Valentine Day : ಪ್ರೇಮಿಗಳ ದಿನದಂದು ಕಿಕ್ಕಿರಿದ ರೈಲಿನಲ್ಲೇ ಪ್ರೇಮಿಗಳ ಲೈಂಗಿಕ ಕ್ರಿಯೆ ! ಮುಂದೇನಾಯ್ತು ?

Valentine’s Day: ಫೆ.14 ಪ್ರೇಮಿಗಳ ದಿನ. ಎಲ್ಲಾ ಪ್ರೇಮಿಗಳು ಒಂದು ಕ್ವಾಲಿಟಿ ಸಮಯ ಕಳೆಯಲೆಂದೇ ಇರುವ ದಿನ ಪ್ರೇಮಿಗಳ ದಿನ (Valentine’s day). ಹಾಗೆನೇ ಯಾರಿಗಾದರೂ ತಮ್ಮ ಪ್ರೀತಿಯನ್ನು ನಿವೇದನೆ ಮಾಡಲು ಇರುವ ದಿನ ಎಂದೇ ಹೇಳಬಹುದು. ಇದು ಆ ದಿನದಂದು ಎಲ್ಲಾ ಕಡೆ ಕಂಡು ಬರುತ್ತದೆ. ಹಾಗೆನೇ ಪ್ರೀತಿಯ ಸಂಕೇತವಾದ ಹೃದಯ ಅಂದರೆ ಕೆಂಪು ಬಣ್ಣದ ಬಟ್ಟೆ ಧರಿಸಿ ಎಲ್ಲಾ ಪ್ರೇಮಿಗಳು ಅಲ್ಲಲ್ಲಿ ಕಾಣ ಸಿಗುವುದು ನೋಡೋಕೆ ಒಂದು ಹಬ್ಬ. ಆದರೆ ಈ ಸಂತಸದ ಸಮಯದಲ್ಲಿ ಇಲ್ಲೊಂದು ಜೋಡಿ ಖುಲ್ಲಂ ಖುಲ್ಲಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು ನಿಜಕ್ಕೂ ಎಲ್ಲರಿಗೂ ಅಸಹ್ಯ ಮೂಡಿಸಿದೆ.

ಈ ಘಟನೆ ಆಸ್ಟ್ರೇಲಿಯಾದ ರೈಲಿನಲ್ಲಿ ನಡೆದಿದೆ. ಸಿಡ್ನಿಯ ರೈಲಿನಲ್ಲಿ ಈ ಘಟನೆ ನಡೆದಿದೆ. ಆದರೆ ಈ ದೃಶ್ಯವನ್ನು ಖುಲ್ಲಂಖುಲ್ಲಾ ನೋಡಿದ ಸಹ ಪ್ರಯಾಣಿಕರು ನಿಜಕ್ಕೂ ಗಾಬರಿಗೊಂಡಿದ್ದಾರೆ. ಉತ್ತರ ಸಿಡ್ನಿ ಉಪನಗರಗಳಾದ ನಾರ್ಮಹರ್ಸ್ಟ್‌ ಮತ್ತು ಗಾರ್ಡನ್‌ ನಡುವೆ ರೈಲು ಸಾಗುವ ಸಂದರ್ಭದಲ್ಲಿ ಈ ಲೈಂಗಿಕ ಕ್ರಿಯೆಯಲ್ಲಿ ಜೋಡಿ ತೊಡಗಿದೆ.

ಈ ಅಸಹ್ಯಕರ ದೃಶ್ಯ ನೋಡಿದ ಕೆಲವರು ಬಟ್ಟೆ ಧರಿಸುವಂತೆ ವಿನಂತಿ ಕೂಡಾ ಮಾಡಿದ್ದಾರೆಂದು ವರದಿಯಾಗಿದೆ. ವೀಡಿಯೋ ದೃಶ್ಯಾವಳಿಗಳಲ್ಲಿ, ಧ್ವನಿವರ್ಧಕದಲ್ಲಿ ಕೂಡಾ ಈ ಬಗ್ಗೆ ಹೇಳಲಾಗಿದ್ದು, ಜೋಡಿ ತಮ್ಮ ಅನುಚಿತ ವರ್ತನೆ ನಿಲ್ಲಿಸಬೇಕು ಎಂದು ಹಾಗೂ ತಮ್ಮ ಬಟ್ಟೆಗಳನ್ನು ಧರಿಸಬೇಕೆಂದು ಮನವಿ ಕೂಡಾ ಮಾಡಿದೆ ಎಂದು ವರದಿಯಾಗಿದೆ.

ಆದರೆ ಕಾಮದ ಅಮಲಿನಲ್ಲಿದ್ದ ಈ ಜೋಡಿ ಲೈಂಗಿಕ ಕ್ರಿಯೆ ನಿಲ್ಲಿಸಲಿಲ್ಲ. ಅನಂತರ ಅಲ್ಲಿನ ಸೆಕ್ಯುರಿಟಿ ಬಂದು ಇವರನ್ನು ಎಚ್ಚರಿಸಬೇಕಾಯಿತು ಎಂದು ಹೇಳಲಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರಯಾಣಿಕರಿಗೆ ಗೌರವ ನೀಡಬೇಕು, ನಿಮ್ಮ ನಡವಳಿಕೆಯು ಆಕ್ಷೇಪಾರ್ಹ ಎಂದು ಜೋಡಿಗೆ ಹೇಳಿ ಅವರ ಈ ನಡವಳಿಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

 

Leave A Reply

Your email address will not be published.