Pigeons: ‘ಪ್ರೀತಿಯ ಪಾರಿವಾಳ’ ಅಂತ ಕಾಳು ಹಾಕಲು ಹೋದ್ರೆ ಬೀಳುತ್ತೆ ಭಾರೀ ದಂಡ! ಯಾಕೆ ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್!

Pigeons :ಪಾರಿವಾಳ(Pigeons) ಗಳನ್ನು ಕಂಡರೆ ಅನೇಕರಿಗೆ ಪ್ರೀತಿ. ಅವುಗಳು ಕಂಡಾಗಲೆಲ್ಲ ಕಾಳು ಹಾಕುವುದು, ಏನಾದರೂ ತಿನ್ನಲು ನೀಡುವುದು ಮಾಡುತ್ತಾರೆ. ಅಲ್ಲದೇ ಕೆಲವೊಂದು ಬಾರಿ ಅವುಗಳನ್ನು ಹಿಡಿದು ಮುದ್ದಾಡುತ್ತಾರೆ. ಹಳ್ಳಿಗಳಲ್ಲಿ ಇದೆಲ್ಲ ಕಡಿಮೆ ಎನಿಸಿದರೂ, ನಗರ ಪ್ರದೇಶಗಳಲ್ಲಿ ಇಂತಹ ಅನೇಕ ದೃಶ್ಯಗಳನ್ನು ಕಾಣಬಹುದು. ಆದರೆ ನೀವಿನ್ನು ಈ ಪಾರಿವಾಳಗಳನ್ನು ಕಂಡಾಗ ‘ಪ್ರೀತಿಯ ಪಾರಿವಾಳ’ ಅಂತ ಕಾಳು ಹಾಕಲು ಹೋಗಬೇಡಿ ಮಾರ್ರೆ! ಹಾಗೇನಾದರೂ ಹೋದರೆ ನಿಮಗೆ ಭಾರೀ ದಂಡ ಬೀಳುತ್ತೆ! ಪ್ರಾಣಿ, ಪಕ್ಷಿಗಳು ಕಂಡಾಗ ಆಹಾರ, ನೀರು ಕೊಡಬೇಕೆಂದು ಸರ್ಕಾರವೇ ಹೇಳಿದರೂ, ಪಾರಿವಾಳ ವಿಚಾರವಾಗಿ ಈ ವಿಚಿತ್ರವಾದ ರೂಲ್ಸ್ ಯಾಕೆ ಅಂತಾ ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.

 

ಯಾಕಂದರೆ ಪಾರಿವಾಳಗಳಿಂದ ಅನಾರೋಗ್ಯಕ್ಕೆ ತುತ್ತಾಗೋ ಸಾಧ್ಯತೆ ಬಹಳ ಬಹಳ ಹೆಚ್ಚಿದೆ ಅಂತಾ ಶ್ವಾಸಕೋಶ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೌದು, ಪಾರಿವಾಳದ ಹಿಕ್ಕೆಗಳು ನ್ಯುಮೋನಿಟಿಸ್(Pneumonitis) ಅಥವಾ ಗಂಭೀರ ಶ್ವಾಸಕೋಶದ ತೊಂದರೆಗಳು ಮತ್ತು ಅಲರ್ಜಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರೋ ಮಹಾರಾಷ್ಟ್ರದ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪಾರಿವಾಳಗಳಿಗೆ ಆಹಾರ ನೀಡಿದ್ರೆ ದಂಡ ವಿಧಿಸಲಾಗುವುದು ಅಂತಾ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರ(Maharatsra) ದ ಥಾಣೆ(Tane)ಯಲ್ಲಿ ಹೈಪರ್‌ಸೆನ್ಸಿಟಿವ್‌ ನ್ಯುಮೋನಿಯಾ ಅಥವಾ ಅತಿಸೂಕ್ಷ್ಮ ಜ್ವರದ ಕೇಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದು ಒಂದು ಮಾದರಿಯ ಶ್ವಾಸಕೋಶದ ಸೋಂಕು ಆಗಿದ್ದು, ಇದಕ್ಕೆ ಪಾರಿವಾಳದ ಹಿಕ್ಕೆಯ ವಾಸನೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಾಗಿ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪಾರಿವಾಳಗಳಿಗೆ ಆಹಾರ ನೀಡಿದ್ರೆ 500 ರೂಪಾಯಿ ದಂಡ ವಿಧಿಸಲಾಗುತ್ತೆ ಅಂತಾ ನಗರದುದ್ದಕ್ಕೂ ಬ್ಯಾನರ್ ಅಳವಡಿಸಿದೆ.

ವಾಸ್ತವವಾಗಿ, ಪಾರಿವಾಳದ ಹಿಕ್ಕೆಗಳಲ್ಲಿನ ರಾಸಾಯನಿಕಗಳು ಗಾಳಿಯೊಂದಿಗೆ ಮಿಶ್ರಣವಾಗಿದೆ. ಆ ಗಾಳಿಯನ್ನು ಒಳಗೆಳೆದುಕೊಂಡಾಗ ಅದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ಇದು ಶ್ವಾಸಕೋಶದಲ್ಲಿ ಉರಿಯೂತ ಮತ್ತು ಅತಿಸೂಕ್ಷ್ಮ ನ್ಯುಮೋನಿಟಿಸ್ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಕಳೆದ ಏಳೆಂಟು ವರ್ಷಗಳಲ್ಲಿ ಅತಿಸೂಕ್ಷ್ಮ ನ್ಯುಮೋನಿಟಿಸ್‌ನಿಂದ ಬಳಲುತ್ತಿರುವವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ ಎಂದು ಶ್ವಾಸಕೋಶಶಾಸ್ತ್ರಜ್ಞರು ಹೇಳುತ್ತಾರೆ.

ಪಾರಿವಾಳಗಳಿಂದ ಯಾವ ರೀತಿಯ ರೋಗಗಳು ಹರಡಬಹುದು ಗೊತ್ತಾ? ಉಸಿರಾಟದ ಅಲರ್ಜಿಯಿಂದ ಹಿಡಿದು ಗಂಭೀರ ಸೋಂಕುಗಳವರೆಗೆ, ಪಾರಿವಾಳಗಳು ವಿವಿಧ ರೀತಿಯ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗಬಹುದು. ಎರಡನೆಯದು ನ್ಯುಮೋನಿಯಾ-ಸಿಟ್ಟಾಕೋಸಿಸ್ಗೆ ಕಾರಣವಾಗಬಹುದು, ಇದು ಬ್ಯಾಕ್ಟೀರಿಯಾದ ಸೋಂಕಾಗಿದೆ ಮತ್ತು ಚಿಕಿತ್ಸೆ ನೀಡದಿದ್ದಲ್ಲಿ 15 ಪ್ರತಿಶತದಷ್ಟು ಜನರು ಸಾವಿಗೆ ಕಾರಣವಾಗಬಹುದು. ಹಿಸ್ಟೋಪ್ಲಾಸ್ಮಾಸಿಸ್ ಸಮಸ್ಯೆ ಕೂಡ ಇದರಿಂದ ಉಂಟಾಗುತ್ತದೆ. ಇದು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವ ಶಿಲೀಂಧ್ರಗಳ ಸೋಂಕಾಗಿದೆ. ಕ್ರಿಪ್ಟೋಕೊಕಲ್ ಸೋಂಕುಗಳು ಇಮ್ಯುನೊಕೊಪ್ರೊಮೈಸ್ಡ್ ಹೋಸ್ಟ್ ಹೊಂದಿರುವ ಕೆಲವು ಜನರಲ್ಲಿ ಪಲ್ಮನರಿ ಅಥವಾ ಮೆನಿಂಜಿಯಲ್ ಸೋಂಕುಗಳಿಗೆ ಕಾರಣವಾಗಬಹುದು.

ಇದರ ರೋಗದ ಲಕ್ಷಣಗಳು ಹೇಗಿರುತ್ತವೆ ಎಂದರೆ ಅತಿಸೂಕ್ಷ್ಮ ನ್ಯುಮೋನಿಟಿಸ್‌ನ ಲಕ್ಷಣಗಳು ತೀವ್ರ ಅಥವಾ ದೀರ್ಘಕಾಲದ್ದಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ತೀವ್ರವಾದ ರೋಗಲಕ್ಷಣಗಳು ಅಲರ್ಜಿಯನ್ನು ಹೊಂದಿರುವ ಕೆಲವೇ ಗಂಟೆಗಳಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಕೆಲವು ಗಂಟೆಗಳು ಅಥವಾ ದಿನಗಳವರೆಗೆ ಇರುತ್ತದೆ. ಮತ್ತೊಂದೆಡೆ ದೀರ್ಘಕಾಲದ ರೋಗಲಕ್ಷಣಗಳು ನಿಧಾನವಾಗಿ ಬೆಳೆಯಬಹುದು ಮತ್ತು ಕಾಲಾನಂತರದಲ್ಲಿ ಮತ್ತಷ್ಟು ಕೆಟ್ಟದಾಗಿರಬಹುದು ಎನ್ನಲಾಗಿದೆ. ರೋಗದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ, ಉಸಿರಾಟದ ತೊಂದರೆ, ಒಣ ಕೆಮ್ಮು, ಎದೆ ಹಿಡಿಯುವುದು, ಚಳಿ, ಆಯಾಸ, ವಿಪರೀತ ಜ್ವರ, ಸ್ನಾಯುಗಳಲ್ಲಿ ನೋವು, ದೀರ್ಘಕಾಲದ ಕೆಮ್ಮು ಹಾಗೂ ಅನಿರೀಕ್ಷಿತ ತೂಕ ನಷ್ಟ ಎನ್ನಲಾಗಿದೆ.

ಇನ್ನು ಪಾರಿವಾಳಗಳನ್ನು ವಸತಿ ಪ್ರದೇಶಗಳ ಬಳಿ ಬರಲು ಬಿಡಬೇಡಿ ಎಂದು ಟಿಎಂಸಿ ಜನರಿಗೆ ಸಲಹೆ ನೀಡಿದೆ. ಶ್ವಾಸಕೋಶದ ಕಾಯಿಲೆಯಾಗಿರುವ ಅತಿಸೂಕ್ಷ್ಮ ನ್ಯುಮೋನಿಯಾ ಪಾರಿವಾಳಗಳಿಂದ ಹರಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಟಿಎಂಸಿ ಈ ನ್ಯುಮೋನಿಯಾ ಬಗ್ಗೆ ಜನರಿಗೆ ಅರಿವು ಮೂಡಿಸುತ್ತದೆ. ಪೋಸ್ಟರ್‌ಗಳ ಮೂಲಕ ಮನೆ ಮನೆಗೆ ತೆರಳಿ ಎಚ್ಚರಿಕೆಯನ್ನೂ ನೀಡಿತ್ತು.

ಇದನ್ನೂ ಓದಿ :CBI ಅಧಿಕಾರಿಯ ಮಗಳಾದರೂ ಬಸ್‌ ಚಾಲಕಿ ವೃತ್ತಿ ಮಾಡುತ್ತಿರುವ ಮಗಳು! ಇದಕ್ಕೆ ಕಾರಣ ತಿಳಿದರೆ ನಿಮಗೆ ಖಂಡಿತ ಖುಷಿಯಾಗುತ್ತೆ!

Leave A Reply

Your email address will not be published.