The mystery of child birth : ನಕಲಿ ಹೆಸರುಗಳನ್ನು ಬಳಸಿ ಬರೋಬ್ಬರಿ 60 ಮಕ್ಕಳಿಗೆ ತಂದೆಯಾದ! ಅರೆ ಇದು ಹೇಗೆ ಸಾಧ್ಯ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ!

The mystery of child birth: ಒಬ್ಬ ಪುರುಷ ಸಾಮಾನ್ಯವಾಗಿ 2 ರಿಂದ 4 ಅಥವಾ 5, ಹೋಗಲಿ 10 ಮಕ್ಕಳಿಗೆ ತಂದೆಯಾಗಿರುವುದನ್ನು ನಾವು ನೋಡಿದ್ದೇವೆ. ಕೆಲವರು ಈ ವಿಚಾರದಲ್ಲಿ ರೆಕಾರ್ಡ್ (Record) ಕೂಡ ಮಾಡಿದ್ದಾರೆ. ಹಲವಾರು ಹೆಂಡತಿಯರನ್ನು ಹೊಂದುವ ಮೂಲಕ ಈ ಸಾಧನೆಯನ್ನು ಮಾಡಿರುತ್ತಾರೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಬರೋಬ್ಬರಿ 60 ಮಕ್ಕಳ ತಂದೆಯಾಗಿದ್ದಾನೆ! ಅಯ್ಯೋ ಇಷ್ಟೊಂದು ಶಕ್ತಿ ಈತನಿಗೆ ಎಲ್ಲಿಂದ ಬಂತು? ಅನ್ನೋ ಪ್ರಶ್ನೆ ಮೊದಲು ನಿಮ್ಮ ತಲೆಯಲ್ಲಿ ಸುಳಿಯ ಬಹುದು. ಹೌದು, ಈತ ಇಷ್ಟು ಮಕ್ಕಳ ಹುಟ್ಟಿಗೆ ಕಾರಣನಾಗಲು ಅನುಸರಿಸಿದ ಮಾರ್ಗವೂ ಸ್ವಲ್ಪ ವಿಶೇಷವಾದ್ದೇ ಬಿಡಿ. ಅಂತ ಚಮತ್ಕಾರ ಇವನೇನು ಮಾಡಿದ್ನಪ್ಪಾ ಅನ್ಕೊಳ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.

ಆಸ್ಟ್ರೇಲಿಯಾದಲಲ್ಲಿ ಎಲ್​ಜಿಬಿಟಿ(LGBT- Lesbian, gay, bisexual and transgender) ಸಮುದಾಯವೊಂದು ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕಾರ್ಯಕ್ರಮದ ಈವೆಂಟ್‌ನಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದ್ದರು. ಅಲ್ಲಿ ಬೇರೆ ಬೇರೆ ಪೋಷಕರ ಮಕ್ಕಳನ್ನು ನೋಡಿದಾಗ ಅವರಲ್ಲಿ ಹಲವರ ಮಕ್ಕಳು ಒಂದೇ ರೀತಿ ಕಾಣುವುದನ್ನು ಕಂಡು ಆಶ್ಚರ್ಯವಾಗಿದೆ.

ದಿಗ್ಭ್ರಮೆಗೊಂಡ ಪೋಷಕರ ಗುಂಪು ನಂತರ ಸ್ಥಳೀಯ IVF(In vitro fertilization) ಸೌಲಭ್ಯಗಳನ್ನು ಬಳಸಿ ಈ ಕುರಿತು ತನಿಖೆ ಮಾಡಲು ಕರೆ ಮಾಡಲು ಪ್ರಾರಂಭಿಸಿದರು. ಅವರಲ್ಲಿ ಕೆಲವರು ಅನೌಪಚಾರಿಕ ಚಾನೆಲ್‌ಗಳ ಮೂಲಕ ವ್ಯಕ್ತಿಯನ್ನು ಭೇಟಿ ಮಾಡಿದರು. ನಂತರ ಈ ರೀತಿಯ ವಿಚಿತ್ರ ಬೆಳವಣಿಗೆಗೆ ಕಾರಣವಾದಾತ ತಗಲಾಕೊಂಡಿದ್ದಾನೆ.

ತನ್ನ ವೀರ್ಯ(Sperm)ವನ್ನು ದಾನ ಮಾಡಿ ಈತ ಬರೋಬ್ಬರಿ 60 ಮಕ್ಕಳ ಹುಟ್ಟಿಗೆ ಕಾರಣನಾಗಿದ್ದಾನೆ (The mystery of child birth). ಅಲ್ಲದೆ ಈ ರೀತಿ ಹಲವು ಬಾರಿ ವೀರ್ಯದಾನ ಮಾಡಲು ಈ ಭೂಪ ನಾಲ್ಕು ವಿಭಿನ್ನ ಹೆಸರುಗಳನ್ನು ಬಳಸಿದ್ದಾನೆ ಎಂದು ವರದಿಯಾಗಿದೆ. ಈತನಿಂದ ಮೊದಲ ಸಲ ವೀರ್ಯ ಪಡೆದ ‘ಫರ್ಟಿಲಿಟಿ ಫಸ್ಟ್‌'(Fertility First)ನ ಡಾ| ಆನ್ನೆ ಕ್ಲಾರ್ಕ್(Anne Clacrak) ಈ ಕುರಿತು ಪ್ರತಿಕ್ರಿಯಿಸಿ ‘ಆ ವ್ಯಕ್ತಿ ಒಮ್ಮೆ ಮಾತ್ರ ತನ್ನ ಕ್ಲಿನಿಕ್‌ಗೆ ಹೋಗಿದ್ದ. ಆದರೆ ಫೇಸ್‌ಬುಕ್(Face book)ಗ್ರೂಪ್​ನಂತಹ ಹಲವಾರು ಅನಧಿಕೃತ ವಿಧಾನಗಳ ಮೂಲಕ ಅನೇಕ ಬಾರಿ ವೀರ್ಯ ದಾನ ಮಾಡಿದ್ದಾನೆ’ ಎಂದು ಹೇಳಿದ್ದಾರೆ.

ಅಂದಹಾಗೆ ಇದೇನು ವೀರ್ಯ ದಾನ ಪದ್ಧತಿ ಎಂದು ನೀವು ಯೋಚಿಸಬಹುದು. ಹೌದು ಆಸ್ಟ್ರೇಲಿಯಾ(Australia)ದಲ್ಲಿ ಈ ರೀತಿ ಒಂದು ವಿಶೇಷ ವ್ಯವಸ್ಥೆ ಇದೆ. ಅದರಲ್ಲೂ ಮುಖ್ಯವಾಗಿ ಸಲಿಂಗ ದಂಪತಿಗಳಿಗೆ ಇದನ್ನು ನೀಡಬಹುದು. ಅಲ್ಲದೆ ಇದಕ್ಕೆ ಕೆಲವು ಮಿತಿಗಳು ಕೂಡ ಇವೆ. ವೀರ್ಯ ನೀಡುವ ವೇಳೆ ಅವರ ಖರ್ಚುಗಳನ್ನು ಸರಿದೂಗಿಸಲು ಪ್ರತಿ ಕ್ಲಿನಿಕ್ ಭೇಟಿಗೆ ಗರಿಷ್ಠ 35 ಯೂರೋ(3000 ರೂ.ಗಳಷ್ಟು)ಗಳನ್ನು ಸ್ವೀಕರಿಸಲು ಅವರಿಗೆ ಅನುಮತಿಸಲಾಗಿದೆ. ಪ್ರಯಾಣ, ವಸತಿ ಅಥವಾ ಮಕ್ಕಳ ಆರೈಕೆಗಾಗಿ ಅವರ ವೆಚ್ಚಗಳು ಈ ಮೊತ್ತವನ್ನು ಮೀರಿದರೆ ಅವರು ಹೆಚ್ಚಿನ ಮೊತ್ತವನ್ನು ಕ್ಲೈಮ್(Claim) ಮಾಡಬಹುದು.

ಅಲ್ಲದೆ ಒಬ್ಬ ವ್ಯಕ್ತಿ ದಾನ ಮಾಡಿದ ವೀರ್ಯವನ್ನು ಗರಿಷ್ಠ 10 ಕುಟುಂಬಗಳಲ್ಲಿ ಬಳಸಬಹುದು ಎಂದು HFEA ಹೇಳುತ್ತದೆ. ಇದರಿಂದ ಪ್ರತಿ ಕುಟುಂಬದಲ್ಲಿ ಜನಿಸಬಹುದಾದ ಮಕ್ಕಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಮತ್ತು ದಾನಿಗಳು ಕುಟುಂಬಗಳಿಗೆ ದೇಣಿಗೆ ನೀಡುವ ಮಿತಿಯನ್ನು ಕಡಿಮೆ ಮಾಡಲು ನಿರ್ಧರಿಸಬಹುದು. ಇನ್ನು ವೀರ್ಯ ದಾನಿಗಳು ಹಣಕ್ಕಾಗಿ ಯಾವಾಗ ಬೇಕು ಆವಾಗ, ಯಾರಿಗೆ ಬೇಕಾದರೂ ವೀರ್ಯವನ್ನು ದಾನಮಾಡುವುದು ಕಾನೂನುಬಾಹಿರವಾಗಿದೆ.

ಅಂತಯೇ ಈ ವ್ಯಕ್ತಿ ತಾನು ಬೇರೆ ಬೇರೆ ರೀತಿಯಲ್ಲಿ ನಾಲ್ಕು ಹೆಸರುಗಳನ್ನು ಇಟ್ಟುಕೊಂಡು ಕಾನೂನುಬಾಹಿರವಾಗಿ ವೀರ್ಯವನ್ನು ದಾನ ಮಾಡಿದ್ದಾನೆ. ಅದೂ ಅಲ್ಲದೆ ತಾನು ದಾನಮಾಡಿದಂತಹ ವೀರ್ಯದಿಂದ ಹುಟ್ಟಿದ ಮಕ್ಕಳೆಲ್ಲರೂ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಮ್ಮ ಹುಟ್ಟಿಗೆ ಮೂಲ ಕಾರಣನಾದ ಅಪ್ಪನನ್ನೇ ಹಿಡಿದುಕೊಟ್ಟದ್ದು ದುರಾದೃಷ್ಟ ಎಂದೇ ಹೇಳಬಹುದು.

Leave A Reply

Your email address will not be published.