Bhopal: ಅಂಕಪಟ್ಟಿ ಕೊಡಲಿಲ್ಲವೆಂದು ಪ್ರಿನ್ಸಿಪಾಲರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ವಿದ್ಯಾರ್ಥಿ!
Bhopal : ವಿದ್ಯೆಗೆ ವಿನಯೇ ಭೂಷಣ ಅನ್ನೋ ಮಾತಿದೆ. ಆದರೆ ಇಂದು ಆ ವಿನಯ, ಭೂಷಣಗಳೆಲ್ಲ ಎತ್ತಹೋದವು ಎಂದು ಚಿಂತಿಸುವ ಕಾಲ ಬಂದಿದೆ. ಯಾಕಂದ್ರೆ ಇಂದೋರ್(Indhore)ನಲ್ಲಿ ಕಾಲೆಜೊಂದರಲ್ಲಿ ನಡೆದ ಘಟನೆ ಎಂತವರನ್ನು ಬೆಚ್ಚಿಬೀಳಿಸುತ್ತದೆ. ಸೆಮಿಸ್ಟರ್‌ನಲ್ಲಿ ಫೇಲ್(Fail) ಮಾಡಿದ್ದ ಕಾರಣಕ್ಕೆ ಹಾಗೂ ತನ್ನ ಅಂಕಪಟ್ಟಿ ಕೊಡಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಪ್ರಿನ್ಸಿಪಾಲ್(Principal)ಮೇಲೆ ಪೆಟ್ರೋಲ್(Petrol) ಸುರಿದು ಬೆಂಕಿ ಹಚ್ಚಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರಿನ್ಸಿಪಾಲ್ ಇಂದು(ಶನಿವಾರ) ಸಾವು ಕಂಡಿದ್ದಾರೆ!
ಹೌದು, ಇಂದೋರ್‌ನ ಬಿಎಂ ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ವಿಮುಕ್ತಾ ಶರ್ಮ(Vimuktha Sharma) ಅವರಿಗೆ ವಿದ್ಯಾರ್ಥಿಯೊಬ್ಬ ಬೆಂಕಿ ಇಟ್ಟಿದ್ದ. ಶೇ.80ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ವೆಂಟಿಲೇಟರ್‌ನಲ್ಲಿದ್ದ ಅವರು ಶನಿವಾರ ಮುಂಜಾನೆ 4 ಗಂಟೆಯ ವೇಳೆಗೆ ನಿಧನರಾಗಿದ್ದಾರೆ ಎಂದು ಅವರ ಸಹೋದರ ಅರವಿಂದ್ ತಿವಾರಿ(Aravinda Thivari) ತಿಳಿಸಿದ್ದಾರೆ. ಆರೋಪಿಯನ್ನು 24 ವರ್ಷದ ಅಶುತೋಶ್ ಶ್ರೀವಾತ್ಸವ(Ashuthosh Shrinivas) ಎಂದು ಗುರುತಿಸಲಾಗಿದೆ. 7ನೇ ಸೆಮಿಸ್ಟರ್‌ನಲ್ಲಿ ತಮ್ಮನ್ನು ಫೇಲ್ ಮಾಡಿದ್ದ ಸಿಟ್ಟಿಗೆ ಹಾಗೂ ತನ್ನ ಅಂಕಪಟ್ಟಿ ಕೊಡಲಿಲ್ಲವೆಂದು ಈ ಕೃತ್ಯ ಎಸಗಿದ್ದಾನೆ ಎಂದು ಇಂದೋರ್ ಗ್ರಾಮೀಣ ಪೊಲೀಸ್ ಠಾಣೆಯ ಎಸ್‌ಪಿ ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ.
‘ಪ್ರಿನ್ಸಿಪಾಲ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗಂಭೀರ ಪ್ರಮಾಣದ ಸುಟ್ಟ ಗಾಯಗಳಾಗಿದ್ದ ಕಾರಣ ಸಾವು ಕಂಡಿದ್ದಾರೆ. ಇವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ 7ನೇ ಸೆಮಿಸ್ಟರ್‌ನಲ್ಲಿ ಫೇಲ್ ಆಗಿದ್ದಾನೆ. ಅದೇ ಸಿಟ್ಟಿಗಾಗಿ ಈ ಕೃತ್ಯ ಮಾಡಿರಬಹುದು. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ( ಫೆಬ್ರವರಿ 20) ಇಂದೋರ್‌ನ ಸಿಮ್ರೋಲ್ ಪ್ರದೇಶದದಲ್ಲಿ 54 ವರ್ಷ ವಿಮುಕ್ತಾ ಶರ್ಮಾ(ಕಾಲೇಜು ಪ್ರಾಂಶುಪಾಲೆ) ಅವರು ಕಾರಿನಿಂದ ಇಳಿಯುವ ವೇಳೆ ಅವರ ಮೇಲೆ ದಾಳಿ ಮಾಡಿದ್ದ ಆಶುತೋಶ್ ಶ್ರೀವಾತ್ಸವ ಮೊದಲು ಅವರಿಗೆ ಚೂರಿಯಿಂದ ಹಲ್ಲೆ ಮಾಡಿದ್ದ. ನಂತರ ಅವರು ನೋವಿನಿಂದ ನರಳುತ್ತಿದ್ದ ವೇಳೆ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಬೆಂಕಿಯನ್ನು ನಂದಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೇ.80ರಷ್ಟು ಸುಟ್ಟ ಗಾಯಗಳೊಂದಿಗೆ ವಿಮುಕ್ತಾ ಶರ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತನಿಖೆಯ ಭಾಗವಾಗಿ ಅಪರಾಧವನ್ನು ಹೇಗೆ ಮಾಡಿದ್ದು ಎನ್ನುವುದನ್ನು ತಿಳಿಸಲು ಶ್ರೀವಾಸ್ತವ್ ಅವರನ್ನು ಮೊದಲು ಸ್ಥಳಕ್ಕೆ ಕರೆದೊಯ್ಯಲಾಯಿತು. 2022 ರ ಜುಲೈನಲ್ಲಿ ಬಿ ಫಾರ್ಮ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ ಎಂದೂ, ಕಾಲೇಜು ಆಡಳಿತ ಮಂಡಳಿ ತನ್ನ ಮಾರ್ಕ್ಸ್ ಕಾರ್ಡ್ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶ್ರೀವಾತ್ಸವ ಪೊಲೀಸರಿಗೆ ತಿಳಿಸಿದ್ದಾನೆ ಎನ್ನುವ ವರದಿಗಳಿವೆ. ಈ ಆರೋಪಗಳನ್ನು ತಳ್ಳಿಹಾಕಿದ ಕಾಲೇಜು ಅಧಿಕಾರಿಗಳು, ಕ್ರಿಮಿನಲ್ ಪೂರ್ವಾಪರ ಹೊಂದಿರುವ ಶ್ರೀವಾಸ್ತವ್ಗೆ ಹಲವಾರು ಸೂಚನೆಗಳನ್ನು ನೀಡಿದ್ದೇವೆ. ಆದರೂ ಅಂಕಪಟ್ಟಿ ತೆಗೆದುಕೊಳ್ಳಲು ಬಂದಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಇಂದೋರ್ ಕಲೆಕ್ಟರ್ ಇಳಯರಾಜ ಟಿ(Ilayaraja T) ಹೊರಡಿಸಿದ ಆದೇಶದಂತೆ ಶ್ರೀವಾಸ್ತವ ಅವರಿಗೆ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅನ್ವಯ ಕೇಸ್ ದಾಖಲಿಸಲಾಗಿದೆ ಎಂದು ವಿರ್ಡೆ ಹೇಳಿದ್ದಾರೆ. ‘ತನಿಖೆಯ ಸಮಯದಲ್ಲಿ, ಶ್ರೀವಾಸ್ತವ ವಿರುದ್ಧ ಫಾರ್ಮಸಿ ಕಾಲೇಜು ಅಧಿಕಾರಿಗಳು, ಮಹಿಳಾ ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿಯಿಂದ ಎರಡು ಮೂರು ದೂರುಗಳು ಬಂದಿವೆ. ಇದಕ್ಕೂ ಮುನ್ನ ಆರೋಪಿ ಶ್ರೀವಾತ್ಸವ ಆತ್ಮಹತ್ಯೆ ಬೆದರಿಕೆಯನ್ನೂ ಹಾಕಿದ್ದ’ ಎಂದು ಪಿಟಿಐಗೆ ವಿರ್ಡೆ ತಿಳಿಸಿದ್ದಾರೆ.
ಮೊದಲು ಶರ್ಮಾ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದಕ್ಕಾಗಿ ಶ್ರೀವಾಸ್ತವ್ ಅವರನ್ನು ಬಂಧಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ, ವಿಮುಕ್ತಾ ಅವರು ಸಾವು ಕಂಡಿದ್ದರಿಂದ ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಅಲ್ಲದೆ ಈ ನಡುವೆ ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಇಂದೋರ್‌ನ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಂಜೀವ್ ತಿವಾರಿ ಅವರನ್ನು ಅಮಾನತುಗೊಳಿಸಲಾಗಿದೆ.