Holi : ಹೋಳಿ ಆಡಿದ ನಂತರ ಮೈಗಂಟಿದ ಬಣ್ಣ ತೆಗೆಯಲು ಕಷ್ಟವೇ? ಈ ರೀತಿ ತೆಗೆಯಿರಿ ಸುಲಭವಾಗಿ!

Holi : ಐಕ್ಯತೆಯನ್ನು ಸಾರುವ ಹಬ್ಬವಾದ ಹೋಳಿ (holi )ಜನರಲ್ಲಿ ಬಹಳ ಜನಪ್ರಿಯವಾಗಿದೆ. ಈ ಬಣ್ಣದ ಹಬ್ಬವನ್ನು ನಾವೆಲ್ಲರೂ ಇಷ್ಟಪಡುತ್ತೇವೆ. ಇನ್ನು ಹೋಳಿ ಹಬ್ಬ ಆಚರಿಸಲು ಕಾತುರದಿಂದ ಇದ್ದು, ಇನ್ನೇನು ಕೆಲವೇ ದಿನಗಳಲ್ಲಿ ರಂಗಿನ ಜೊತೆಗೆ ಸಂತೋಷದ ಬಣ್ಣವನ್ನೂ ಎರಚಿ ಆಡುವ ಹಬ್ಬ ಹೋಳಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ.

ಹೋಳಿ ಎಂದರೆ ಬಣ್ಣಗಳ ಹಬ್ಬ. ಬಣ್ಣಗಳಿಲ್ಲದೆ ಹೋಳಿ ಇರದು. ದಿನವಿಡೀ ಬಣ್ಣಗಳಲ್ಲೇ ಕಳೆಯುವ ಹಬ್ಬದ ದಿನ, ನಮ್ಮ ಮುಖ, ದೇಹದ ಭಾಗಗಳು ಪೂರ್ತಿಯಾಗಿ ಬಣ್ಣಗಳಿಂದಲೇ ಆವರಿಸಿಬಿಡುತ್ತವೆ. ದಿನವಿಡೀ ಹಬ್ಬದ ಗುಂಗಲ್ಲಿ ಮೈಮರೆತಿರುವ ನಮಗೆ ಸಂಜೆಯಾಗುತ್ತಲೇ ಮೈಗೆ ಅಂಟಿದ ಈ ಬಣ್ಣಗಳನ್ನು ತೆಗೆದುಹಾಕುವುದೇ ದೊಡ್ಡ ಸವಾಲು ಆಗುತ್ತದೆ.

ಹೋಳಿ ಹಬ್ಬದಲ್ಲಿ ಆಚರಿಸಲಾಗುವ ಬಣ್ಣಗಳು ಶುಷ್ಕ ಮತ್ತು ತೇವಾಂಶವನ್ನು ಹೊಂದಿದ್ದು, ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದರಲ್ಲಿರುವ ವಿಷಕಾರಿ ಅಂಶಗಳಿಂದಾಗಿ ಅಲರ್ಜಿ, ದದ್ದುಗಳು, ಕೆಂಪು ಬಣ್ಣವನ್ನು ಉಂಟು ಮಾಡಬಹುದು. ಆದ್ದರಿಂದ ಹೋಳಿ ಆಚರಣೆಯ ನಂತರ ಎಷ್ಟು ತೊಳೆದರೂ ಮೈಗಂಟಿಕೊಂಡಿರುವ ಬಣ್ಣ ಹೋಗದೆ ಇದ್ದಾಗ, ಆ ಬಣ್ಣಗಳನ್ನು ತೊಳೆದು ಹಾಕುವವರೆಗೂ ನಮಗೆ ನೆಮ್ಮದಿ ಇರುವುದಿಲ್ಲ.

ಕೆಲವರು ಹೋಳಿ ಆಡಿ ಬಂದ ನಂತರ ಜನರು ಈ ಬಣ್ಣಗಳನ್ನು ತೆಗೆದುಹಾಕಲು ಸರಿಯಾದ ಕ್ರಮ ಅನುಸರಿಸುವುದಿಲ್ಲ. ಹಾಗಾಗಿ ಸುಮ್ಮನೆ ಸ್ನಾನ ಗೃಹದಲ್ಲಿ(bathroom )ವ್ಯರ್ಥ ಪ್ರಯತ್ನ ಮಾಡುತ್ತಾರೆ.

ಆದರೆ ಹೋಳಿ ಬಣ್ಣವನ್ನು ಸುಲಭವಾಗಿ ತೊಡೆದುಹಾಕಲು ಸುಲಭ ಸಲಹೆಗಳು ಇಲ್ಲಿವೆ:

• ವರ್ಣರಂಜಿತ ಹೋಳಿ ಹಬ್ಬದ ಆಚರಣೆಯ ನಂತರ ಚರ್ಮದ ಸೌಂದರ್ಯವನ್ನು ಕಾಪಾಡಲು ಆಲಿವ್‌ ಎಣ್ಣೆಯನ್ನು(oil) ಬಳಸಿ. ಇದು ನಿಮ್ಮ ಚರ್ಮವನ್ನು(skin) ತೇವಗೊಳಿಸುತ್ತದೆ. ಅಲ್ಲದೆ, ವಯಸ್ಸಾದ ಚಿಹ್ನೆಗಳಿಂದ ಪಾರು ಮಾಡಿ, ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಕೃತಕ ಬಣ್ಣಗಳಿಂದ ಮೊಡವೆ ಉಂಟಾಗುವ ಅಪಾಯವನ್ನು ತಗ್ಗಿಸುತ್ತದೆ.

• ಫೇಸ್ ವಾಶ್ ಬಳಸುವ ಮೊದಲು ನಿಮ್ಮ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ತೈಲ ನಿಮ್ಮ ಚರ್ಮದಲ್ಲಿ ಅಂಟಿಕೊಂಡಿರುವ ಬಣ್ಣ ಸಡಿಲಗೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ, ಎಣ್ಣೆಯಲ್ಲಿ ಉಜ್ಜಿದ ನಂತರ ಫೇಸ್​ವಾಶ್​ ಬಳಸಿದರೆ ನಿಮ್ಮ ಮುಖವನ್ನು(face )ಹೆಚ್ಚು ಉತ್ತಮವಾಗಿ ಸ್ವಚ್ಛಗೊಳಿಸುತ್ತದೆ.

• ಹೋಳಿ ಹಬ್ಬದ ಸಂಭ್ರಮದ ನಂತರ ನಿಮ್ಮ ಚರ್ಮದ ಆರೈಕೆ ಮಾಡಲು ಬಾದಾಮಿ ಎಣ್ಣೆಯನ್ನು ಬಳಸಿ. ಇದು ನಿಮ್ಮ ಮೊಡವೆಗಳನ್ನು ಸುಧಾರಿಸಿ, ಒಣ ಚರ್ಮಕ್ಕೆ ಚಿಕಿತ್ಸೆ ನೀಡುತ್ತದೆ. ಅಲ್ಲದೆ, ಸೂರ್ಯನ ಹಾನಿಯನ್ನು ಹಿಮ್ಮೆಟಿಸಲು ಸಹಾಯ ಮಾಡುತ್ತದೆ. ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಲು ಬಾದಾಮಿ ಎಣ್ಣೆಯನ್ನು ನಿಸ್ಸಂದೇಹವಾಗಿ ಬಳಸಬಹುದು.

• ಗೋಧಿ ಹಿಟ್ಟನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಮುಖದ ಮೇಲೆ ಹಚ್ಚಿ ಮಸಾಜ್ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಅದನ್ನು ಬಿಟ್ಟು ಯಾವುದಾದರೂ ಕ್ಲೆನ್ಸರ್​ನಿಂದ ನಿಮ್ಮ ಮುಖವನ್ನು ತೊಳೆದರೆ, ಮುಖ ಸಂಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ.

• ಹೋಳಿ ಬಣ್ಣಗಳು ನಿಮ್ಮ ಉಗುರುಗಳನ್ನು ಒಣಗುವಂತೆ ಮಾಡಬಹುದು, ಆದ್ದರಿಂದ ನಿಮ್ಮ ಉಗುರುಗಳನ್ನು ತಣ್ಣನೆಯ ನೀರಿನಲ್ಲಿ ನೆನೆಸಿ.

• ಹೋಳಿ ಆಡಿದ ನಂತರ, ಉಗುರು ಬಣ್ಣವು ಹಳದಿ ಬಣ್ಣಕ್ಕೆ ಬದಲಾಗುತ್ತದೆ. ನಿಮ್ಮ ಉಗುರುಗಳನ್ನು ಅವುಗಳ ಸಹಜ ಸ್ಥಿತಿಗೆ ತರಲು ನಿಂಬೆ ರಸದಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ.

• ಸ್ಪಷ್ಟವಾದ ನೈಲ್ ಪಾಲಿಶ್‌ನ ಕೋಟ್ ಅಪ್ಲೈ ಮಾಡಿ ಮತ್ತು ನಿಮ್ಮ ಉಗುರುಗಳನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ, ನಂತರ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ, ನಿಧಾನವಾಗಿ ನಿಮ್ಮ ಉಗುರುಗಳಿಂದ ಉಗುರು ಬಣ್ಣದ ಜೊತೆಗೆ ಬಣ್ಣವನ್ನು ತೆಗೆದುಹಾಕಿ.

• ಹೋಳಿ ಆಡಲು ಹೋಗುವ ಮೊದಲು ಗಾಢವಾದ ನೈಲ್ ಪಾಲಿಷ್ ಅನ್ನು ಲೇಪಿಸಿ. ಗಾಢವಾದ ನೈಲ್ ಪಾಲಿಶ್ ನಿಮ್ಮ ಉಗುರುಗಳಿಗೆ ಬಣ್ಣ ಅಂಟಿಕೊಳ್ಳದಂತೆ ತಡೆಯುತ್ತದೆ.

ಮುಖ್ಯವಾಗಿ ಸಾಕಷ್ಟು ಮಂದಿ ಹೋಳಿ ಹಬ್ಬದ ನಂತರ ಚರ್ಮದ ಕಿರಿಕಿರಿಯನ್ನು ಹೊಂದಿರುತ್ತಾರೆ. ಅಂತವರು ಹೋಳಿ ಹಬ್ಬಕ್ಕೆ ಹೋಗುವ ಮುಂಚೆ, ಎಣ್ಣೆಯಿಂದ ಮಸಾಜ್‌ ಮಾಡಿಕೊಳ್ಳಬೇಕು. ಇದು ನಿಮ್ಮ ಚರ್ಮದ ರಂಧ್ರಗಳನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಇನ್ನು ಬಣ್ಣಗಳು ಚರ್ಮದ ರಂಧ್ರಗಳಿಗೆ ತಲುಪದಂತೆ ಜಾಗ್ರತೆ ವಹಿಸುತ್ತದೆ. ತದನಂತರ ಮಾಯಿಶ್ಚರೈಸರ್ ಮತ್ತು ಸನ್‌ ಸ್ಕ್ರೀನ್‌ ಅನ್ವಯಿಸಿ. ಇವೆರಡು ನಿಮ್ಮ ಚರ್ಮವನ್ನು ಮೃದುವಾಗಿಸುವುದು ಮಾತ್ರವಲ್ಲ, ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ.

Leave A Reply

Your email address will not be published.