ರಾಜ್ಯದ 300 ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಭಾಗ್ಯ: ಸಿಎಂ ಬೊಮ್ಮಾಯಿ ಘೋಷಣೆ
CM Bommai :ವಿಧಾನಸೌಧದಲ್ಲಿ ಇಂದು ಪರಿಶಿಷ್ಟ ಫಲಾನುಭವಿಗಳಿಗೆ ಸವಲತ್ತು ವಿತರಣೆ, ಜಾಗೃತಿ ಕಾರ್ಯಕ್ರಮದಲ್ಲಿ, ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಭಾಗ್ಯ ಯೋಜನೆಗೆ ಸಿಎಂ ಬೊಮ್ಮಾಯಿ (CM Bommai) ಚಾಲನೆ ನೀಡುವ ಮೂಲಕ ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದಂತಾಗಿದೆ.
ಪೌರಕಾರ್ಮಿಕರ ಕೆಲಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಮಹತ್ವದ ಘೋಷಣೆಯನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಪೌರಕಾರ್ಮಿಕರನ್ನು ವಿಮಾನದಲ್ಲಿ ಕರೆದುಕೊಂಡು ಹೋಗುವ ಮೂಲಕ ಸಿಂಗಾಪುರ ಪ್ರವಾಸ ಮಾಡಿಸುವ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇಂದೊಂದು ಪೌರಕಾರ್ಮಿಕರಿಗೆ ಅಂತರರಾಷ್ಟೀಯ ಪ್ರವಾಸ ಅಂತಾನೆ ಹೇಳಲಾಗುತ್ತಿದೆ. ಇದೀಗ ಸಿಎಂ ಘೋಷಣೆ ಮಾಡಿದ ಸಿಂಗಾಪುರ ಪ್ರವಾಸ ಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ 300 ಪೌರಕಾರ್ಮಿಕರು ಪಡೆಯಲಿದ್ದಾರೆ, ಸದ್ಯದಲ್ಲೇ ಪೌರಕಾರ್ಮಿಕರು ಸಿಂಗಾಪುರ ಪ್ರವಾಸವನ್ನು ಕೈಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಇಂದು ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ಸಾಂಕೇತಿಕವಾಗಿ ಇಬ್ಬರು ಪೌರಕಾರ್ಮಿಕರಿಗೆ ಪಾಸ್ ಪೋರ್ಟ್ ವಿತರಣೆಯನ್ನು ಮಾಡಿದ್ದಾರೆ.
ಅಷ್ಟೇ ಅಲ್ಲದೇ ಪಾಸ್ ಪೋರ್ಟ್ ಕೈ ಸೇರುತ್ತಿದ್ದಂತೆ ಪೌರಕಾರ್ಮಿಕರ ಮುಖದಲ್ಲಿ ಸಂತಸ ಕಾಣುವಂತಾಗಿದೆ ಸದಾ ಕೆಲಸದಲ್ಲೇ ತೊಡಗಿದ್ದ ಪೌರಕಾರ್ಮಿಕರಿಗೆ ರಾಜ್ಯಸರ್ಕಾರ ಮಹತ್ವದ ಯೋಜನೆ ಇದಾಗಿದ್ದು, ಪೌರಕಾರ್ಮಿಕರು ಕೇವಲ ಕೆಲಸಕ್ಕೆ ಸೀಮಿತವಲ್ಲ ಅವರಿಗೂ ಹೊರ ಪ್ರಪಂಚವನ್ನು ನೋಡುವ ಸುರ್ವಣವಕಾಶವನ್ನು ಸರ್ಕಾರ ಒದಗಿಸುವುದಕ್ಕೆ ಮುಂದಾದಿದೆ.
ಇಂದು ಪರಿಶಿಷ್ಟ ಫಲಾನುಭವಿಗಳಿಗೆ ಸವಲತ್ತು ವಿತರಣೆ, ಜಾಗೃತಿ ಕಾರ್ಯಕ್ರಮದಲ್ಲಿ 595 ಕೋಟಿ ರೂ. ಮೊತ್ತದ ಗಂಗಾ ಕಲ್ಯಾಣ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಈ ಯೋಜನೆ ಮೂಲಕ 17 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿದೆ.