Sonia Gandhi: ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟ ಸೋನಿಯಾ ಗಾಂಧಿ! ರಾಯ್‌ಪುರಿ ಕಾಂಗ್ರೆಸ್ ಸಮಾವೇಶದಲ್ಲಿ ಏನಂದ್ರು ಗೊತ್ತಾ?

Sonia Gandhi : ಇಂದಿರಾಗಾಂಧಿ(Indira Gandhi)ಯವರ ಪ್ರೀತಿಯ ಸೊಸೆ ಹಾಗೂ ಅತ್ಯುತ್ತಮ ಮುತ್ಸದ್ಧಿ ರಾಜಕಾರಣಿ, ಕಾಂಗ್ರೆಸ್(Congress) ಕಂಡ ಮಹಾನ್ ನಾಯಕಿ ಅಂದ್ರೆ ಸೋನಿಯಾ ಗಾಂಧಿ(Sonia Gandhi). ಪರ ದೇಶದಿಂದ ಬಂದಿದ್ದರೂ ಭಾರತದ ರಾಜಕೀಯ ಇತಿಹಾಸದಲ್ಲೇ ಹೊಸ ಛಾಪನ್ನು ಸೃಷ್ಟಿಸಿದವರು. ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಅದನ್ನು ತ್ಯಜಿಸಿ ನಿಂತವರು. ಇಂತಹ ಧೀಮಂತ ಮಹಿಳೆ ಇದೀಗ ತಮ್ಮ ರಾಜಕೀಯ ನಿವೃತ್ತಿಯ ಸುಳಿವನ್ನು ನೀಡಿ ಅಭಿಮಾನಿಗಳಲ್ಲಿ, ರಾಜಕೀಯ ನಾಯಕರಲ್ಲಿ ತೀವ್ರ ಕುತೂಹಲ ಉಂಟುಮಾಡಿದ್ದಾರೆ.

ಹೌದು, ಭಾರತ್ ಜೋಡೋ(Bharat Jodo) ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯವಾಗಬಹುದು ಎಂದು ಸೋನಿಯಾ ಗಾಂಧಿ (Sonia Gandhi) ಹೇಳಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶನಿವಾರ ರಾಜಕೀಯದಿಂದ ನಿವೃತ್ತಿ ಹೊಂದುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಇದು ಪಕ್ಷಕ್ಕೆ ತಿರುವು ಎಂದು ಅವರು ಬಣ್ಣಿಸಿದ್ದಾರೆ. ಛತ್ತೀಸ್‌ಗಢದ(Chattissigarh) ರಾಜಧಾನಿ ರಾಯ್‌ಪುರ(Raypura)ದಲ್ಲಿ ಪಕ್ಷದ ಮೂರು ದಿನಗಳ ಸಮಾವೇಶದ ಎರಡನೇ ದಿನದಂದು 15,000 ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ, ಭಾರತದ ಜನರು ಸೌಹಾರ್ದತೆ, ಸಹಿಷ್ಣುತೆ ಮತ್ತು ಸಮಾನತೆಯನ್ನು ಸಂಪೂರ್ಣವಾಗಿ ಬಯಸಿದ್ದಾರೆ ಎಂದು ಹೇಳಿದ್ದಾರೆ.

ಮನಮೋಹನ್ ಸಿಂಗ್(Manmohan Singh) ಅವರ ನಾಯಕತ್ವದಲ್ಲಿ 2004 ಮತ್ತು 2009ರಲ್ಲಿನ ನಮ್ಮ ಗೆಲುವುಗಳು ನನಗೆ ವೈಯಕ್ತಿಕವಾಗಿ ತೃಪ್ತಿ ತಂದಿದೆ. ಆದರೆ ನನಗೆ ಹೆಚ್ಚು ಸಂತಸ ನೀಡಿರುವುದು ಕಾಂಗ್ರೆಸ್‌ಗೆ ಮಹತ್ತರ ತಿರುವಾಗಿರುವ ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯಗೊಳ್ಳುವ ಸಾಧ್ಯತೆ ಇರುವುದು ಎಂದಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ.

ಅಲ್ಲದೆ ಇದು ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಸವಾಲಿನ ಸಮಯವಾಗಿದೆ. ಬಿಜೆಪಿ-ಆರ್‌ಎಸ್‌ಎಸ್ (BJP-RSS) ದೇಶದ ಪ್ರತಿಯೊಂದು ಸಂಸ್ಥೆಯನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ದೇಶವನ್ನೇ ಬುಡಮೇಲು ಮಾಡಿವೆ. ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಮೂಲಕ ಆರ್ಥಿಕ ವಿನಾಶಕ್ಕೆ ಕಾರಣವಾಗಿವೆ. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು ಮತ್ತು ಬುಡಕಟ್ಟು ಸಮುದಾಯಗಳನ್ನು ಟಾರ್ಗೆಟ್ ಮಾಡುತ್ತಿದೆ. ಆದ್ದರಿಂದ ಜನರಿಗೆ ನಮ್ಮ ಸಂದೇಶವನ್ನು ಮನವರಿಕೆ ಮಾಡಿಕೊಡುವ ಮೂಲಕ ಈ ಬಾರಿ ಬಿಜೆಪಿ ಆಡಳಿತವನ್ನು ಉರುಳಿಸಬೇಕು ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್‌ನ 85ನೇ ಸರ್ವಸದಸ್ಯರ ಅಧಿವೇಶನವು ರಾಯ್ಪುರಿಯಲ್ಲಿ ಪ್ರಾರಂಭವಾಗಿದ್ದು, 2024 ರ ಲೋಕಸಭೆ ಚುನಾವಣೆಗೆ ಇತರ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಬೆಂಬಲಿಗರನ್ನು ಒಟ್ಟುಗೂಡಿಸುವ ಮತ್ತು ಮತದಾರರೊಂದಿಗೆ ಪಕ್ಷದ ಸಂಪರ್ಕ ಹೆಚ್ಚಿಸುವ ಗುರಿಯನ್ನು ಹೊಂದಿರುವ ರಾಹುಲ್ ಗಾಂಧಿ ನೇತೃತ್ವದ ದೇಶಾದ್ಯಂತದ ಕಾಲ್ನಡಿಗೆಯ ಭಾರತ್ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ಇದನ್ನು ನಡೆಸಲಾಗುತ್ತಿದೆ.

Leave A Reply

Your email address will not be published.