Vijayalakshmi Darshan : ಕಿರುತೆರೆ ನಟಿ ಮೇಘ ಶೆಟ್ಟಿ ವಿರುದ್ಧ ಸಿಡಿದೆದ್ದ ದರ್ಶನ್‌ ಪತ್ನಿ !

Vijayalakshmi Darshan: ಫೆ.16 ರಂದು ಜನಪ್ರಿಯ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ (challenging star darshan birthday). ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ (Darshan), ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ತಮ್ಮ ಬರ್ತ್ ಡೇ ಸೆಲೆಬ್ರೆಟ್ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಹಾಗೇ ಫಾನ್ಸ್ ಗಳ ಜೊತೆ ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಂಡಿದ್ದರು. ಸದ್ಯ ಈ ವಿಚಾರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಗರಂ ಆಗಿದ್ದಾರೆ. ಅದರಲ್ಲೂ ನಟಿ ಮೇಘಾ ಶೆಟ್ಟಿ(Actress Megha Shetty) ವಿರುದ್ಧ ವಿಜಯಲಕ್ಷ್ಮಿ ಸಖತ್ ಸಿಟ್ಟು ಮಾಡಿಕೊಂಡು, ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಬ್ಬಾ!! ಅಂತಾ ತಪ್ಪು ನಟಿ ಏನ್ ಮಾಡಿದ್ರು ಗೊತ್ತಾ?

 

ದರ್ಶನ್ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಅವರನ್ನು ಭೇಟಿಯಾಗಲು ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಇನ್ನು ಈ ಬಾರಿ ನಟನ ಹುಟ್ಟುಹಬ್ಬವನ್ನು ಆಚರಿಸುವ ಅವಕಾಶ ಸಿಕ್ಕಿದೆ ಅಂದ ಮೇಲೆ ಆ ಚಾನ್ಸ್ ಯಾರು ಮಿಸ್ ಮಾಡ್ಕೋತಾರೆ ಹೇಳಿ. ಈ ಬಾರಿ ನಟ ದರ್ಶನ್ ಅವರ 46ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದು,
ಚಿತ್ರರಂಗದ ಗೆಳೆಯರೆಲ್ಲ ಅವರ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದರು, ಕೆಕ್‌ ಕಟ್‌ ಮಾಡಿ ಸಂಭ್ರಮಿಸಿದ್ದರು. ಆದರೆ ನಟಿ ಮೇಘಾ ಶೆಟ್ಟಿ, ಪವಿತ್ರಾ ಗೌಡ ಸೇರಿದಂತೆ ಅವರ ಸ್ನೇಹಿತರು ಸ್ಪೆಷಲ್ ಆಗಿ ಚಾಲೆಂಜಿಂಗ್ ಸ್ಟಾರ್ ಬರ್ತ್‌ ಡೇ ಸೆಲೆಬ್ರೆಟ್‌ ಮಾಡಿದ್ದರು. ಈ ವಿಡಿಯೋವನ್ನು ನಟಿ ಮೇಘಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೇ ವಿಜಯಲಕ್ಷ್ಮಿ ಕೋಪಕ್ಕೆ ಕಾರಣ.

ದರ್ಶನ್ ಪತ್ನಿ ಅದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿ, ಕೆಲವು ಸಾಲುಗಳನ್ನು ಬರೆದು ಅದರ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಮೇಘಾ, ಪವಿತ್ರಾ ಹಾಗೂ ಸೋನಲ್‌ ಗ್ಯಾಂಗ್‌ ಪಾರ್ಟಿಯಲ್ಲಿ ದರ್ಶನ್‌ ಅವರನ್ನು ಗ್ರ್ಯಾಂಡ್‌ ಆಗಿ ವೆಲ್‌ಕಮ್‌ ಮಾಡಿದ್ದರು. ಡಿಜೆ ಮ್ಯೂಸಿಕ್‌ಗಳ ಸದ್ದು ಜೋರಾಗೇ ಇತ್ತು. ನಟಿ ಮತ್ತು ಗ್ಯಾಂಗ್ ದರ್ಶನ್ ಗೆ ಕೆಕ್‌ ತಿನ್ನಿಸಿ ಸಂಭ್ರಮಿಸಿದ್ದರು. ಈ ವಿಡಿಯೋವನ್ನು ಮೇಘಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಾಕಿದ್ದು, ವಿಡಿಯೋಗೆ ಬೃಂದಾವನ ಸಿನಿಮಾದ ʼಹಾರ್ಟಲ್ಲಿರೋ ಹಾರ್ಮೋನಿಯಮ್‌ʼ ಹಾಡನ್ನು ಸೇರಿಸಿ ಶೇರ್ ಮಾಡಿದ್ದರು.

ಮೇಘಾ ಶೆಟ್ಟಿ ದರ್ಶನ್‌ ಅವರ ದೊಡ್ಡ ಅಭಿಮಾನಿ. ಆಗಾಗ ದರ್ಶನ್ ಜೊತೆಗಿನ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ಬಾರಿ ದರ್ಶನ್‌ ಅವರು ಸಫಾರಿಗೆ ಹೋಗಿದ್ದಾಗ ಅಲ್ಲಿಗೆ ಮೇಘಾ ಶೆಟ್ಟಿ ಮತ್ತು ಗ್ಯಾಂಗ್‌ ಭೇಟಿ ಮಾಡಿ ಪಾರ್ಟಿ ಮಾಡಿದ್ದರು. ಅಂದಿನ ಫೋಟೋಗಳು ಸಖತ್‌ ವೈರಲ್‌ ಆಗಿದ್ದವು. ಇದೀಗ ಮೆಘಾ ಹಂಚಿಕೊಂಡಿರುವ ವಿಡಿಯೋ ಸಹ ವೈರಲ್‌ ಆಗಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ದರ್ಶನ್ ಪತ್ನಿ ಫುಲ್ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. “ಈ ರೀತಿ ಬರ್ತ್ಡೇ ಪಾರ್ಟಿ ಮಾಡಬೇಡಿ. ಇದರಿಂದ ನನಗೂ ನನ್ನ ಮಗನಿಗೂ ಎಫೆಕ್ಟ್ ಆಗುತ್ತದೆ” ಎಂದು ಹೇಳಿದ್ದರು. ಸದ್ಯ ಈ ಪೋಸ್ಟ್ ಗೆ ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದು, ಕೆಲವರು ಫ್ಯಾನ್ಸ್ ಆಗಿ ಆಚರಿಸಿದ್ದಾರೆ ಎಂದರೆ, ಇನ್ನೂ ಕೆಲವರು ವಿಜಯಲಕ್ಷ್ಮಿ ಪರ ನಿಂತರು. ಒಟ್ಟಾರೆ ಸೋಷಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

Leave A Reply

Your email address will not be published.