World’s Biggest Lips: ಈಕೆಗೆ ಜಗತ್ತಿನಲ್ಲೇ ಅತಿ ದೊಡ್ಡದಾದ ತುಟಿ ಹೊಂದುವ ಬಯಕೆಯಂತೆ! ಇದಕ್ಕಾಗಿ ಇವಳು ವ್ಯಯಿಸಿದ್ದು ಬರೋಬ್ಬರಿ 8ಲಕ್ಷ!

World’s Biggest Lips: ಇಂದು ಎಲ್ಲರೂ ತಮ್ಮ ಸೌಂದರ್ಯ ವರ್ದನೆಯ ಕಡೆಗೆ ಗಮನ ಕೊಡುವವರೆ. ಅದರಲ್ಲೂ ಹೆಚ್ಚು ಮಹಿಳೆಯರು (Womens) ಸೌಂದರ್ಯ ಪ್ರಿಯರು. ಇತರರಿಗಿಂತ ತಾನು ಸುಂದರವಾಗಿ ಕಾಣಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲೂ ಇದ್ದೇ ಇರುತ್ತೆ. ಕೆಲವರು ಮೇಕಪ್ ಮಾಡಿಯೇ ಚೆಂದ ಕಾಣಲು ಬಯಸಿದರೆ, ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡುಸ್ಕೊಂಡು ಸುಂದರವಾಗಿ ಕಾಣೋ ಹರಸಾಹಸ ಮಾಡುತ್ತಾರೆ. ಇದಕ್ಕಾಗಿ ಎಷ್ಟು ಬೇಕಾದರೂ ದುಡ್ಡು ಖರ್ಚುಮಾಡಲು ರೆಡಿ ಇರ್ತಾರೆ. ಅಂತೆಯೇ ಇಲ್ಲೊಬ್ಬಳು ತಾನು ಚೆಂದುಳ್ಳಿ ಚೆಲುವೆಯಾಗಲು ಮಾಡಿದ್ದೇನು ಗೊತ್ತಾ? ವಿಶ್ವದ ಅತ್ಯಂತ ದೊಡ್ಡ ತುಟಿ(World’s Biggest Lips) ಹಾಗೂ ದೊಡ್ಡ ಕೆನ್ನೆಯನ್ನು ಹೊಂದಲು ಬಯಸಿದ್ದಾಳೆ! ಇದರ ಸಲುವಾಗಿ ಆಕೆ ಸುರಿದ ದುಡ್ಡನ್ನು ನೋಡಿದ್ರೆ ಎಂತವರಿಗೂ ಶಾಕ್ ಆಗುತ್ತೆ.

 

ಹೌದು, ಬಲ್ಗೇರಿಯಾ(Balgeriya)ದ ಸೋಫಿಯಾದ(Sofiya) ನಿವಾಸಿ ಆಂಡ್ರಿಯಾ ಇವನೊವಾ(Andriya Inova) ಅತಿ ದೊಡ್ಡ ತುಟಿಗಳನ್ನು ಹೊಂದಲು ಬರೋಬ್ಬರಿ 7.9 ಲಕ್ಷ ರೂ. ಖರ್ಚು ಮಾಡಿದ್ದಾರೆ. ಅದರಲ್ಲೂ ತನ್ನ 25 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಈ ರೀತಿಯ ವಿಚಿತ್ರವಾದ ಯೋಜನೆಯನ್ನು ಹಾಕಿಕೊಂಡಿದ್ದಳು. ಅಲ್ಲದೆ ಈಕೆಗೆ ಮುಂದಿನ ದಿನಗಳಲ್ಲಿ ಕೆನ್ನೆಯಲ್ಲಿ ದೊಡ್ಡ ಮೂಳೆಗಳನ್ನು ಪಡೆಯಬೇಕೆಂಬ ಬಯಕೆ ಇದೆಯಂತೆ.

ಈ ಕುರಿತು ಮಾತನಾಡಿರೋ 25 ವರ್ಷದ ಯುವತಿ ಆಂಡ್ರಿಯಾ, ‘ನಾನು ವಿಶ್ವದ ದೊಡ್ಡ ತುಟಿಗಳ ಜತೆಗೆ ದೊಡ್ಡ ಕೆನ್ನೆಯ ಮೂಳೆಗಳನ್ನು ಸಹ ಹೊಂದಲು ಬಯಸುತ್ತೇನೆ. ನನ್ನ ಗುರಿ ಮಾಡೆಲ್ ಆಗುವುದು. ಹೀಗಾಗಿ ಗಮನಾರ್ಹವಾದ ದೊಡ್ಡ ತುಟಿ ಬೇಕು. ಕೆನ್ನೆಯ ಮೂಳೆಗಳಲ್ಲಿ ನಾಲ್ಕು ಹೈಲುರಾನಿಕ್ ಆಸಿಡ್ ಚುಚ್ಚುಮದ್ದನ್ನು ಪಡೆದಿದ್ದೇನೆ. ಆದರೆ ನಾನು ವಾರದೊಳಗೆ ಇನ್ನೆರಡು ಚುಚ್ಚುಮದ್ದನ್ನು ಹಾಕಿಸಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

‘ನನ್ನ ಮುಖವು ಈಗ ತೀಕ್ಷ್ಣವಾಗಿದೆ, ಆದರೆ ನಾನು ಅದನ್ನು ತುಂಬಾ ಇಷ್ಟಪಡುತ್ತೇನೆ. ನನ್ನ ಹೊಸ ನೋಟವನ್ನು ನನ್ನ ಕುಟುಂಬವು ಗೌರವಿಸಬೇಕು. ಜನರ ಕಾಮೆಂಟ್‌ಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನಾನು ಸೌಂದರ್ಯದ ಬಗ್ಗೆ ನನ್ನದೇ ಆದ ಅಭಿರುಚಿ ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದೇನೆ’ ಎಂದು ಆಂಡ್ರಿಯಾ ಹೇಳಿದ್ದಾರೆ.

Leave A Reply

Your email address will not be published.