Supreme Court : ಸಲಿಂಗ ವಿವಾಹ ವಿಚಾರ: ಐವರು ನ್ಯಾಯಾಧೀಶರಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
Supreme Court : ನವದೆಹಲಿ: ಸಲಿಂಗ ದಂಪತಿಗಳ ಮದುವೆಗೆ ಮಾನ್ಯತೆ ನೀಡುವ ವಿಷಯವನ್ನು ಸುಪ್ರೀಂಕೋರ್ಟ್ ( Supreme Court) ಸೋಮವಾರ 5 ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಏಪ್ರಿಲ್ 18 ರಂದು ವಿಚಾರಣೆಗಾಗಿ ವರ್ಗಾಯಿಸಿದೆ.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಕೇಂದ್ರವು ಸುಪ್ರೀಂ ಕೋರ್ಟ್ ನಲ್ಲಿ ವಿರೋಧಿಸಿತ್ತು.ಇದು ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನ ಮತ್ತು ಅಂಗೀಕೃತ ಸಾಮಾಜಿಕ ಮೌಲ್ಯಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿತ್ತು.ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅನ್ನು ಅಪರಾಧ ಮುಕ್ತಗೊಳಿಸಿದ್ದರೂ, ಅರ್ಜಿದಾರರು ದೇಶದ ಕಾನೂನುಗಳ ಅಡಿಯಲ್ಲಿ ಸಲಿಂಗ ವಿವಾಹವನ್ನು ಗುರುತಿಸುವ ಮೂಲಭೂತ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ವಿವಾಹದ ಸಂಸ್ಥೆಯನ್ನು ಯಾವುದೇ ಅಸಂಘಟಿತ ವೈಯಕ್ತಿಕ ಕಾನೂನುಗಳು ಅಥವಾ ಯಾವುದೇ ಕ್ರೋಡೀಕರಿಸಿದ ಶಾಸನಬದ್ಧ ಕಾನೂನುಗಳಲ್ಲಿ ಗುರುತಿಸಲಾಗುವುದಿಲ್ಲ ಅಥವಾ ಸ್ವೀಕರಿಸಲಾಗುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ.ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಗೆ ಸಂಬಂಧಿಸಿದ ಅರ್ಜಿಗಳನ್ನು ಸಾಂವಿಧಾನಿಕ ಪೀಠದ ಮುಂದೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಏಪ್ರೀಲ್ 18 ರಂದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಸಲಿಂಗ ಸಂಬಂಧಗಳು ಕಾನೂನುಬಾಹಿರವಲ್ಲದಿದ್ದರೂ, ಭಾರತೀಯ ವ್ಯವಸ್ಥೆಯಲ್ಲಿ ಪುರುಷ ಮತ್ತು ಮಹಿಳೆಯ ನಡುವೆ ಮದುವೆ ವ್ಯವಸ್ಥೆ ಹೊಂದಿದೆ. ಸಲಿಂಗ ವ್ಯಕ್ತಿಗಳು ಪಾಲುದಾರರಾಗಿ ಒಟ್ಟಿಗೆ ವಾಸಿಸುವುದು ಮತ್ತು ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕುಟುಂಬ ಘಟಕದ ಪರಿಕಲ್ಪನೆ ವಿರುದ್ಧವಾಗಿದೆ ಎಂದು ಅಫಿಡೆವಿಟ್‌ನಲ್ಲಿ ಅಭಿಪ್ರಾಯಪಟ್ಟಿದೆ.ಒಂದೇ ಲಿಂಗಕ್ಕೆ ಸೇರಿದ ವ್ಯಕ್ತಿಗಳ ನಡುವಿನ ಮದುವೆಯ ಗುರುತಿಸುವಿಕೆ ನೋಂದಣಿಗಿಂತ ದೂರವಿದೆ.
ಮದುವೆ ತನ್ನದೆಯಾದ ಸಾರ್ವಜನಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ವ್ಯವಸ್ಥೆಯನ್ನು ರಚಿಸುತ್ತವೆ. ಅಲ್ಲದೆ ಹಲವಾರು ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ಹೊಂದುವ ಸಾಮಾಜಿಕ ವ್ಯವಸ್ಥೆಯಾಗಿದೆ. ಈ ಕಾರಣದಿಂದಲೇ ನೊಂದಣಿಗಿಂತ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗುತ್ತದೆ.