Belly fat:ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬೇಕೆ? ಈ ಸಿಂಪಲ್‌ ಟಿಪ್ಸ್‌ಗಳನ್ನು ಫಾಲೋ ಮಾಡಿ

Belly fat :  ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರಿಗೆ ಕಿಬ್ಬೊಟ್ಟೆಯಲ್ಲಿ ಕೊಬ್ಬು (Belly fat) ಶೇಖರಣೆಯಾಗುವುದು ಬಹುದೊಡ್ಡ ಸಮಸ್ಯೆಯಾಗಿದೆ. ಈ ರೀತಿಯ(belly) ಹೊಟ್ಟೆ ನೋಡುವುದಕ್ಕೂ ಕೆಟ್ಟದಾಗಿ ಕಾಣಿಸೋದು ಮಾತ್ರವಲ್ಲದೆ, (health) ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಸರಿಯಾದ (food),ಆಹಾರ ಮತ್ತು (exercise)ವ್ಯಾಯಾಮ ಮಾಡೋದ್ರಿಂದ ಮಾತ್ರ ಬಹುಬೇಗನೆ (fat)ಬೊಜ್ಜು ಕಡಿಮೆ ಮಾಡಬಹುದು.

 

1. ಕೊಬ್ಬು, ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆ ಸಮೃದ್ಧವಾಗಿರುವ ಆಹಾರಗಳನ್ನು ತಪ್ಪಿಸುವುದು ಮತ್ತು ನಿಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಆಹಾರಗಳನ್ನು ಸೇರಿಸುವುದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನಿಂಬೆ ನೀರನ್ನು ಕುಡಿಯುವ ಮೂಲಕ ನಿವಾರಿಸಬಹುದು. ಆ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸುತ್ತದೆ.

3. ಬೆಳಿಗ್ಗೆ ಪ್ರೋಟೀನ್ ಸಮೃದ್ಧವಾದ ಆಹಾರವನ್ನು ಸೇವಿಸಸೋದ್ರಿಂದ ಹಸಿವನ್ನು ನಿಯಂತ್ರಿಸಲು ಮತ್ತು ಕ್ಯಾಲೊರಿ ಭರಿತ ಆಹಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ನೀವು ನಿಮ್ಮ ಹೊಟ್ಟೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡಬಹುದು.

4. ನಿಮಗೆ ಹಸಿವಾಗುವವರೆಗೂ ಕಾಯದೆ ಸಮಯಕ್ಕೆ ಸರಿಯಾಗಿ ತಿನ್ನಿ. ನಿಮಗೆ ಹಸಿವಾಗಿದ್ದರೆ, ಅತಿಯಾಗಿ ತಿನ್ನುವ ಸಾಧ್ಯತೆಯಿದೆ.

5. ಆಹಾರವನ್ನು ನಿಧಾನವಾಗಿ ಜಗಿದು ತಿನ್ನೋದ್ರಿಂದ ಅತಿಯಾದ ಊಟ ತಿನ್ನುವುದನ್ನು ತಡೆಯಬಹುದು. ಆ ರೀತಿಯಾಗಿ ನೀವು ತೂಕವನ್ನು ಸಹ ಕಳೆದುಕೊಳ್ಳಬಹುದು.

6. ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಮಾತ್ರ ತಟ್ಟೆಯಲ್ಲಿ ಬಡಿಸಿ. ಮಿತವಾಗಿ ಮಾತ್ರ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.

7. ಕುಡಿಯುವ ನೀರು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ತೂಕವನ್ನು ನಿರ್ವಹಿಸುವುದು ಮಾತ್ರವಲ್ಲದೆ ಇತರ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಒದಗಿಸುತ್ತದೆ.

8. ಜಂಕ್ ಫುಡ್ ಬದಲಿಗೆ ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಹೊಂದಿರುವ ಆರೋಗ್ಯಕರ ಆಹಾರವನ್ನು ಸೇವಿಸುವುದು ಸಹ ಮುಖ್ಯ.

9. ದಿನಕ್ಕೆ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡುವುದರಿಂದ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ  ಓದಿ : Juice : ಪ್ರತಿದಿನ ಜ್ಯೂಸ್‌ ಕುಡಿಯೋದು ದೇಹಕ್ಕೆ ಒಳ್ಳೆಯದಾ ಕೆಟ್ಟದಾ? ಇಲ್ಲಿದೆ ಅಚ್ಚರಿಯ ಸಂಗತಿ!

 

Leave A Reply

Your email address will not be published.