BMW R 1250 GS : ಲೇಡಿ ಸೂಪರ್‌ ಸ್ಟಾರ್‌ ಖರೀದಿಸಿದ್ರು BMW ಅಡ್ವೆಂಚರ್‌ ಬೈಕ್‌ ! ಮಲಿಯಾಳಿ ನಟಿಯ ಈ ನಡೆಗೆ ಸ್ಪೂರ್ತಿ ಇವರೇ ನೋಡಿ!

BMW R 1250 GS: ಬೈಕ್ (bike) ಕ್ರೇಜ್ ಯಾರಿಗಿಲ್ಲಾ ಹೇಳಿ ಹುಡುಗರಿಗೆ ಎಷ್ಟು ಕ್ರೇಜ್ ಇದೆಯೋ ಅಷ್ಟೇ ಹುಡುಗಿಯರಿಗೂ ಇದೆ. ಅದರಲ್ಲೂ ಸ್ಟೈಲೀಶ್ ಲುಕ್ ಕೊಡೋ ಬೈಕ್ ಅಂದ್ರೆ ಎಲ್ಲರಿಗೂ ಭಾರೀ ಇಷ್ಟ. ಸದ್ಯ ಸೆಲೆಬ್ರೆಟಿಯೊಬ್ಬರಿಗೆ ಈ ಬೈಕ್ ಕ್ರೇಜ್ ಹೆಚ್ಚಾಗಿ, ಅದನ್ನು ಖರೀದಿಸಿದ್ದಾರೆ. ಮಲಯಾಳಂ ಚಿತ್ರರಂಗದ ಲೇಡಿ ಸೂಪ‌ರ್ ಸ್ಟಾರ್ ಮಂಜು ವಾರಿಯರ್ (Manju Warrier) ದುಬಾರಿ ಬೆಲೆಯ BMW ಅಡ್ವೆಂಚರ್ (BMW R 1250 GS) ಬೈಕ್ ಅನ್ನು ಖರೀದಿಸಿದ್ದಾರೆ.

ಲೇಡಿ ಸೂಪರ್‌ಸ್ಟಾರ್ ಮಂಜು ವಾರಿಯರ್ ಖರೀದಿಸಿದ ಬೈಕ್ BMW R 1250 GS ಆಗಿದ್ದು, ಈ ಬೈಕ್ ಪ್ರೀಮಿಯಂ ಅಡ್ವೆಂಚರ್ ವಿಭಾಗಕ್ಕೆ ಸೇರಿದ್ದಾಗಿದೆ. BMW R 1250 GS ಅಡ್ವೆಂಚರ್ ಬೈಕ್ ಬೆಲೆ ಸುಮಾರು 28 ಲಕ್ಷ ರೂಪಾಯಿ. ಸದ್ಯ ಈ ದುಬಾರಿ ಬೈಕ್ ಅನ್ನು ಲೇಡಿ ಸೂಪರ್‌ಸ್ಟಾರ್ ತಮ್ಮದಾಗಿಸಿದ್ದಾರೆ.

ನಟಿ ಈ ಬೈಕ್ ಅನ್ನು ತಮಿಳು ಸೂಪರ್‌ಸ್ಟಾ‌ರ್ ಅಜಿತ್ (actor Ajith) ಅವರಿಂದ ಪ್ರೇರಣೆ ಆಗಿ ಖರೀದಿಸಿದ್ದಾರೆ ಎನ್ನಲಾಗಿದೆ. ನಟಿ ಮಂಜು ವಾರಿಯರ್ ಮತ್ತು ತಮಿಳು ಸೂಪರ್‌ಸ್ಟಾ‌ರ್ ಅಜಿತ್ ಕುಮಾರ್ ಅವರು 2500 ಕಿಮೀ ಲಡಾಖ್ ಪ್ರವಾಸದಲ್ಲಿ ಜೊತೆಗೂಡಿದ್ದರು. ಈ ಪ್ರವಾಸದ ಬಳಿಕ ಮಂಜು ವಾರಿಯರ್ ತಾನೇಕೆ ಬೈಕ್ ಖರೀದಿಸಬಾರದು ಎಂದುಕೊಂಡರು. ಹಾಗಾಗಿ ನಟಿ ದ್ವಿಚಕ್ರ ವಾಹನ ಲೈಸನ್ಸ್ ಪಡೆದು, BMW R 1250 GS ಅನ್ವೆಂಚರ್ ಬೈಕ್ ಖರೀದಿಸಿದ್ದಾರೆ. ಸದ್ಯ ಇದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಸೂಪರ್ ಸ್ಟಾರ್ ಅಜಿತ್ ಕುಮಾರ್ ಈ ವರ್ಷ 60 ದಿನಗಳ ಬೈಕ್ ಟ್ರಿಪ್ ಪ್ಲಾನ್ ಮಾಡಿದ್ದಾರೆ. ಈ ಟ್ರಿಪ್ ನಲ್ಲಿ ನಟಿ ಕೂಡ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ತೆರೆಕಂಡ ತಮಿಳು ತುನಿವ್ ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ನಟಿ ನಟಿ ಮಂಜು ವಾರಿಯರ್ ಬಿಎಂಡಬ್ಲ್ಯು ಬೈಕ್ ಅಲ್ಲದೆ, ಮಿನಿ ಕೂಪರ್ ಎಸ್ಇ ಎಲೆಕ್ನಿಕ್ ಮತ್ತು ರೇಂಜ್ ರೋವರ್ ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ನಟಿ ಖರೀದಿಸಿದ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಬಗ್ಗೆ ಹೇಳಬೇಕೆಂದರೆ, ಈ ಅಡ್ವೆಂಚರ್ ಪ್ರೀಮಿಯಂ ಬೈಕ್ ಸ್ಟ್ಯಾಂಡರ್ಡ್ ಮತ್ತು ಅಲ್ವೆಂಚರ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು ಟ್ರಿಪಲ್ ಬ್ಲ್ಯಾಕ್, ಲೈಟ್ ವೈಟ್ ಮತ್ತು ರ್ಯಾಲಿ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಹಾಗೇ ಅಡ್ಡೆಂಚರ್ ರೂಪಾಂತರವು ಟ್ರಿಪಲ್ ಬ್ಲ್ಯಾಕ್, ಐಸ್ ಗ್ರೇ ಮತ್ತು ರ್ಯಾಲಿ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಬೈಕ್ ನ ಮುಂಭಾಗದಲ್ಲಿ ಹೆಡ್‌ಲ್ಯಾಂಪ್, ಫ್ರೆಂಟ್ ಬೀಕ್ ಮತ್ತು ವಿಂಡ್‌ಸ್ಟೀನ್ ಇದೆ.

BMW R 1250 GS ಅಡ್ವೆಂಚರ್ ಬೈಕ್ ಸಿಂಗಲ್ ಪೀಸ್ ಹ್ಯಾಂಡಲ್‌ ಬಾರ್, ಮೆತ್ತನೆಯ ಸೀಟ್, ಆಫ್ರೋಡ್ ಬಯಾಸ್ ಗ್ರಿಪ್ಪಿ ಫುಟ್‌ಪೆಗಳು ಮತ್ತು ಪ್ಯೂಯಲ್ ಟ್ಯಾಂಕ್ ಮತ್ತು ಫುಟ್ ಪೆಗ್ ಗಳನ್ನು ಒಳಗೊಂಡಿದೆ. ಜೊತೆಗೆ 6.5 ಇಂಚಿನ ಟಿಎಫ್ಟಿ ಇನ್ಸ್ ಟ್ರಮೆಂಟ್ ಕ್ಲಸ್ಟರ್ ಅನ್ನು ಬಿಎಂಡಬ್ಲ್ಯು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಸ್ಟ್ಯಾಂಡರ್ಡ್ ಆಗಿ ಹೊಂದಿದೆ.

ಅಲ್ಲದೆ, ಈ ಬೈಕ್ ಯುಎಸ್ಬಿ ಸಾಕೆಟ್, ಇಂಟಿಗ್ರಲ್ ಎಬಿಎಸ್ ಪ್ರೊ. ಹಿಲ್ ಸ್ಟಾರ್ಟ್ ಕಂಟ್ರೋಲ್ (ಎಚ್‌ಎಸ್ಸಿ) ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್ (ಡಿಟಿಸಿ), ಐಎಯು ಪುಲ್-ಎಲ್‌ಇಡಿ ಲೈಟಿಂಗ್ ಸೇರಿದಂತೆ ಹಲವು ಉತ್ತಮ ಫೀಚರ್ಸ್ ಗಳನ್ನು ಹೊಂದಿದೆ. ಈ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನಲ್ಲಿ ಬಾಕ್ಸರ್ ಕಾನ್ಸಿಗರೇಶನ್‌ನಲ್ಲಿ ಟ್ವಿನ್-ಸಿಲಿಂಡರ್ 1254 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,750 ಆರ್‌ಪಿಎಂನಲ್ಲಿ 134 ಬಿಹೆಚ್ಪಿ ಪವರ್ ಮತ್ತು 6,250 ಆ‌ಪಿಎಂನಲ್ಲಿ 143 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸದ್ಯ ಈ ಬೈಕ್ ನ ಒಡತಿ ಲೇಡಿ ಸೂಪರ್‌ಸ್ಟಾ‌ರ್ ಮಂಜು ಆಗಿದ್ದಾರೆ.

Leave A Reply

Your email address will not be published.