Vivo V27 Series : ಬಿಡುಗಡೆಗೆ ಮೊದಲೇ ಜನರಲ್ಲಿ ಭಾರೀ ಆಸಕ್ತಿ ಮೂಡಿಸಿದೆ ವಿವೋ ವಿ27 ಸಿರೀಸ್! ಅಬ್ಬಾ ಏನು ಫೀಚರ್ಸ್ ಇದೆ ಗೊತ್ತೇ?
Vivo V27 Series: ಸದ್ಯ ಮಾರುಕಟ್ಟೆಯಲ್ಲಿ 5G ಸ್ಮಾರ್ಟ್‌ಫೋನ್ ಗಳ ಸ್ಪರ್ಧೆಗೆ ವಿವೋ ಕೂಡ ಮುಂದಾಗಿದೆ ಎಂದರೆ ತಪ್ಪಾಗಲಾರದು. ಹೌದು ವಿವೋ ಕಂಪೆನಿಯ (vivo company)ಸ್ಮಾರ್ಟ್ಫೋನ್ಗಳು(smartphone) ಹೆಚ್ಚಾಗಿ ಜನಪ್ರಿಯತೆಯನ್ನು ಪಡೆದದ್ದು ಇದರ ಕ್ಯಾಮೆರಾ ಫೀಚರ್ಸ್ಗಳಿಗೆ. ಸದ್ಯ ಇದೀಗ ವಿವೋ ಕಂಪೆನಿ ಶೀಘ್ರದಲ್ಲೇ ವಿವೋ ವಿ27 ಸೀರಿಸ್ನ ವಿವೋ V27 ಪ್ರೊ ಮತ್ತು ವಿವೋ V27e ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇನ್ನು ಈ ಸರಣಿಯಲ್ಲಿ ಎರಡು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯನ್ನು (market )ಪ್ರವೇಶಿಸಲಿದ್ದು, ವಿಭಿನ್ನ ರೀತಿಯ ಫೀಚರ್ಸ್ಗಳನ್ನು ಒಳಗೊಂಡಿದೆ.
ವಿಶೇಷವೆಂದರೆ ಬಿಡುಗಡೆಗೂ ಮೊದಲೇ ವಿ27 ಸೀರಿಸ್ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಹೌದು ಇದರ ವೈಶಿಷ್ಯ ಬಹಳ ಉತ್ತಮವಾಗಿದೆ. ಇನ್ನು ವಿವೋ ವಿ27 ಸೀರಿಸ್ನ ಸ್ಮಾರ್ಟ್ಫೋನ್ಗಳು ಇದೇ ಮಾರ್ಚ್ 1 ಅಥವಾ ಫೆಬ್ರವರಿ 28 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಇದರ ಬೆಲೆ ಮತ್ತು ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ವಿವೋ V27 ಸರಣಿ (Vivo V27 Series) ಸ್ಮಾರ್ಟ್‌ಫೋನ್ ವಿಶೇಷತೆ ಇಂತಿವೆ :
• ಸದ್ಯ ವಿವೋ V27 ಸರಣಿ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆಯಿದೆ.
• ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ.
• ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ ಎಂಬ ನಿರೀಕ್ಷೆಯಿದೆ.
• ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ.
• ಇದಲ್ಲದೆ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.
• ಇನ್ನು ಈ ಸ್ಮಾರ್ಟ್‌ಫೊನ್ 4600 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದ್ದು, 66W ವೈರ್ಡ್ ಚಾರ್ಜಿಂಗ್ ಬೆಂಬಲಿಸಲಿದೆ.
• ಈ ಸ್ಮಾರ್ಟ್‌ಫೋನ್ ಅನ್ನು 19 ನಿಮಿಷಗಳಲ್ಲಿ 50% ಚಾರ್ಜಿಂಗ್ ಮಾಡಬಹುದು ಎನ್ನಲಾಗಿದೆ.
ಮುಖ್ಯವಾಗಿ ಇವು 5ಜಿ ಫೋನ್ಗಳಾಗಿದ್ದು, ಉತ್ತಮ ಗುಣಮಟ್ಟದ ಫೀಚರ್ಸ್ಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸೋದು ಖಂಡಿತಾ. ಇನ್ನು ವಿವೋ ವಿ27 ಸೀರಿಸ್ನ ವಿವೋ V27 ಪ್ರೊ ಮತ್ತು ವಿವೋ V27e ಸ್ಮಾರ್ಟ್ಫೋನ್ಗಳನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಫ್ಲೋಯಿಂಗ್ ಗೋಲ್ಡ್, ಎಮರಾಲ್ಡ್ ಗ್ರೀನ್, ಮ್ಯಾಜಿಕ್ ಬ್ಲೂ ಮತ್ತು ನೋಬಲ್ ಬ್ಲಾಕ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದ್ದು ಜನರು ಈ ಸ್ಮಾರ್ಟ್ ಫೋನ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.