Old Refrigerator: ಆಹಾರ ಖಾದ್ಯಗಳೊಂದಿಗೆ ಪತ್ತೆಯಾಯ್ತು 5000 ವರ್ಷ ಹಳೆಯ ರೆಫ್ರಿಜರೇಟರ್! ಇದನ್ನು ಶೋಧಿಸಿದ ತಜ್ಞರು ಹೇಳೋದೇನು ಗೊತ್ತಾ?
Old Refrigerator : ಇತ್ತೀಚಿಗಷ್ಟೇ ಚೀನಾ(Chaina)ದ ಬೀಜಿಂಗ್ ನಲ್ಲಿ ಸುಮಾರು 2,400 ವರ್ಷಗಳಷ್ಟು ಹಳೆಯ ಫ್ಲೆಶ್ ಟಾಯ್ಲೆಟ್(Flesh Toilet)ಪತ್ತೆಯಾಗಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತ್ತು. ಅಲ್ಲದೆ ಈ ಫ್ಲೆಶ್ ಟಾಯ್ಲೆಟ್ ಕಲ್ಪನೆ ಇಂದಿನದಲ್ಲ ಸುಮಾರು 2000 ವರ್ಷಗಳಿಗೂ ಮುಂಚೆಯೇ ಇತ್ತು ಎಂಬುದನ್ನು ಇದು ಸಾಬೀತುಪಡಿಸಿತ್ತು. ಇದೀಗ ಇದರ ಬೆನ್ನಲ್ಲೇ ಮತ್ತೆ ನಡೆದ ಸಂಶೋಧನೆಯೊಂದು ನಿಮ್ಮನ್ನು ಇನ್ನೂ ಆಶ್ಚರ್ಯ ಚಕಿತರನ್ನಾಗಿಸಬಹುದು. ಯಾಕಂದ್ರೆ ಈ ಶೋಧನೆ ಬರೋಬ್ಬರಿ 5000 ವರ್ಷಗಳಷ್ಟು ಹಳೆಯ ರೆಫ್ರಿಜರೇಟರ್(old Refrigerator)ಅನ್ನು ಪತ್ತೆಮಾಡಿದೆ. ಅದೂ ಕೂಡ ಅಂದಿನ ಆಹಾರ ಪದಾರ್ಥಗಳ ಸಮೇತ ಅದು ಪತ್ತೆಯಾಗಿದೆ ಅಂದ್ರೆ ನೀವು ನಂಬ್ತೀರಾ? ನಂಬಲೇ ಬೇಕು. ಹಾಗಿದ್ರೆ ಈ ಸ್ಟೋರಿ ನೋಡಿ.
ಹೌದು, ಇತ್ತೀಚೆಗೆ, ಯುಎಸ್-ಇಟಾಲಿಯನ್ (US-Italiyan) ತಂಡವು ಸಮಕಾಲೀನ ನಗರದ ನಾಸಿರಿಯಾದ ಈಶಾನ್ಯದಲ್ಲಿ ಪ್ರಾಚೀನ ಲಗಾಶ್(Lagaash) ಅವಶೇಷಗಳಲ್ಲಿ ಕೆಲವೊಂದು ಅವಶೇಷಗಳನ್ನು ಪತ್ತೆಹಚ್ಚಿರುವುದಾಗಿ ವರದಿ ಮಾಡಿದ್ದು ಈ ನಗರವು ಪ್ರಾಚೀನ ಇರಾಕ್(Iraak)ನ ಸುಮೇರಿಯನ್ ನಾಗರಿಕತೆಯ ಆರಂಭಿಕ ನಗರ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿತ್ತು. ಇದೀಗ ಇದೇ ಪುರಾತತ್ತ್ವಜ್ಞರು (Archaeologists) ದಕ್ಷಿಣ ಇರಾಕ್‌ನಲ್ಲಿ ಸುಮಾರು 5,000 ವರ್ಷಗಳಷ್ಟು ಹಿಂದಿನ ಹೋಟೆಲಿನ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ಇರಾಕ್‌ನ ಲಗಾಶ್‌ನಲ್ಲಿ ದೊರೆತ 5000 ವರ್ಷಗಳ ಹಳೆಯ ಫ್ರಿಡ್ಜ್ ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತಿದೆ. ಅಲ್ಲದೆ ಇದರಿಂದ ಪುರಾತನ ಕಾಲದ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ (US) ಮತ್ತು ಪಿಸಾ ವಿಶ್ವವಿದ್ಯಾಲಯ (Italy) ಯ ಪುರಾತತ್ವಶಾಸ್ತ್ರಜ್ಞರ ತಂಡವು ಇರಾಕ್‌ನ ಲಗಾಶ್‌ನಲ್ಲಿ ಅವಶೇಷಗಳನ್ನು ಕಂಡು ಹಿಡಿಯುವುದರೊಂದಿಗೆ, ಸುಮಾರು 5000 ವರ್ಷಗಳಿಗಿಂತ ಹಳೆಯ ತೆರೆದ ಹೋಟೆಲ್‌ನ ಅವಶೇಷವನ್ನು ಪತ್ತೆ ಮಾಡಿದ್ದಾರೆ. ಸುಮೇರಿಯನ್ ನಾಗರಿಕತೆಯ ಮೊದಲ ನಗರ ಕೇಂದ್ರಗಳಲ್ಲಿ ಒಂದಾದ ಈ ಪ್ರಾಚೀನ ಲಗಾಶ್‌ನ ಅವಶೇಷಗಳು ಇರಾಕ್‌ನ ಆಧುನಿಕ ನಗರವಾದ ನಾಸಿರಿಯಾದ ಬಳಿ ಇದೆ. ಈಗ ಅಲ್-ಹಿಬಾ ಎಂದು ಹೆಸರಿಸಲಾಗಿರುವಈ ಪಟ್ಟಣವು ಪುರಾತತ್ವ ಶಾಸ್ತ್ರಜ್ಞರಿಗೆ ಮಹತ್ವದ ಪ್ರಾಮುಖ್ಯ ತಾಣ ಎಂದೆನಿಸಿದೆ.
5000 ವರ್ಷಗಳಷ್ಟು ಹಳೆಯದಾದ, ಫ್ರಿಡ್ಜ್‌ನಂತಿರುವ ಈ ಪರಿಕರವನ್ನು ಅಂದು ಆಹಾರವನ್ನು ತಂಪಾಗಿರಿಸುವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತಿತ್ತು ಎಂಬುದು ತಜ್ಞರ ಅಭಿಪ್ರಾಯ. ಇದರೊಂದಿಗೆ ಶಂಕುವಿನಾಕಾರದ ಬಟ್ಟಲುಗಳನ್ನು ಕಂಡು ಹಿಡಿಯಲಾಗಿದೆ. ನೂರಾರು ಜನರಿಗೆ ಆಹಾರ ಉಣಬಡಿಸುವ ಪಾತ್ರೆಗಳು, ಜನರು ಕುಳಿತುಕೊಳ್ಳುವ ಬೆಂಚ್‌ಗಳು, ರೆಫ್ರಿಜರೇಟರ್‌ನ ಹಿಂಬದಿಯಲ್ಲಿಡುವ ಕೆಲವೊಂದು ಪರಿಕರಗಳು ಮತ್ತು ಅಡುಗೆ ಮಾಡಲು ಬಳಸುವ ಪಾತ್ರೆಗಳನ್ನು ಹಾಗೂ ಓವನ್ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸಂಶೋಧನಾ ತಂಡದಲ್ಲಿರುವ ಪಿಟ್‌ಮ್ಯಾನ್(Pitman) ಎಂಬುವವರು ಪತ್ತೆಹಚ್ಚಿದ ಸ್ಥಳದ ಬಗ್ಗೆ ಹಾಗೂ ಪರಿಕರಗಳ ಬಗ್ಗೆ ತಿಳಿಸುತ್ತಾ ‘ಈ ಸ್ಥಳ ರೆಸ್ಟೋರೆಂಟ್ ಮಾದರಿಯಲ್ಲಿದ್ದ ಯಾವುದಾದರೂ ಪುರಾತನ ಸ್ಥಳವಾಗಿರಬಹುದು ಎಂಬುದಾಗಿ ನಮಗೆ ತೋರುತ್ತಿದ್ದು ಮನೆಯಲ್ಲಿನ ಅಡುಗೆ ಕೋಣೆಯಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ಜನರು ಹೆಚ್ಚಾಗಿ ಕುಳಿತು ಆಹಾರ ಸೇವಿಸುತ್ತಿದ್ದ ಹೋಟೆಲ್‌ನಂತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ ಸುಮೇರಿಯನ್ನರು ಮದ್ಯಪ್ರಿಯರು ಹಾಗೂ ನೀರಿಗಿಂತ ಹೆಚ್ಚಾಗಿ ಅವರು ಮದ್ಯವನ್ನೇ ಸೇವಿಸುತ್ತಿದ್ದರು ಎಂದು ತಿಳಿಸಿರುವ ಪಿಟ್‌ಮ್ಯಾನ್, ರೆಸ್ಟೋರೆಂಟ್ ಆಗಿ ಈ ಸ್ಥಳವನ್ನು ಸುಮೇರಿಯನ್ನರು ಬಳಸುತ್ತಿದ್ದುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಉತ್ಖನನ ಮಾಡಿದ ದೇವಾಲಯದ ಬಳಿ ಬಿಯರ್ ಪಾಕ ವಿಧಾನವು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವರದಿಗಳ ಪ್ರಕಾರ, ಪುರಾತತ್ತ್ವಜ್ಞರು ಪ್ರಾಚೀನ ಬಿಯರ್(Bear) ಪಾಕವಿಧಾನವನ್ನು ಪತ್ತೆಹಚ್ಚಿದ್ದಾರೆ. ಪೆನ್ ಮ್ಯೂಸಿಯಂ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಬಾಗ್ದಾದ್‌ನಲ್ಲಿರುವ ಸ್ಟೇಟ್ ಬೋರ್ಡ್ ಆಫ್ ಆಂಟಿಕ್ವಿಟೀಸ್ ಮತ್ತು ಹೆರಿಟೇಜ್ ನಡುವಿನ ಜಂಟಿ ಯೋಜನೆಯ ಭಾಗವಾಗಿ 2019 ರಲ್ಲಿ ಸ್ಥಳದಲ್ಲಿ ಉತ್ಖನನವನ್ನು ಪುನರಾರಂಭಿಸಲಾಗಿದೆ ಎಂಬುದು ವರದಿಯಾಗಿದೆ. ಇನ್ನು ಒಂದು ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿದ್ದ ಈ ಲಗಾಶ್ ಸುಮಾರು 1000 ಎಕರೆ ಪುರಾತತ್ತ್ವ ಶಾಸ್ತ್ರದ ಡಿಗ್ ಸೈಟ್ ಆಗಿದೆ. ಇಲ್ಲಿ 1930 ರಿಂದಲೂ ಪುರಾತತ್ತ್ವ ಶಾಸ್ತದ ತಂಡವು ಅನ್ವೇಷಿಸುತ್ತಾ ಬಂದಿದ್ದಾರೆ.