸದ್ಯ, ಇದೀಗ ಅನುಷ್ಟಾನಗೊಳಿಸಲು ಸಿದ್ಧವಾಗಿದೆ. ಇದಕ್ಕೂ ಹಿಂದೆಯೂ ಭಾರತ ಈ ವಿಚಾರದ ಬಗ್ಗೆ ಪ್ರಯತ್ನದಲ್ಲಿದ್ದರೂ ಕೂಡ, ಅದು ಯಶಸ್ವಿ ಆಗಿರಲಿಲ್ಲ. ಆದರೆ ಈ ಬಾರಿ ಯುಜಿಸಿ(UGC)ಹಾಗೂ ಕೇಂದ್ರವು ಯೋಜನೆಯನ್ನು ತಮ್ಮ ಕೈಗೆತ್ತಿಕೊಂಡಿದೆ. ಇದನ್ನು ಆದಷ್ಟು ಬೇಗ ಜಾರಿಗೆ ತರಲು ಕೆಲಸವನ್ನು ಕೂಡ ಪ್ರಾರಂಭಿಸಿದೆ.

ವಿದ್ಯಾರ್ಥಿಗಳಿಗೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದಿರುವುದು ಅವಶ್ಯಕ. ಮೊದಲಿಗೆ ಕ್ಯಾಂಪಸ್(Campus) ಗಳ ಪ್ರವೇಶದ (Entrance)ಬಗ್ಗೆ ತಮ್ಮದೇ ಆದ ಸ್ವಾತಂತ್ರ್ಯ ವನ್ನು ಹೊಂದಿರುತ್ತವೆ. ವಿದೇಶದ ವಿದ್ಯಾರ್ಥಿಗಳು(Students) ಹಾಗೂ ದೇಶಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಮಾನದಂಡಗಳನ್ನು ಹೊಂದಿರುತ್ತವೆ. ಈ ಬಳಿಕ ಸಂಸ್ಥೆಯ ಶುಲ್ಕದ ವಿಚಾರದ ಮೇಲೆ ವಿದೇಶಿ ವಿವಿಗಳು ವಿದ್ಯಾರ್ಥಿಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂದು ನಿರ್ಧರಿಸಬಹುದು.ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಶುಲ್ಕವು(Fees) ಸಮಂಜಸವಾಗಿರಬೇಕು ಎಂಬ ಆದೇಶವಿದೆ. ಇನ್ನು ಸಿಬ್ಬಂದಿಗಳ( Staff)ಬಗ್ಗೆ ಹೇಳುವುದಾದರೆ ವಿದೇಶಿ ವಿವಿಗಳು ನೀತಿ ನಿಯಮದ ಮೂಲಕ ಭಾರತದವರು ಅಥವಾ ವಿದೇಶಿಯವರನ್ನು ನೇಮಕಮಾಡಬಹುದಾಗಿದೆ.

ಭಾರತೀಯ ಹಾಗೂ ವಿದೇಶಿ ವಿದ್ಯಾರ್ಥಿ ಇಬ್ಬರಿಗೂ ಸರಿಯಾದ ಅರ್ಹತೆಯನ್ನು ನೀಡಬೇಕೆಂಬ ನೀತಿಯನ್ನು ರೂಪಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಯೋಜನೆ ಭಾರತದ ವಿದ್ಯಾರ್ಥಿಗಳಿಗೆ ಅನೇಕ ವಿಷಯದಲ್ಲಿ ಅನುಕೂಲಕರವಾಗಲಿದೆ. ವಿದ್ಯಾರ್ಥಿಗಳ ಪೋಷಕರಿಗೆ ಹಣಕಾಸಿನ ಬಗ್ಗೆ ಯೋಜನೆ ಇರುವುದಿಲ್ಲ ಹಾಗೂ ತಮ್ಮ ಮಕ್ಕಳನ್ನು ದೂರದ ವಿದೇಶಕ್ಕೆ(Foreign) ಕಲಿಸುವ ಚಿಂತೆ ಇರುವುದಿಲ್ಲ. ವಿದ್ಯಾರ್ಥಿಗಳ ತಮ್ಮ ದೇಶದಲ್ಲಿಯೇ ಇದ್ದು ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗದ ಬಗ್ಗೆ ಹೆಚ್ಚು ಆತಂಕ ಪಡುವ ಅವಶ್ಯಕತೆ ತಲೆದೋರದು.

Leave A Reply

Your email address will not be published.