whatsapp ನಿಂದ 21 ಹೊಸ ಎಮೋಜಿ ಬಿಡುಗಡೆ! ನಿಮ್ಮ ಫೋನ್‌ನನಲ್ಲಿ ಇದೆಯಾ?

WhatsApp Updates: ಮೆಟಾ ಒಡೆತನದ ವಾಟ್ಸಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್​ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ವಾಟ್ಸಪ್ ಕಳೆದ ವರ್ಷ ಸಾಕಷ್ಟು ಅಭಿವೃದ್ದಿ ಕಂಡ ಈ ಆ್ಯಪ್ ಇದೀಗ ಬಳಕೆದಾರರ ಮೆಚ್ಚುಗೆ ಪಡೆದ ಅಪ್ಲಿಕೇಷನ್ ಆಗಿಬಿಟ್ಟಿದೆ. ಇದೀಗ ಅನೇಕ ಹೊಸ ಹೊಸ ಫೀಚರ್​ಗಳ (WhatsApp New Feature) ಮೇಲೆ ಕಣ್ಣಿಟ್ಟಿರುವ ವಾಟ್ಸಪ್ ಒಂದೊಂದು ಅಪ್ಡೇಟ್ (WhatsApp updates) ಪರಿಯಿಸುತ್ತಿದೆ.

ಈಗಾಗಲೇ ವಾಟ್ಸಾಪ್ ಕಳೆದ ವರ್ಷದಲ್ಲಿ ತನ್ನ ಬಳಕೆದಾರರಿಗೆ ಅನುಕೂಲವಾಗುವಂತಹ ಸಾಕಷ್ಟು ಫೀಚರ್ಸ್​​ಗಳನ್ನು ಬಿಡುಗಡೆ ಮಾಡಿದೆ. ಅದರ ಜೊತೆಗೆ ಮುಂದಿನ ವರ್ಷದಲ್ಲಿ ಇನ್ನೂ ಹಲವಾರು ಫೀಚರ್ಸ್​ಗಳು ಬಿಡುಗಡೆಯಾಗಲಿವೆ ಎಂದು ಹೇಳಿತ್ತು. ಅದೇ ರೀತಿ ಇದೀಗ ವಾಟ್ಸಾಪ್ ಮೂಲಕ ಎಕ್ಸ್​ಪೇರಿಂಗ್ ಗ್ರೂಪ್ ಫೀಚರ್ಸ್ ನೀಡುವುದಾಗಿ ಘೋಷಣೆ ಮಾಡಿದ್ದ ವಾಟ್ಸ್​ಆ್ಯಪ್ ಮತ್ತೊಂದು ಉಪಯುಕ್ತ ಆಯ್ಕೆಯನ್ನು ನೀಡಿದೆ. ಇದೀಗ ಬಳಕೆದಾರರಿಗೆ ಹೊಸದಾಗಿ 21 ಎಮೋಜಿಗಳನ್ನು ಪರಿಚಯಿಸಿದೆ.

ಈ ಹೊಸ ಎಮೋಜಿಗಳನ್ನು ವಾಟ್ಸ್​ಆ್ಯಪ್​ ಕೀಬೋರ್ಡ್‌ನಿಂದ ನೇರವಾಗಿ ಸೆಂಡ್‌ ಮಾಡಬಹುದಾಗಿದೆ. ವಾಬೇಟಾಇನ್ಫೋ ಪ್ರಕಾರ ಯುನಿಕೋಡ್ 15.0 ನಿಂದ ಈ 21 ಎಮೋಜಿಗಳನ್ನು ಕಳುಹಿಸಲು ಬೇರೆ ಕೀಬೋರ್ಡ್ ಅನ್ನು ಡೌನ್‌ಲೋಡ್ ಮಾಡಬೇಕಾದ ಅಗತ್ಯವಿಲ್ಲ.

ಸದ್ಯದ ಮಾಹಿತಿಯ ಪ್ರಕಾರ, ಕೆಲವು ಬಳಕೆದಾರರಿಗೆ ಈಗಾಗಲೇ ಅಧಿಕೃತ ವಾಟ್ಸ್​ಆ್ಯಪ್​ ಕೀಬೋರ್ಡ್‌ ಮೂಲಕ ಈ ಹೊಸ ಎಮೋಜಿಗಳನ್ನು ಉಪಯೋಗಿಸಬಹುದಾಗಿದೆ.

ಇದರ ಮೂಲಕ ಬಳಕೆದಾರರು ಸಂದೇಶದ ಮೂಲಕ ವ್ಯಕ್ತಪಡಿಸಬಹುದಾದ ಭಾವನೆಗಳನ್ನು ಕೆಲವೇ ಎಮೋಜಿಗಳಲ್ಲಿ ತಿಳಿಸಬಹುದು. ನಿಮಗೂ ಆಯ್ಕೆ ಬೇಕು ಎಂದಾದಲ್ಲಿ ವಾಟ್ಸ್​ಆ್ಯಪ್​ ಖಾತೆಯಲ್ಲಿಯೂ ನೂತನ ಆವೃತ್ತಿಗೆ ಅಪ್ಡೇಟ್‌ ಮಾಡಬೇಕಾಗುತ್ತದೆ.

ಇನ್ನು ಎಕ್ಸ್​ಪೇರಿಂಗ್ ಗ್ರೂಪ್ ಎಂಬ ಫೀಚರ್ ಮೇಲೆ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್​ಆ್ಯಪ್ ನಿಮಗೆ ಆ ಗ್ರೂಪ್​ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್​ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ.

ಮೇಲಿನ ಆಯ್ಕೆ ವಾಟ್ಸ್​ಆ್ಯಪ್ ಗ್ರೂಪ್ ಇನ್​ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತೆ . ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.

ಇದರ ಜೊತೆಗೆ ವಾಟ್ಸ್​ಆ್ಯಪ್ ಐಒಎಸ್‌ ಬೀಟಾ ವರ್ಷನ್‌ನಲ್ಲಿ ಚಾಟ್‌ ಪಟ್ಟಿಯೊಳಗೆ ಪುಶ್‌ ಹೆಸರು (“Push name within the chat list”) ಫೀಚರ್ಸ್‌ ಸೇರ್ಪಡೆ ಮಾಡಲು ಮುಂದಾಗಿದೆ. ಇದು ವಾಟ್ಸ್​ಆ್ಯಪ್​ನಲ್ಲಿ ಅಪರಿಚಿತ ಗುಂಪಿನ ಸದಸ್ಯರಿಂದ ಯಾವುದೇ ಸಂದೇಶ ಬಂದರೆ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ಗಳನ್ನು ಕಾಣಿಸುತ್ತದೆ. ಈ ಮೂಲಕ ಬಳಕೆದಾರರು ಅಪರಿಚಿತ ಕಂಟ್ಯಾಕ್ಟ್‌ ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಸದ್ಯ ಅಪ್ಡೇಟ್ ಮಾಡುವ ಮೂಲಕ ಈ ಮೇಲಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ :Frog-snake viral photo:ಕಪ್ಪೆಯೊಂದು ಹಾವನ್ನು ನುಂಗಿದಾಗ‌..ಏನಾಯಿತು? ಇಲ್ಲಿದೆ ವೀಡಿಯೋ!

Leave A Reply

Your email address will not be published.