Pooja Hegde: ಕರಾವಳಿ ಬೆಡಗಿ, ನಟಿ ಪೂಜಾ ಹೆಗ್ಡೆಗೆ ಭರ್ಜರಿ ಬೆಲೆಯ ಕಾರು ಗಿಫ್ಟ್‌ ನೀಡಿದ ನಿರ್ದೇಶಕ! ಪ್ರೀತಿಯಲ್ಲಿ ಬಿದ್ದರಾ ಪೂಜಾ?

Pooja Hegde : ತೆಲುಗು ಚಿತ್ರರಂಗದ(tollywood) ಜನಪ್ರಿಯ ನಟಿ ಪೂಜಾ ಹೆಗ್ಡೆ (Pooja Hegde) ಸೂಪರ್ ಹಿಟ್ ಸಿನಿಮಾ(super hit film)ಗಳ ಮೂಲಕ ಜನಮನಗೆದ್ದಿದ್ದಾರೆ. ಇವರು ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಆದರೆ ನಟಿಗೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಹೌದು, ನಟಿ ಪೂಜಾ ಹೆಗ್ಡೆ(actress Pooja Hegde) ಗೆ ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರೊಬ್ಬರು ಎರಡು ಕೋಟಿ ಬೆಲೆಯ ಕಾರೊಂದನ್ನು ಉಡುಗೊರೆ(branded car gift) ನೀಡಿದ್ದಾರೆ. ಸದ್ಯ ಈ ಸುದ್ದಿ ಚರ್ಚೆಗೆ ಕಾರಣವಾಗಿದೆ. ದುಬಾರಿ ಉಡುಗೊರೆ ಕೊಟ್ಟ ನಿರ್ದೇಶಕ ಯಾರು ಗೊತ್ತಾ?

 

ನಟಿಗೆ ದುಬಾರಿ ಉಡುಗೊರೆ ಕೊಟ್ಟಿರೋದು, ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas). ತಮ್ಮ ಹಲವು ಸಿನಿಮಾಗಳಿಗೆ ಪೂಜಾ ಹೆಗ್ಡೆಯನ್ನೇ ನಾಯಕಿಯನ್ನಾಗಿ ಕಾಸ್ಟ್ ಮಾಡುತ್ತಿರುವ ನಿರ್ದೇಶಕರು ನಟಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಸುದ್ದಿ ಸಖತ್ ವೈರಲ್(viral) ಆಗಿದೆ.

ಈಗಾಗಲೇ ಕೆಲವು ಐಶಾರಾಮಿ ಕಾರು(branded car)ಗಳ ಒಡತಿಯಾಗಿರುವ ನಟಿಗೆ ಇನ್ನೊಂದು ಕಾರು ಉಡುಗೊರೆಯಾಗಿ ದೊರೆತಿದೆ. ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಅವರು ಇದೀಗ ಚಿತ್ರೀಕರಣಗೊಳ್ಳುತ್ತಿರುವ ಹೊಸ ಸಿನಿಮಾಗೆ ಪೂಜಾ ಹೆಗ್ಡೆಯನ್ನು ನಾಯಕಿ ಮಾಡಿದ್ದು, ಈ ಸಿನಿಮಾದ ಬಳಿಕ ತ್ರಿವಿಕ್ರಮ್ ನಿರ್ದೇಶಿಸಲಿರುವ ಅಲ್ಲು ಅರ್ಜುನ್​(actor Allu Arjun)ರ ಹೊಸ ಸಿನಿಮಾಗೂ ಪೂಜಾ ಹೆಗ್ಡೆಯೇ ನಾಯಕಿ ಎನ್ನಲಾಗಿದೆ.

ಆದರೆ ತ್ರಿವಿಕ್ರಮ್ ಶ್ರೀನಿವಾಸ್, ನಟಿಗೆ ಕಾರು ಕೊಟ್ಟಿರುವ ಬಗ್ಗೆ ಚಿತ್ರತಂಡ ಅಲ್ಲಗಳೆದಿದ್ದು. ನಿರ್ದೇಶಕರು, ಇದೀಗ ಮಹೇಶ್ ಬಾಬು(actor Mahesh babu) ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ನಾಯಕಿಯಾದ ಪೂಜಾ, ಹೋಟೆಲ್​ನಿಂದ ಸೆಟ್​ಗೆ ಬರಲು ಪ್ರೊಡಕ್ಷನ್ ಟೀಂನಿಂದ ಇನ್ನೊವಾ(Innova) ಕಾರೊಂದನ್ನು ನೀಡಲಾಗಿತ್ತು. ಹಾಗೇ ಹಲವು ನಟ-ನಟಿಯರು ಕಾರು ಬಳಸುತ್ತಿದ್ದರಿಂದ ಪ್ರೊಡಕ್ಷನ್ ಖರ್ಚು ಹೆಚ್ಚಾಗಿದ್ದು, ಇದರಿಂರ ಸಿನಿಮಾ ತಂಡವೇ ಹೊಸದೊಂದು ಕಾರು ಖರೀದಿ ಮಾಡಿದೆ. ಆ ಹೊಸ ಕಾರಲ್ಲಿ ಮೊದಲಿಗೆ ಪ್ರಯಾಣಿಸಿದ್ದು ಪೂಜಾ ಹೆಗ್ಡೆ ಎನ್ನಲಾಗಿದೆ. ಅಲ್ಲದೆ, ಆ ಕಾರು ಪೂಜಾ ಹೆಗ್ಡೆಗೆ ಮಾತ್ರ ಅಲ್ಲ, ಅದನ್ನು ಯಾರು ಬೇಕಾದರೂ ಬಳಸಬಹುದು ಎಂಬ ಮಾತು ಕೇಳಿ ಬಂದಿದೆ. ಈ ಸ್ಪಷ್ಟನೆಯಿಂದ ಗೊಂದಲಕ್ಕೆ ತೆರೆ ಎಳೆದಂತಾಗಿದೆ.

Leave A Reply

Your email address will not be published.