Online DL Application : ಕೇವಲ ಏಳು ದಿನದಲ್ಲಿ ಆನ್‌ಲೈನ್‌ ಮುಖಾಂತರ ಡಿಎಲ್‌ ಪಡೆಯಲು ಇಲ್ಲಿದೆ ಸುಲಭ ಪ್ರಕ್ರಿಯೆ!

Online DL Application: ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇವರ ನಡುವೆ ಸುಮ್ಮನೆ ದಂಡ ಯಾಕಪ್ಪಾ ಕಟ್ಟೋದು ಎಂದುಕೊಂಡು ವಾಹನ ಚಾಲನೆ ಮಾಡುವಾಗ ಮಾತ್ರವಲ್ಲದೆ ಎಲ್ಲ ದಾಖಲೆಗಳನ್ನು ಸೇಫ್ ಆಗಿ ಇಟ್ಟುಕೊಂಡು ಡ್ರೈವ್ ಮಾಡೋರು ಕೂಡ ಇದ್ದಾರೆ.

ಡ್ರೈವಿಂಗ್ ಲೈಸೆನ್ಸ್ (Driving licence)ಯಾವುದೇ ವಾಹನವನ್ನೂ ಚಲಾಯಿಸಲು ಅವಶ್ಯಕವಾಗಿದ್ದು, ಒಂದು ವೇಳೆ ಡಿಎಲ್(DL) ಎಂದರೆ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ ಎಂದಾದರೆ ಸಾಮಾನ್ಯವಾಗಿ ನೀವು ಅದಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಿ ಮಾಡಿಸಿಕೊಂಡು ಬರುತ್ತೀರಾ ಅಲ್ಲವೇ? ಆದರೆ, ನೀವು ಇನ್ನೂ ಮುಂದೆ ಹೀಗೆ ಓಡಾಟ ನಡೆಸಬೇಕಾದ ಅನಿವಾರ್ಯತೆ ಇಲ್ಲ. ಯಾಕಂದ್ರೆ, ಇದು ಡಿಜಿಟಲ್ ಯುಗ.. ನೀವು ಇರುವಲ್ಲಿಯೇ ಆನ್‌ಲೈನ್‌ನಲ್ಲಿ ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ (Online DL Application)ಮಾಡಿಕೊಳ್ಳಬಹುದು.

ನೀವು ಡ್ರೈವಿಂಗ್ ಲೈಸೆನ್ಸ್‌ ಸಂಬಂಧಿಸಿದ ಕೆಲಸಕ್ಕಾಗಿ ಆರ್‌ಟಿಒ ಕಚೇರಿಗೆ  ಹೋಗಬೇಕಾದ ಅನಿವಾರ್ಯತೆ ಇಲ್ಲ. ಈಗ ನೀವು ನಿಮ್ಮ ಮನೆಯಲ್ಲಿ ಕುಳಿತು ಚಾಲನಾ ಪರವಾನಗಿಗಾಗಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್‌ನಿಂದಲೂ ಕೂಡ ಡಿಎಲ್ ಗಾಗಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಮೊದಲ ಸಲ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಲು ಇಚ್ಛಿಸಿದರೆ, ಆನ್‌ಲೈನ್‌ನಲ್ಲಿ ಕಲಿಕೆಯ ಡ್ರೈವಿಂಗ್ ಪರವಾನಗಿಗಾಗಿ ಅರ್ಜಿ(Online DL Application)ಸಲ್ಲಿಸುವ ವಿಧಾನ ಹೀಗಿದೆ.

ನೀವು ಅಧಿಕೃತ ವೆಬ್‌ಸೈಟ್ https://sarathi.parivahan.gov.in/sarathiservice/stateSelection.do ಗೆ ಭೇಟಿ ನೀಡಬೇಕಾಗುತ್ತದೆ. ನಿಮ್ಮ ರಾಜ್ಯದ ಹೆಸರನ್ನು ಆಯ್ಕೆ ಮಾಡಬೇಕಾಗಿದ್ದು ನಂತರ ಇಲ್ಲಿ ಕಲಿಕಾ ಪರವಾನಗಿಯ ಆಯ್ಕೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಕಲಿಯುವವರ ಪರವಾನಗಿ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ಆಧಾರ್ ಎಂಬ ಆಯ್ಕೆ ಕಂಡುಬರುತ್ತದೆ.

ನೀವು ಆಧಾರ್‌ನ ವಿವರಗಳೊಂದಿಗೆ ಕೆಲವು ಪ್ರಮುಖ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗಿದ್ದು, ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ವಿವರಗಳನ್ನು ಭರ್ತಿ ಮಾಡಿದ ಬಳಿಕ, ಪಾವತಿ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಒಂದು ವೇಳೆ ಪಾವತಿ ವಿಫಲವಾದರೆ ನೀವು ಹೆಚ್ಚುವರಿ 50 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ಅರ್ಜಿ ಸಲ್ಲಿಸಿದ ಸುಮಾರು 7 ದಿನಗಳಲ್ಲಿ ನಿಮ್ಮ ಕಲಿಕಾ ಪರವಾನಗಿ ನಿಮ್ಮ ಮನೆ ಬಾಗಿಲಿಗೆ ತಲುಪುತ್ತದೆ. ಆದರೆ, ಇಲ್ಲಿ ಗಮನಿಸಬೇಕಾದ ವಿಚಾರ, ಶಾಶ್ವತವಾದ ಪರವಾನಗಿಯನ್ನು ಪಡೆಯಲು ಒಮ್ಮೆ ಆರ್‌ಟಿಒ ಕಚೇರಿಗೆ ಭೇಟಿ ನೀಡಲೇಬೇಕಾಗುತ್ತದೆ.

ಭಾರತ ಸರ್ಕಾರವು ಡಿಜಿಟೈಸ್ಡ್ ಡ್ರೈವಿಂಗ್ ಲೈಸೆನ್ಸ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದರಿಂದ ನೀವು ಕಲಿಕೆಯ ಪರವಾನಗಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಕಲಿಯಲು ಅರ್ಜಿ ಸಲ್ಲಿಸುವುದು ಸರಳ ಹಾಗೂ ಸುಲಭವಾಗಿದ್ದು ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಸ್ಮಾರ್ಟ್‌ಫೋನ್ ಇಲ್ಲವೇ ಲ್ಯಾಪ್‌ಟಾಪ್‌ ಮೂಲಕ ಕೆಲಸವನ್ನು ಸುಲಭವಾಗಿ ಮಾಡಬಹುದು.

Leave A Reply

Your email address will not be published.