CEO Salary: ಈ ಪ್ರಖ್ಯಾತ ಕಂಪನಿ CEO ಸಂಬಳ ಕೇವಲ 15 ಸಾವಿರ! ಕಾರಣವೇನು ಗೊತ್ತಾ?
CEO Salary : ಸ್ನೇಹಿತರೇ, ಸಾಮಾನ್ಯವಾಗಿ ಈ ಕಂಪೆನಿಗಳ ಸಿಇಓ(CEO) ಗಳ ಸಂಬಳ ಎಷ್ಟಿರಬಹದು ಹೇಳಿ? ಎಲ್ಲರಿಗೂ ಗೊತ್ತಿರುವಂತೆ ಹಲವರು ಲಕ್ಷಾಂತರ ರೂಪಾಯಿ ಸಂಬಳ ಪಡೆದರೆ ಇನ್ನು ಕೆಲವು ಸಿಇಓ ಗಳು ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದ್ರೆ ಇಲ್ಲೊಂದು ಕಂಪೆನಿ ಸಿಇಓ ಸಂಬಳ(CEO Salary) ಕೇಳಿದ್ರೆ ನೀವೇ ಶಾಕ್ ಆಗ್ತೀರಾ! ಹಾಗಂತ ಇವರ ಸಂಬಳ ಕೋಟ್ಯಾಂತರ ರೂಪಾಯಿ ಇದೆ ಎಂದಲ್ಲ. ಮತ್ತಿನ್ನೇನು ಎಂದು ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.
ಹೌದು, ಫಿನ್‌ಟೆಕ್ ಕಂಪನಿ CREDನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ CEO (ಸಿಇಒ) ಕುನಾಲ್ ಷಾ(Kunal Sha) ಸಂಬಳ ಕೇಳಿದ್ರೆ ನೀವು ನಿಜವಾಗಿಯೂ ಆಶ್ಚರ್ಯ ಪಡುತ್ತೀರ. ಯಾಕಂದ್ರೆ ಇವರಿಗೆ ಕೇವಲ 15 ಸಾವಿರ ಸಂಬಳವಂತೆ! ಅರೇ ಇದೇನಪ್ಪಾ, ಇವರು ಕಂಪೆನಿ ಸಿಇಓ ನ ಅಥವಾ ಬರೀ ಎಂಪ್ಲಾಯಾ ಅಂತ ನಿಮಗನಿಸಬಹುದು. ಆದ್ರೆ ಇವರು ನಿಜವಾಗ್ಲೂ ಸಿಇಓ ನೇ. ತಮ್ಮ ಈ ಅಲ್ಪ ಸಂಬಳದ ಕುರಿತು ಸ್ವತಃ ಕುನಾಲ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಕುನಾಲ್ ಷಾ ಅವರು ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದ್ದರು. ಆಗ ಇನ್‌ಸ್ಟಾಗ್ರಾಮ್ ಬಳಕೆದಾರರಾದ ಅಜೀತ್ ಪಟೇಲ್(Ajith Patel) ಅವರು ತಮ್ಮ ಸಂಬಳವನ್ನು ಅವರ ಸಂಬಳದ ವಿವರವನ್ನು ಕೇಳಿದ್ದಾರೆ. ಕುನಾಲ್ ಷಾ ತಿಂಗಳಿಗೆ 15,000 ರೂ. ವೇತನವನ್ನು ಪಡೆಯುವುದಾಗಿ ಹೇಳಿದ್ದಾರೆ. ಇದಕ್ಕೆ ನಿಮ್ಮ ಸಂಬಳ ತುಂಬಾ ಕಡಿಮೆಯಾಗಿದೆ? ನೀವು ಹೇಗೆ ಬದುಕುತ್ತೀರಿ? ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕುನಾಲ್ ಷಾ, ‘ಕಂಪನಿ ಲಾಭದಾಯಕವಾಗುವವರೆಗೆ ನನಗೆ ಉತ್ತಮ ಸಂಬಳ ಸಿಗುತ್ತದೆ ಎಂದು ನಾನು ನಂಬುವುದಿಲ್ಲ. CRED ನಲ್ಲಿ ನನ್ನ ಸಂಬಳ ತಿಂಗಳಿಗೆ ₹ 15,000. ನಾನು ಹಿಂದೆ ನನ್ನ ಕಂಪನಿ ಫ್ರೀಚಾರ್ಜ್ ಅನ್ನು ಮಾರಾಟ ಮಾಡಿದ್ದರಿಂದ ನಾನು ಆರಾಮವಾಗಿ ಬದುಕಬಲ್ಲೆ’ ಎಂದಿದ್ದಾರೆ. ಇದರ ಸ್ಕ್ರೀನ್‌ಶಾಟ್ ಅನ್ನು ಅಜೀತ್ ಪಟೇಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಕೋಟಿಗಳಲ್ಲಿ ಸಂಬಳ ತೆಗೆದುಕೊಳ್ಳುವ ಸಿಇಒಗಳು ಇದ್ದಾರೆ, ಅದರ ಜತೆಗೆ ಕುನಾಲ್ ಷಾ ರೀತಿಯವರೂ ಇದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಎರಡು ಸಾವಿರಕ್ಕೂ ಹೆಚ್ಚು ಲೈಕ್ಗಳು ಮತ್ತು 1.4 ಲಕ್ಷ ವೀಕ್ಷಣೆಗಳನ್ನು ಸಂಗ್ರಹಿಸಿದೆ.
ಆದರೂ, ಕುನಾಲ್ ಷಾ ರ ಪ್ರತಿಕ್ರಿಯೆ ಇಂಟರ್ನೆಟ್ನಲ್ಲಿ ಎರಡು ಬಣಗಳನ್ನು ಸೃಷ್ಟಿಸಿದಂತೆ ತೋರುತ್ತಿದೆ. ಕೆಲವರು ಅವರ ಕ್ರಮವನ್ನು ಮೆಚ್ಚಿದರೆ, ಇತರರು ತೆರಿಗೆ ಉಳಿಸುವ ಮಾರ್ಗವಾಗಿದೆ ಎಂದು ಹೇಳಿದ್ದಾರೆ. ಅವರು ದೊಡ್ಡ ಹೂಡಿಕೆದಾರರು ಮತ್ತು 500 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ಶೇರ್ಗಳು ಕಂಪನಿಯಿಂದ ನಿರ್ಗಮಿಸುವಾಗ ಅವರಿಗೆ ಆದಾಯವನ್ನು ನೀಡುತ್ತವೆ’ ಎಂದು ಇನ್ನೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿದ್ದಾರೆ.