South Korea: ಅನ್ನ, ನೀರು ನೀಡದೆ 1000ಕ್ಕೂ ಹೆಚ್ಚು ನಾಯಿಗಳನ್ನು ಕೊಂದ ದಕ್ಷಿಣ ಕೊರಿಯಾದ ಪಾಪಿ!
South korea :ಅತಿಯಾದ ನಿಯತ್ತಿನೊಂದಿಗೆ ಸದಾ ನಮ್ಮೊಂದಿಗಿರುವ ಪ್ರಾಣಿ ಅಂದ್ರೆ ಅದು ನಾಯಿ(Dog)ಗಳು. ಈ ಶ್ವಾನಗಳ ಮೇಲೆ ಹಲವರಿಗೆ ಅತೀವ ಪ್ರೀತಿ. ಬಿಟ್ಟಿರಲಾರದಷ್ಟು ನಂಟು. ಇಂತವರಿಗೆ ತಾವು ಸಾಕಿದ ನಾಯಿ ಮೇಲಷ್ಟೇ ಪ್ರೀತಿ, ಖಾಳಜಿ ಇರೋದಲ್ದೇ ಇತರ ನಾಯಿಗಳಮೇಲೂ ಅಷ್ಟೇ ಅನುಕಂಪ. ಆದರೆ ಇಲ್ಲೊಬ್ಬ ಪಾತಕಿ ನಾಯಿಗಳನ್ನು ಮುದ್ದಿಸಿ, ಮುದ್ದಿನಿಂದ ಸಾಕುವುದಾಗಿ ಹೇಳಿ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ನಾಯಿಗಳನ್ನು ಅನ್ನ ನೀರು ಇಲ್ಲದೆ ಅತ್ಯಂತ ಅವಮಾನವೀಯವಾಗಿ ಕೊಂದು ಹಾಕಿದ್ದಾನೆ!
ಹೌದು, ದಕ್ಷಿಣ ಕೊರಿಯಾ(South Korea)ದ ರಾಜಧಾನಿ ಸೋಲ್(Solone) ನಲ್ಲಿ ವ್ಯಕ್ತಿಯೊಬ್ಬ 1000ಕ್ಕೂ ಅನಾಥ ನಾಯಿಗಳನ್ನು ಸಾಕುವುದಾಗಿ ಅವುಗಳ ಮಾಲೀಕರಿಂದ ಹಣ ನಡೆಯುತ್ತಿದ್ದ. ಆದರೆ ಅವುಗಳಿಗೆ ಆಹಾರ, ನೀರು ನೀಡದೇ, ಮನೆಯೊಂದರಲ್ಲಿ ಕೂಡಾಕಿ, ಅಮಾನುಷವಾಗಿ ಅವುಗಳನ್ನು ಕೊಂದು ವಿಕೃತಿ ಮೆರೆದಿದ್ದಾನೆ.
ಸಂತಾನೋತ್ಪತ್ತಿಗಾಗಿ ಬಳಸುವ ನಾಯಿಗಳ ವಯಸ್ಸು ಮೀರಿದ ಬಳಿಕ, ಪ್ರಯೋಜನ ಇಲ್ಲ ಎನ್ನುವ ಕಾರಣಕ್ಕಾಗಿ ಈ ಪಾಪಿ ವ್ಯಕ್ತಿಗೆ ನೀಡಲಾಗುತ್ತಿತ್ತು. ಆತ ತನ್ನ ಮನೆಯಲ್ಲಿನ ವಿಶಾಲವಾದ ಜಾಗದಲ್ಲಿ ಅವುಗಳನ್ನು ಸಾಕುವುದಾಗಿ ಹೇಳಿ ಮಾಲೀಕರಿಂದ ಹಣ ಪಡೆಯುತ್ತಿದ್ದ. ಆದರೆ ಇತ್ತೀಚೆಗೆ ಮನೆ ಮೇಲೆ ದಾಳಿ ನಡೆಸಿದ ವೇಳೆ ಅಲ್ಲಿ 1000ಕ್ಕೂ ಹೆಚ್ಚು ನಾಯಿಗಳ ಅಸ್ತಿಪಂಜರ ಪತ್ತೆಯಾಗಿದೆ. ಈ ವೇಳೆ ಆತ ನಾಯಿಗಳಿಗೆ ಆಹಾರ ನೀಡದೇ ಅವುಗಳ ಸಾವಿಗೆ ಕಾರಣವಾದ ವಿಷಯ ಬೆಳಕಿಗೆ ಬಂದಿದೆ.
ಹಾಂಗ್-ಕಾಂಗ್(Hang-Cong) ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (South China Morning Post-SCMP) ವರದಿ ಮಾಡಿರುವ ಪ್ರಕಾರ, ಜಿಯೊಂಗ್ಗಿ ಪ್ರಾಂತ್ಯದ ಯಾಂಗ್‌ಪಿಯೊಂಗ್‌ನಲ್ಲಿ ವ್ಯಕ್ತಿಯೊಬ್ಬ ತಮ್ಮ ನಾಯಿ ತಪ್ಪಿಸಿಕೊಂಡಿದೆ ಎಂದು, ತನ್ನ ನಾಯಿಯನ್ನು (Dog) ಹುಡುಕುತ್ತಿದ್ದನು. ಹುಡುಕುತ್ತಾ, ಹುಡುಕುತ್ತಾ ಆತ ಆಕಸ್ಮಿಕವಾಗಿ ಈ ಶ್ವಾನ ಹಂತಕನ ಮನೆಗೆ ಹೋಗಿದ್ದಾನೆ. ಈ ವೇಳೆ ಇಂತಹ ಮನ ಕಲಕುವ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ವ್ಯಕ್ತಿಯನ್ನು ಬಂಧಿಸಲಾಗಿದೆ.
ಈ ಕುರಿತು ಮಾತನಾಡಿದ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ’60 ರ ಹರೆಯದಲ್ಲಿರುವ ಶಂಕಿತ ಆರೋಪಿ ಅನಾಥ ನಾಯಿಗಳನ್ನು ಸಾಕುವುದಾಗಿ ಹೇಳಿ ಅವುಗಳನ್ನು ಹಸಿವಿನಿಂದ (Starve) ಸಾಯುವಂತೆ (Death) ಮಾಡಿದ್ದಾರೆ. ಬಿಸಿನೆಸ್ ರೀತಿ ಬಳಸುವ ಈ ನಾಯಿಗಳನ್ನು, ವಿಲೇವಾರಿ ಮಾಡಲು ನಾಯಿ ಸಾಕಣೆದಾರರಿಂದ ಶಂಕಿತ ಹಣ (Money) ಪಡೆದಿದ್ದಾನೆ. ನಾಯಿ ಸಾಕಣೆದಾರರು, ಅವುಗಳನ್ನು ನೋಡಿಕೊಳ್ಳಲು ಪ್ರತಿ ನಾಯಿಗೆ 10,000 ವಾನ್ (7.70 ಅಮೆರಿಕ ಡಾಲರ್) ಪಾವತಿಸಿದ್ದಾರೆ. ಆದರೆ ಈತ 2020 ರಿಂದ ಈ ನಾಯಿಗಳನ್ನು ಲಾಕ್ ಮಾಡಿ ಹಸಿವಿನಿಂದ ಸಾಯಿಸಿದ್ದಾನೆ’ ಎಂದು ಹೇಳಿದ್ದಾರೆ.
ಅಲ್ಲದೆ ಮನೆ ಮೇಲೆ ದಾಳಿ ಮಾಡಿದಾಗ ಪಂಜರಗಳು, ಗೋಣಿಚೀಲಗಳು ಮತ್ತು ರಬ್ಬರ್ ಬಾಕ್ಸ್‌ಗಳಲ್ಲಿ ಸತ್ತ ನಾಯಿಗಳ ಖಳೇಬರಗಳು ಕಂಡುಬಂದಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಇನ್ನು, ಕೇರ್ ಎಂಬ ಪ್ರಾಣಿ ಹಕ್ಕುಗಳ ಗುಂಪಿನ ಸದಸ್ಯರು ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದು, ಬದುಕಿರುವ ನಾಯಿಗಳು ಸಹ ಚರ್ಮ ರೋಗಗಳು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿವೆ. ರಕ್ಷಿಸಲ್ಪಟ್ಟ ನಾಲ್ಕು ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವುಗಳಲ್ಲಿ ಎರಡು ನಾಯಿಗಳ ಸ್ಥಿತಿ ಚಿಂತಾಜನಕವಾಗಿವೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ಆಲ್ಕೋಹಾಲ್ ಸೇವಿಸಿದ್ರೆ ಬಾಯಿ ದುರ್ವಾಸನೆ ಬರುತ್ತಾ ? ತಪ್ಪಿಸಲು ಈ ಸರಳ ಸಲಹೆಗಳನ್ನು ಅನುಸರಿಸಿ