B K Shivappa: ಕರ್ನಾಟಕದ ಎಲ್ಲಾ ಸಮಸ್ಯೆಗಳಿಗೆ ಪೊರಕೆಯೊಂದೇ ಪರಿಹಾರ! ಪೊರಕೆ ಬೆಂಬಲಿಸೋದ್ರಿಂದ ಎಲ್ಲವನ್ನೂ ಬಗೆಹರಿಸಿಕೊಳ್ಳಿ: ಎಎಪಿ ಅಭ್ಯರ್ಥಿ ಬಿ‌ಕೆ ಶಿವಪ್ಪ

B K Shivappa: ರಾಜ್ಯದಲ್ಲಿ ಬಿಜೆಪಿ(BJP) ಕಾಂಗ್ರೆಸ್(Congress) ಹಾಗೂ ಜೆಡಿಎಸ್(JDS) ಈ ಮೂರು ಘಟಾನುಘಟಿ ಪಕ್ಷಗಳ ನಡುವೆ ಸಣ್ಣದಾಗಿ ಚಿಗುರುಡೆಯುತ್ತಿರುವ ಪಕ್ಷವೆಂದರೆ ಅದು ಆಮ್ಆದ್ಮಿ(AAP) ರಾಜ್ಯದಲ್ಲಿ ಚುನಾವಣೆ ಚಟುವಟಿಕೆಗಳು, ಪ್ರಚಾರಗಳು ಗರಿಗೆದಿರುತ್ತಿರುವಂತ ಸಂದರ್ಭದಲ್ಲಿ ಈ ಪಕ್ಷವು ಕೂಡ ಸದ್ಧಿಲ್ಲದಂತೆ ತನ್ನ ಕಾರ್ಯಕಲಾಪಗಳನ್ನು ಆರಂಭಿಸಿದೆ. ಇದೀಗ ಆಮ್ಆದ್ಮಿಯು ಪ್ರಚಾರವನ್ನು ಕೈಗೊಂಡಿದ್ದು, ರಾಜ್ಯದ ಎಲ್ಲಾ ಸಮಸ್ಯೆಗಳಿಗೆ ಪೊರಕೆಯೊಂದೇ ಪರಿಹಾರ. ಆದ್ದರಿಂದ ಎಲ್ಲರೂ ಪೊರಕೆಗೆ ಮತ ನೀಡಿ ಕರ್ನಾಟಕವನ್ನು ಉಳಿಸಿ ಎಂದು AAP ಪಕ್ಷದ ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಿ.ಕೆ ಶಿವಪ್ಪ(B K Shivappa) ತಿಳಿಸಿದರು.

ಹೌದು, ಕರ್ನಾಟಕದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರವನ್ನು ಹೊಗಲಾಡಿಸಬೇಕಾದರೆ ಒಂದೇ ಪರಿಹಾರ ಅದು ಪೊರಕೆಯೇ ಪರಿಹಾರ. ಒಂದು ಸಾರಿ ಜನರು ಅಮ್ ಆದ್ಮಿ ಪಕ್ಷದ ಪರವಾಗಿ ನಿಂತು, ಪಕ್ಷವನ್ನು ಬೆಂಬಲಿಸಿ ಪೊರಕೆಗೆ ಮತ ನೀಡಿ ಗೆಲ್ಲಿಸಿದರೆ ರಾಜ್ಯದಲ್ಲಿರುವ ಎಲ್ಲಾ ರೀತಿಯ ಭ್ರಷ್ಟಾಚಾರಕ್ಕೂ ಮುಕ್ತಿ ಸಿಗುವುದಲ್ಲದೆ ಕರ್ನಾಟಕವು ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಎಲ್ಲರೂ ಪೊರಕೆಯನ್ನು ಬೆಂಬಲಿಸಿ ಎಂದು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಏರ್ಪಡಿಸಿದ್ದ “ಪೊರಕೆಯೇ ಪರಿಹಾರ”(Porake Parihara) ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಿ.ಕೆ ಶಿವಪ್ಪ ಮಾತನಾಡಿದರು.

ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ನಮ್ಮ ಜನರ ಬದುಕು ಉತ್ತಮವಾಗಿಲ್ಲ. ಯಾರೂ ನೆಮ್ಮದಿಯ ಜೀವನ ನಡೆಸುತ್ತಿಲ್ಲ. ಸಂತೋಷವಾಗಿಲ್ಲ ಹಾಗಾಗಿ ಇಷ್ಟು ವರ್ಷಗಳ ಕಾಲ ಭ್ರಷ್ಟ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜನತಾದಳ ಈ‌ ಮೂರು ಪಕ್ಷಗಳ ದುರಾಡಳಿತದಿಂದ ಜನತೆ ನೋವಿನಲ್ಲಿಯೇ ಬದುಕುತ್ತಿದ್ದಾರೆ. ಅದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನೊಂದವರು ಕಷ್ಟದಲ್ಲಿ ಇರುವವರಿಗೆ ನಮ್ಮ ಆಮ್ ಆದ್ಮಿ ಪಾರ್ಟಿ ನೆರವಾಗಲು ದೆಹಲಿ ಮಾದರಿಯಲ್ಲಿ ಪ್ರತಿಯೊಬ್ಬರಿಗೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಉಚಿತವಾದ ಶಿಕ್ಷಣ, ಉಚಿತವಾದ ಆರೋಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಉತ್ತಮವಾದ ರಸ್ತೆ, ಚರಂಡಿ ಬೀದಿ ದೀಪ ಇನ್ನೂ ಅನೇಕ ಸೌಲಭ್ಯಗಳನ್ನು ಕರ್ನಾಟಕದ ಜನರಿಗೂ ನೀಡಲು ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ.

ಇದಕ್ಕಾಗಿ ದಕ್ಷ ಆಡಳಿತ ಕೊಡುವಂತಹ ಪ್ರಾಮಾಣಿಕವಾಗಿ ನಡೆದುಕೊಳ್ಳುವಂತಹ ಕೆಲಸ ಮಾಡುವುದಕ್ಕೆ ನಮ್ಮ ಆಮ್ ಆದ್ಮಿ ಪಕ್ಷದವರು ರಾಜ್ಯದ 224 ಕ್ಷೇತ್ರದಲ್ಲೂ ನಮ್ಮ ಪ್ರತಿಯೊಬ್ಬ ಆಕಾಂಕ್ಷಿಗಳು ಪ್ರತಿಯೊಂದು ಮನೆ ಮನೆಗೂ, ಊರು, ಗ್ರಾಮಗಳ ಬೀದಿ ಬೀದಿಗಳಲ್ಲಿ ಪೊರಕೆಗಳನ್ನು ಹಿಡಿದು ಸ್ವಚ್ಚವನ್ನು ಮಾಡುವುದರ ಮೂಲಕ ನಮ್ಮ ಮನೆಗಳನ್ನು ಸ್ವಚ್ಛ ಮಾಡುವ ರೀತಿಯಲ್ಲಿ ರಾಜಕೀಯವನ್ನು ಸ್ವಚ್ಚ ಮಾಡಬೇಕಾಗಿದೆ ಎಂದರು.

ಈಗಾಗಲೇ ಕರ್ನಾಟಕದಲ್ಲಿ ಭ್ರಷ್ಟರು, ಕಳ್ಳರು, ರಿಯಲ್ ಎಸ್ಟೇಟ್ ಮಾಫಿಯಾಗಳು, ಜೈಲಿಗೆ ಹೋಗಿ ಬಂದಿರುವಂತವರು ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ಪ್ರಾಮಾಣಿಕತೆ ಹೊಂದಿರುವ ವ್ಯಕ್ತಿಗಳು ರಾಜಕೀಯ ಮಾಡಲು ಬರಬೇಕು ಎಂದು ತಿಳಿಸಿ ಇಷ್ಟು ದಿನ ರಾಜಕೀಯ ವ್ಯವಸ್ಥೆಯಲ್ಲಿ ದುರಾಡಳಿತ ನಡೆದಿರುವುದು ಸಾಕು ಎಂಬ ಮಾಹಿತಿಯನ್ನು ನೀಡುತ್ತಾ ಈ ಪೊರಕೆ ಅಭಿಯಾನವನ್ನು ಮಾಡುತ್ತಿದ್ದೇವೆ ಎಂದ ಅವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲೂ ಈ ರೀತಿಯ ಸ್ವಚ್ಛಗೊಳಿಸುವ ಪೊರಕೆಯೇ ಪರಿಹಾರ ಅಭಿಯಾನವನ್ನು ಮಾಡುವೆವು ಎಂದು ತಿಳಿಸಿದರು.

Leave A Reply

Your email address will not be published.