Maruti Suzuki Launch : ಮುಂದಿನ ನಾಲ್ಕು ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ಸುಜುಕಿಯ ಕಾರುಗಳು!
Maruti Suzuki Launch: ಹೊಸ ವರ್ಷದಲ್ಲಿ ಆಟೊಮೊಬೈಲ್ (Automobile )ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದ್ದು, 2023ರ ಅಂಕಿ ಅಂಶ ಪ್ರಕಾರ ಕಾರು (Car) ಉದ್ಯಮದ ಮಾರುಕಟ್ಟೆಯಲ್ಲಿ (Market ) ಭಾರತದಲ್ಲಿ( India)ಅತಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ ಪೈಕಿ ಮಾರುತಿ ಸುಜುಕಿ(Maruti Suzuki) ಅಗ್ರಗಣ್ಯ ಸ್ಥಾನದಲ್ಲಿದ್ದು, ಇದರ ನಾಲ್ಕು ಮಾದರಿ ಕಾರುಗಳು ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ಅತೀ ಶೀಘ್ರದಲ್ಲಿ ಹೊಸ ಕಾರುಗಳನ್ನು ಲಾಂಚ್(Maruti Suzuki Launch)ಮಾಡಲು ಸಿದ್ಧತೆ ನಡೆಸುತ್ತಿದೆ.
ಸಹಜವಾಗಿ ಮಾರುತಿ ಸುಜುಕಿ ಕಾರುಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಡಿಮ್ಯಾಂಡ್ ಇದ್ದು, ಕಾರುಗಳ ವಿಶೇಷತೆ, ಆಕರ್ಷಕ ಲುಕ್, ಕಾರ್ಯಕ್ಷಮತೆ, ನವೀನ ವೈಶಿಷ್ಟ್ಯದ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಕಾರುಗಳು ಸಿಗುವ ಹಿನ್ನೆಲೆ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಮಾರುತಿ ಕಂಪನಿಯು (Maruti Company )ಬಹುನೀರಿಕ್ಷಿತ ಮೂರು ಎಸ್‍ಯುವಿಗಳನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಹಾಗಿದ್ರೆ, ಈ ಕಾರುಗಳು ಯಾವುದೆಲ್ಲ ಎಂಬ ಮಾಹಿತಿ ನಿಮಗಾಗಿ.
ಮಾರುತಿ ಸುಜುಕಿ ತನ್ನ ಬಹುನೀರಿಕ್ಷಿತ ‘ಜಿಮ್ನಿ 5-ಡೋರ್'(Maruti Suzuki Jimny 5-door) ಆಫ್-ರೋಡ್ ಎಸ್‍ಯುವಿಯನ್ನು(Off-Road SUVs) ಕಳೆದ ಜನವರಿಯಲ್ಲಿ ನಡೆದ ದೆಹಲಿಯ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಳಿಸಿತ್ತು. ಜಿಮ್ನಿ 5-ಡೋರ್, ಆಫ್-ರೋಡ್ ಎಸ್‍ಯುವಿಯಾಗಿರುವುದರಿಂದ ಪವರ್ ಫುಲ್ ಎಂಜಿನ್ ಅನ್ನು ಒಳಗೊಂಡಿದೆ. ಇದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದ್ದು, 105 bhp ಪವರ್, 134 Nm ಪೀಕ್ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. 5-ಸ್ವೀಡ್ ಮ್ಯಾನುವಲ್/ 4-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 9 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಹಿತ ಹೆಚ್ಚಿನ ವಿಶೇಷತೆಯನ್ನು ಹೊಂದಿದೆ.
ಜನವರಿಯಲ್ಲಿ ನಡೆದ ದೆಹಲಿಯ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡ ಬಳಿಕ ಬುಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು, ರೂ.25,000 ಪಾವತಿಸುವ ಮೂಲಕ ಬುಕಿಂಗ್ ಮಾಡಲು ಅನುವು ಮಾಡಿಕೊಡಲಾಗಿದೆ. ಬಹುತೇಕ ಈ ಜಿಮ್ನಿ ಮೇ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಸದ್ಯ, ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಗೆ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಹಣಾಹಣಿ ನೀಡಲು ಪ್ರತಿಸ್ಪರ್ಧಿ ಇಲ್ಲದಿದ್ದರೂ ಕೂಡ ಮಹೀಂದ್ರಾ ಥಾರ್ (Mahindra Thar) ಜೊತೆಗೆ ಪೈಪೋಟಿ ನೀಡುವ ಸಾಧ್ಯತೆಗಳಿವೆ.
ಮಾರುತಿ ಸುಜುಕಿಯ ಬ್ರೆಝಾ ಸಿಎನ್ಜಿ (Maruti Suzuki Brezza CNG )ಕೂಡ ಈ ವರ್ಷದ ದ್ವಿತೀಯಾರ್ಧದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಲಗ್ಗೆ ಇಡಲು ಅಣಿಯಾಗುತ್ತಿದೆ. ಬ್ರೆಝಾ ಸಿಎನ್ಜಿ (Brezza CNG)ಎಂಜಿನ್ ಕಾರ್ಯಕ್ಷಮತೆ ಗಮನಿಸಿದರೆ, ಇದು 1.5-ಲೀಟರ್, 4-ಸಿಲಿಂಡರ್ K15C ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 87 hp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಕಾರು, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ನಂತಹ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು ಈ ಕಾರಿನ ಬೆಲೆ ಎಷ್ಟು ಎಂದು ಗಮನಿಸಿದರೆ, ಈ ಕಾರು 8.18 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಒಳಭಾಗ ಹಾಗೂ ಹೊರಭಾಗದ ವೈಶಿಷ್ಟ್ಯ ಬಹುತೇಕ ಪೆಟ್ರೋಲ್ ಮಾದರಿಗೆ ಹೋಲಿಕೆಯಾಗಿರಲಿದ್ದು, ಒಂದು ಕೆಜಿ ಸಿಎನ್ಜಿ ಇಂಧನ ದಹಿಸಿ, 28 ಕಿಲೋಮೀಟರ್ ಮೈಲೇಜ್ ಒದಗಿಸಲಿದೆ.ಹೆಚ್ಚು ಇಂಧನ ದಕ್ಷತೆ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನೂ ಸೆಳೆಯುವ ಸಾಧ್ಯತೆ ಇದೆ. ಈ ಕಾರು ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಸುಮಾರು 70,000 ಹೆಚ್ಚುವರಿ ಬೆಲೆ ಹೊಂದಿರುವ ಸಾಧ್ಯತೆಗಳಿವೆ.
ಮಾರುತಿ ಸುಜುಕಿಯ ಮತ್ತೊಂದು ಬಹು ಬೇಡಿಕೆಯ ಕಾರು ಫ್ರಾಂಕ್ಸ್ (Maruti FRONX ) ಎಸ್‍ಯುವಿ, ಈ ವರ್ಷದ ಮಧ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಫ್ರಾಂಕ್ಸ್ ಎಸ್ಯುವಿ(FRONX SUV) 1.2-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 89 bhp ಪವರ್, 113 Nm ಪೀಕ್ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಮತ್ತೊಂದು, 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 100 bhp ಪವರ್, 148 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಭಾರತದಲ್ಲಿ ಬಿಡುಗಡೆಯ ಬಲೆನೊ ಆಧಾರಿತ ಎಂಜಿನ್ ಪಡೆದಿರುವ ಫ್ರಾಂಕ್ಸ್ ಕಾರು, ಕಿಯಾ ಸೊನೆಟ್ ಹಾಗೂ ಹುಂಡೈ ವೆನ್ಯೂ ಕಾರುಗಳಿಗೆ ಟಕ್ಕರ್ ನೀಡುವ ಸಾಧ್ಯತೆಗಳಿವೆ. 9-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಸನ್ ರೊಫ್ ರೀತಿಯ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಕಾರು ಮ್ಯಾನುವಲ್/ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ರೂ.11,000 ಮುಂಗಡ ಹಣ ಪಾವತಿಸಿ, ಬುಕಿಂಗ್ ಮಾಡಬಹುದಾಗಿದೆ.ಇನ್ನು, ಮಾರುತಿ ಸುಜುಕಿ ಫ್ರಾಂಕ್ಸ್, ಜಿಮ್ನಿ 5-ಡೋರ್ ಹಾಗೂ ಬ್ರೆಝಾ ಸಿಎನ್ಜಿ ಎಸ್‍ಯುವಿಗಳನ್ನು ಈ ವರ್ಷವೇ ಬಿಡುಗಡೆ ಆಗಲಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಅಣಿಯಾಗುತ್ತಿದೆ.