Green Leafy Vegetables : ಮಹಿಳೆಯರೇ, ನಿಮ್ಮ ಆರೋಗ್ಯಕ್ಕಾಗಿ ಈ ನಾಲ್ಕು ಸೊಪ್ಪುಗಳನ್ನು ಇಷ್ಟ ಇಲ್ಲದಿದ್ದರೂ ಸೇವಿಸಲೇಬೇಕು!!!
Green Leafy Vegetables: ಆರೋಗ್ಯವೇ ಭಾಗ್ಯ ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಲು ನಾನಾ ರೀತಿಯ ಹರಸಾಹಸ ಪಡುವುದು ಸಹಜ. ಅದರಲ್ಲಿಯೂ ಇಂದಿನ ಒತ್ತಡಯುತ ಜೀವನ ಶೈಲಿಯಲ್ಲಿ ನಿದ್ರಾ ಹೀನತೆ, ಅಪೌಷ್ಠಿಕತೆ, ಜಂಕ್ ಫುಡ್ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳಿಗೆ ಕಂಡುಬರುವ ಆರೋಗ್ಯ ಸಮಸ್ಯೆಗಳು ಕಡಿಮೆ ಎಂದರೂ ತಪ್ಪಾಗಲಾರದು. ನೈಸರ್ಗಿಕವಾಗಿ ದೊರೆಯುವ ತರಕಾರಿಗಳು, ಹಸಿರೆಲೆ , ಸೊಪ್ಪುಗಳಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹೆಚ್ಚಿನ ಮಹಿಳೆಯರು (Women) ಕಚೇರಿ ಮತ್ತು ಕುಟುಂಬದ ಜವಾಬ್ದಾರಿ (Family Responsibility) ನಡುವೆ ತಮ್ಮ ಆರೋಗ್ಯದ (Health)ಕಡೆ ನಿರ್ಲಕ್ಷ್ಯ ಧೋರಣೆ ತೋರುತ್ತಾರೆ. ಆದರೆ, ಮಹಿಳೆಯರು ತಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಸೊಪ್ಪುಗಳ ಸೇವನೆ(Green Leafy Vegetables) ಮಾಡಿದರೆ ಹೆಚ್ಚಿನ ಪ್ರಯೋಜನ ದೊರೆಯಬಲ್ಲದು.
ಪಾಲಕ್(Spinach)
ಪಾಲಕ್ ಸೊಪ್ಪು ಪೌಷ್ಟಿಕ ಸತ್ವಗಳ ಜೊತೆಗೆ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಸಿ, ಕಬ್ಬಿಣಾಂಶ, ಆಂಟಿಆಕ್ಸಿಡೆಂಟ್, ಸೋಡಿಯಂ ಅಂಶಗಳನ್ನು ಒಳಗೊಂಡಿವೆ. ಪಾಲಕ್ ಸೊಪ್ಪು ತನ್ನಲ್ಲಿ ಬೇರೆ ಬಗೆಯ , ಒಮೆ ಗಾ-3 ಕೊಬ್ಬಿನಾಮ್ಲಗಳು ಮತ್ತು ಫಾಲಿಕ್ ಆಮ್ಲವನ್ನು ಯಥೇಚ್ಛವಾಗಿ ಒಳಗೊಂಡಿದೆ.ಇದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕು ಬರದಂತೆ ತಡೆಯಲು ನೆರವಾಗುತ್ತದೆ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವ ಹಿನ್ನೆಲೆ ಕೆಂಪು ರಕ್ತ ಕಣಗಳನ್ನೂ ಬಲಗೊಳಿಸುತ್ತದೆ. ಹೃದಯಕ್ಕೆ ಸಂಬಂಧಪಟ್ಟ ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ನೆರವಾಗಿ, ದಿನನಿತ್ಯ ಸೊಪ್ಪನ್ನು ಸೇವಿಸಿದರೆ ಕೂದಲಿನ ಸಮಸ್ಯೆಯನ್ನು ಕೂಡ ಬಗೆ ಹರಿಸಿಕೊಳ್ಳಬಹುದು. ಮಧುಮೇಹದಿಂದ ಬಳಲುತ್ತಿರುವವರಿಗೆ ಸೊಪ್ಪು ಸೇವನೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಹೀಗಾಗಿ, ಪಾಲಕ್ ಸೊಪ್ಪನ್ನೂ ಆಹಾರ ಕ್ರಮದಲ್ಲಿ ಉಪಯೋಗಿಸಿ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು.
ಮೆಂತೆ ಸೊಪ್ಪು(Fenugreek Leaves)
ಮೆಂತ್ಯಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಮತ್ತು ಬೀಟಾ ಕೆರೋಟಿನ್ ಅನ್ನು ಒಳಗೊಂಡಿದೆ. ಇವುಗಳ ಸಂಯೋಜನೆಯಿಂದ ಶರೀರದಲ್ಲಿ ರೋಗನಿರೋಧಕ ವ್ಯವಸ್ಥೆಗೆ ಸಹಕಾರಿಯಾಗಿದ್ದು, ಸೋಂಕುಗಳ ವಿರುದ್ದ ಹೋರಾಡಲುನೆರವಾಗುತ್ತದೆ. ಇದಲ್ಲದೆ, ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಚರ್ಮಕ್ಕೆ ಹೊಳಪು ನೀಡುವ ಯೌವ್ವನ ನೀಡುತ್ತದೆ. ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲಾ ರೀತಿಯ ಔಷಧೀಯ ಗುಣಗಳನ್ನು ಮೆಂತೆ ಸೊಪ್ಪು (Fenugreek Leaves)ಕಹಿ ಗುಣವನ್ನು ಒಳಗೊಂಡಿದ್ದರು ಸೊಪ್ಪಿನಲ್ಲಿ ಕಂಡು ಬರುತ್ತದೆ. ಮೆಂತೆ ಸೊಪ್ಪಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಪ್ರಮಾಣದಲ್ಲಿರುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಲು ವಿಶೇಷವಾಗಿ ಮಧುಮೇಹ ಇರುವ ಮಹಿಳೆಯರಿಗೆ ಮೆಂತೆ ಸೊಪ್ಪಿನ ನಿಯಮಿತ ಸೇವನೆ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಸಹಕಾರಿಯಾಗಿದೆ.
ಹರಿವೆ ಸೊಪ್ಪು(Amarnath leaves)
ಹರಿವೆ ಸೊಪ್ಪು ಡಯೆಟ್ (Diet) ಮಾಡುವವರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ (Vitamin C) ಇದ್ದು, ಕಬ್ಬಿಣಾಂಶ(Iron) ಒದಗಿಸುವುದಲ್ಲದೆ ರಕ್ತನಾಳ ರೂಪಿಸುವ, ಸ್ನಾಯು ಸರಿಪಡಿಸಲು ನೆರವಾಗುತ್ತದೆ. ಇದರಲ್ಲಿ ಪೊಟ್ಯಾಶಿಯಂ (Potassium) ಮತ್ತು ಫೈಬರ್(Fiber) ಹೆಚ್ಚಿದ್ದು, ವಿಟಮಿನ್ ಎ (Vitamin A) ಹೇರಳವಾಗಿದ್ದು,ದೇಹದ ತೂಕವನ್ನು ಇಳಿಸಲು ಹಾಗೂ ಕೆಟ್ಟ ಕೊಲೆ ಸ್ಟ್ರಾಲ್ ತಗ್ಗಿಸುವಲ್ಲಿ ಹರಿವೆ ಸೊಪ್ಪು ವಿಶೇಷ ಪಾತ್ರ ವಹಿಸುತ್ತದೆ. ಈ ಸೊಪ್ಪಿನಲ್ಲಿ ನಾರಿನಾಂಶ ಹಾಗೂ ಪ್ರೋಟೀನ್ ಅಂಶ ಅತ್ಯಧಿಕ ಮಟ್ಟದಲ್ಲಿ ಕಂಡು ಬರುವ ಹಿನ್ನೆಲೆ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ರಕ್ತದಲ್ಲಿ ಜೀವಕೋಶ(Blood Cells) ಹೆಚ್ಚಲು ಕಬ್ಬಿಣಾಂಶ(Iron) ಬಹಳ ಮುಖ್ಯವಾಗಿದ್ದು, ಇದು ಹರಿವೆ ಸೊಪ್ಪಿನಲ್ಲಿ ಹೇರಳವಾಗಿದೆ. ಪ್ರತೀ ದಿನ ಈ ಸೊಪ್ಪು ಸೇವಿಸುವುದರಿಂದ ಅನಿಮಿಯಾದಿಂದ(Anemia) ಪಾರಾಗಬಹುದು.
ಸಬ್ಬಸಿಗೆ ಸೊಪ್ಪು(Dill Leaves)
ಮಹಿಳೆಯರು ತಮಗೆ ಇಷ್ಟವಿಲ್ಲದಿದ್ದರೂ ಕೂಡ ಈ ಸೊಪ್ಪನ್ನು ಸೇವಿಸುವುದು ಅವಶ್ಯಕ.
ಸಬ್ಬಸಿಗೆ (Dill) ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುವುದಲ್ಲದೆ ಹೆಚ್ಚುವರಿ ಅನಿಲವನ್ನು ಕಡಿಮೆ ಮಾಡುತ್ತದೆ. ಮಹಿಳೆಯರು ನಿಯಮಿತವಾಗಿ ಸಬ್ಬಸಿಗೆ ಸೊಪ್ಪನ್ನು ಸೇವಿಸಿದರೆ ದೀರ್ಘಕಾಲದ ಕಾಯಿಲೆಗಳಾದ ಅಧಿಕರಕ್ತದೊತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ ಅಂಶ, ಅಧಿಕ ಪ್ರಮಾ ಣದಲ್ಲಿ ಸಿಗುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ಸೊಪ್ಪಿನಲ್ಲಿ ಫ್ಲೇವನಾಯ್ಡ್ ಎಂಬ ನೈಸರ್ಗಿಕ ಅಂಶಗಳ ಪ್ರಮಾಣ ಯಥೇಚ್ಛವಾಗಿ ಕಂಡುಬರುವ ಹಿನ್ನೆಲೆ ದೇಹದ ಹಾರ್ಮೋನ್ ಏರುಪೇರಾಗದಂತೆ ತಡೆಯುವ ಜೊತೆಗೆ, ಮಹಿಳೆಯರ ಮುಟ್ಟಿನ (Periods)ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಹೊಟ್ಟೆ ಸೆಳೆತ, ವಾಕರಿಕೆ ಯಂತಹ ಸಮಸ್ಯೆಯನ್ನು ದೂರ ಮಾಡಲು ನೆರವಾಗುತ್ತದೆ.ಹೀಗಾಗಿ, ಮಹಿಳೆಯರು ಇಷ್ಟವಿಲ್ಲದಿದ್ದರೂ ಈ ನಾಲ್ಕು ಸೊಪ್ಪುಗಳ ಸೇವನೆ ಮಾಡುವುದು ಅವಶ್ಯಕವಾಗಿದ್ದು, ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.