ಪೌರೋಹಿತ್ಯ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಬಾಲಕಿ..?!

Interesting Facts : ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ತಮ್ಮ ಸಾಧನೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿಂದು ಮಹಿಳೆ ಕೂಡಾ ಯಾರಿಗಿಂತಲೂ ಕಡಿಮೆಯಿಲ್ಲ ಎಂಬುವುದನ್ನು ಪದೇಪದೇ ಸಾಬೀತುಪಡಿಸುತ್ತಲೇ ಬಂದಿದ್ದಾಳೆ. ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಏನೆಂಬುವುದನ್ನು ತೋರಿಸುತ್ತಲೇ ಇದ್ದಾಳೆ ಇದೀಗ ಹಿಂದೂ ಸಂಪ್ರದಾಯ ದಲ್ಲಿ ಪೌರೋಹಿತ್ಯ ಅನ್ನೋದು ಪುರುಷರಿಗೆ ಮಾತ್ರ ಸೀಮಿತ ಎಂಬ ಗೆರೆಯನ್ನೆ ದಾಟಿ ಇದೀಗ ಹುಡುಗಿಯೊಬ್ಬಳು ಧಾರ್ಮಿಕ ಪೂಜೆ, ಆಚರಣೆಯ ನೇತೃತ್ವ ವಹಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ( Interesting Facts)

ಗಡಿನಾಡು ಕೇರಳದ ಬದಿಯಡ್ಕ ಸಮೀಪದ ಮುಳ್ಳೇರಿಯಾದ ವಲಯದ ವಿದ್ಯುತ್ ಇಲಾಖೆಯಲ್ಲಿ ಎಂಜಿನಿಯರ್‌ ಆಗಿರುವ ಅಡೂರಿನ ಸತ್ಯನಾರಾಯಣ ಅಗ್ನಿಹೋತ್ರಿ – ರಂಜಿನಿ ಕುಮಾರಿ ದಂಪತಿಯ ಪುತ್ರಿಯಾದ ಅಸೀಮಾ ಅಗ್ನಿಹೋತ್ರಿ ಎಂಬಾಕೆ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಚಣ ಕೇಂದ್ರ ಶಾಲೆಯ ಧ್ಯಾನಮಂದಿರದಲ್ಲಿ ಸೋಮವಾರ ಗಣ ಹೋಮ ನಡೆಸಿ ಗಮನ ಸೆಳೆದಿದ್ದಾಳೆ.

ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಯಾದ ಈಕೆ, ಸುಳ್ಯದ ನಾಗರಾಜ ಭಟ್ಟರ ಕೇಶವ ಕೃಪಾ ವೇದಪಾಠ ಶಾಲೆಯಲ್ಲಿ ಬೇಸಿಗೆ ರಜಾ ಶಿಬಿರದಲ್ಲಿ ವೇದಾ ಅಧ್ಯಯನ ಮಾಡಿ, ಇದೀಗ ಗಣಹೋಮದ ಪೌರೋಹಿತ್ಯವನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದು, ಪುರುಷರಿಗೆ ‌ಸೀಮಿತವಾಗಿದ್ದ ಪೌರೋಹಿತ್ಯ ಕಾರ್ಯ ಇದೀಗ ಬಾಲಕಿಯರೂ ನಡೆಸುವಂತಾಗಿದೆ.

ಉಪನಯನಾದಿ ಷೋಡಶ ಸಂಸ್ಕಾರಗಳನ್ನೂ ಪಡೆದಿರುವ ಈಕೆ, ಜಪತಪಾದಿ ನಿತ್ಯಾಕರ್ಮಾನುಷ್ಠಾನ ದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾಳೆ. ಶಾಸ್ತ್ರೀಯ ಸಂಗೀತವನ್ನು ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್ ಮತ್ತು ಭರತನಾಟ್ಯವನ್ನು ವಿದ್ಯಾಲಕ್ಷಿ ಕುಂಬಳೆ ಇವರಿಂದ ಕಲಿಯುತ್ತಿದ್ದಾಳೆ. ಇದೀಗ ರಾಜ್ಯದಲ್ಲೇ ಪೌರೋಹಿತ್ಯ ಕ್ಷೇತ್ರದಲ್ಲಿ ಬಾಲಕಿ ಹೊಸ ಸಂಚಲನ ಸೃಷ್ಟಿಸಿದಲ್ಲದೇ ಭಾರೀ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ

Leave A Reply

Your email address will not be published.