ITR ಫೈಲ್ ಮಾಡುವವರೇ ಇತ್ತ ಗಮನಿಸಿ! ಈ ಕೆಲಸ ಕೂಡಲೇ ಮಾಡಿ, ಇಲ್ಲದಿದ್ದರೆ ಆಗುವುದಿಲ್ಲ ಟ್ಯಾಕ್ಸ್ ರಿಟರ್ನ್

Pan Aadhaar link : ಕೆಲವೇ ದಿನಗಳಲ್ಲಿ 2022-23ರ ಆರ್ಥಿಕ ವರ್ಷ ಕೊನೆಗೊಳ್ಳುಲಿದ್ದು, ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೀಡಿರುವ ಎಚ್ಚರಿಕೆಯ ಪ್ರಕಾರ, ಮಾರ್ಚ್ 31, 2023 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ (pan aadhaar link ) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ, ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ.

ಹೊಸ ಹಣಕಾಸು ವರ್ಷವು ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಮುಂಗಡ ಆದಾಯ (income ) ತೆರಿಗೆ ರಿಟರ್ನ್ಸ್ ಸಲ್ಲಿಸುವ ಬಗ್ಗೆಯೂ ಸರ್ಕಾರದ (government ) ವತಿಯಿಂದ ಪ್ರಚಾರ ಮಾಡಲಾಗುತ್ತಿದ್ದು, ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಆದಾಯ ತೆರಿಗೆ ರಿಟರ್ನ್ ಕಾರ್ಯ ಪೂರ್ಣಗೊಳ್ಳಲಿದೆ.

ನೀವು ಇನ್ನು ಕೂಡಾ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡದಿದ್ದಲ್ಲಿ, ಈ ಕೆಳಗಿನ ಅಂಶಗಳನ್ನು ಗಮನಿಸುವುದು ಅಗತ್ಯವಾಗಿದೆ. ಸದ್ಯ ನಿಮಗೆ ಷೇರು ಮಾರುಕಟ್ಟೆಯಲ್ಲಿ ನಿರಂತರ ವಹಿವಾಟು ನಡೆಸುವುಸು ಸಾಧ್ಯವಾಗಬೇಕಾದರೆ ಮಾರ್ಚ್ ಅಂತ್ಯದೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವಂತೆ ಎಲ್ಲಾ ಹೂಡಿಕೆದಾರರಿಗೆ ಸೆಬಿ (SEBI) ತಿಳಿಸಿದ್ದು, ಈ ಸೂಚನೆಯನ್ನು ಅನುಸರಿಸದಿದ್ದಲ್ಲಿ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವವರೆಗೆ ವಹಿವಾಟುಗಳನ್ನು ನಿಷೇಧಿಸಬೇಕಾಗಿ ಬರಬಹುದು ಎಂದು SEBI ಆದೇಶ ಹೊರಡಿಸಿದೆ.

ಈಗಾಗಲೇ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಮಾರ್ಚ್ 2022 ರಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, .ಮಾರ್ಚ್ 31, 2023 ರೊಳಗೆ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಎಚ್ಚರಿಕೆ ಕೂಡಾ ನೀಡಿತ್ತು.

ಸದ್ಯ ‘ಪಾನ್ ಪ್ರಮುಖ ಗುರುತಿನ ಸಂಖ್ಯೆಯಾಗಿರುವುದರಿಂದ ಷೇರು ಮಾರುಕಟ್ಟೆಯಲ್ಲಿನ ವಹಿವಾಟುಗಳಿಗೆ KYC ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳಿಗೆ ಮಾನ್ಯ KYC ಅನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ ಎನ್ನಲಾಗಿದೆ.

ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದ ನಂತರ, ಅದನ್ನು ಬಳಸಿದರೆ, ನಿಮಗೆ 10,000 ರೂಪಾಯಿ ದಂಡ ವಿಧಿಸಲಾಗುವುದು. ಆದಾಯ ತೆರಿಗೆಯ ಸೆಕ್ಷನ್ 272B ಅಡಿಯಲ್ಲಿ ಈ ದಂಡವನ್ನು ಪಾವತಿಸಬೇಕಾಗುತ್ತದೆ. ಅದಕ್ಕಾಗಿಯೇ ಮಾರ್ಚ್ 31, 2023 ರೊಳಗೆ 1000 ರೂಪಾಯಿಗಳ ಲೇಟ್ ಫೈನ್ ಪಾವತಿಸುವ ಮೂಲಕ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬೇಕಾಗುತ್ತದೆ.

ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ವಿಧಾನ :
ಮೊದಲು ಆದಾಯ ತೆರಿಗೆ ಇ-ಪೋರ್ಟಲ್ (incometaxindiaefiling.gov.in) ತೆರೆಯಿರಿ.
ನಂತರ, ಯೂಸರ್ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕದ ಸಹಾಯದಿಂದ ಲಾಗಿನ್ ಮಾಡಿ.
ಪ್ರೊಫೈಲ್ ಸೆಟ್ಟಿಂಗ್‌ಗಳ ಮೆನು ಬಾರ್‌ಗೆ ಹೋಗಿ ಮತ್ತು ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಇಲ್ಲಿ PAN ಪ್ರಕಾರ ನೀಡಲಾದ ಹುಟ್ಟಿದ ದಿನಾಂಕ, ಲಿಂಗದ ಬಗ್ಗೆ ಮಾಹಿತಿ ಕಾಣಿಸುತ್ತದೆ .
ಸ್ಕ್ರೀನ್ ಮೇಲೆ ಆಧಾರ್ ವಿವರಗಳ ಸಹಾಯದಿಂದ ಪ್ಯಾನ್ ವಿವರಗಳನ್ನು ಪರಿಶೀಲಿಸಿ.
ವಿವರಗಳನ್ನು ಹೋಲಿಕೆ ಮಾಡಿದ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ.
ಇಷ್ಟಾದ ಮೇಲೆ ಪ್ಯಾನ್ ಮತ್ತು ಆಧಾರ್‌ಗೆ ಲಿಂಕ್ ಮಾಡಲಾಗಿದೆ ಎನ್ನುವ ಮೆಸ್ಸೇಜ್ ಬರುತ್ತದೆ.

ನೀವು ಮಾರ್ಚ್ 2022 ರಲ್ಲಿ SEBI ಹೊರಡಿಸಿದ ಅಧಿಸೂಚನೆಯ ಪ್ರಕಾರ, PAN ಕಾರ್ಡ್ ನಿಷ್ಕ್ರಿಯವಾದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ಯಾನ್ ಕಾರ್ಡ್ ಸಕ್ರಿಯವಾಗಿರುವುದು ಬಹಳ ಮುಖ್ಯ. ಮುಂದೆ ಸಂಭವಿಸಬಹುದಾದ ಸಮಸ್ಯೆಯನ್ನು ತಪ್ಪಿಸಲು ಮಾರ್ಚ್ 31 ರೊಳಗೆ ಆಧಾರ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿಕೊಳ್ಳುವುದು ಅವಶ್ಯಕವಾಗಿದೆ.

Leave A Reply

Your email address will not be published.