ದಕ್ಷಿಣ ಕನ್ನಡ : ಭಯೋತ್ಪಾದನಾ ಚಟುವಟಿಕೆಗೆ ಹಣ ವರ್ಗಾವಣೆ ,ಬಂಧಿತರ ತೀವ್ರ ವಿಚಾರಣೆ ,ಹಲವು ವಿಚಾರ ಬಹಿರಂಗ

NIA Enquiry : ಮಂಗಳೂರು: ಭಯೋತ್ಪಾದನ ಚಟುವಟಿಕೆಗೆ ಹಣ ವರ್ಗಾಯಿಸಿದ ಆರೋಪದಲ್ಲಿ ಬಿಹಾರದ ಪಟ್ನಾದ ಪುಲ್ವಾರಿ ಶರೀಫ್‌ನಲ್ಲಿ ಬಂಧಿತರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಬಂಟ್ವಾಳದ ಐವರಿಗೆ ವಿದೇಶದಿಂದ ಹಣ ಪೂರೈಕೆಯಾಗಿರುವ ಅಂಶ ಎನ್‌ಐಎ ತನಿಖೆಯಲ್ಲಿ( NIA Enquiry) ಬಹಿರಂಗಗೊಂಡಿದೆ.

ಬಂಧಿತ ಆರೋಪಿಗಳನ್ನು ಪಟ್ನಾದಲ್ಲಿ(Patna) ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು,ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ದೇಶಾದ್ಯಂತ ಭಯೋತ್ಪಾದನ ಕೃತ್ಯಕ್ಕೆ ವಿದೇಶದಿಂದ ಹಣ ಪೂರೈಕೆ ಆಗುತ್ತಿದ್ದು, ಅದನ್ನು ಉಗ್ರ ಕೃತ್ಯಗಳಲ್ಲಿ ತೊಡಗು ವವರಿಗೆ ನೀಡಲು ಬೇರೆ ಬೇರೆ ರಾಜ್ಯಗಳಲ್ಲಿ ತಂಡ ಕಾರ್ಯಾಚರಿಸುತ್ತಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈಗಾಗಲೇ ಕೋಟ್ಯಾಂತರ ರೂ. ವರ್ಗಾಯಿಸಲಾಗಿದ್ದು,ಇದ ಕ್ಕಾಗಿ ಪಿಎಫ್‌ಐ ಸಹಿತ ಹಲವು ಸಂಘಟನೆ ಸದಸ್ಯರ ಖಾತೆಗಳನ್ನು ಬಳಸಿಕೊಳ್ಳಲಾಗಿದೆ.

ಕೆಲವೆಡೆ ಸದಸ್ಯರಲ್ಲದವರ ಖಾತೆಯಿಂದಲೂ ಹಣ ವರ್ಗಾಯಿಸಲಾಗಿದೆ. ಇಡೀ ದೇಶದಲ್ಲಿ ಈ ಜಾಲ ಹಬ್ಬಿದ್ದು, ಕರಾವಳಿಯೇ ಇದರ ಮೂಲವಾಗಿರುವ ಅಂಶ ಬೆಳಕಿಗೆ ಬಂದಿದೆ.

Leave A Reply

Your email address will not be published.