Animals that die after mating : ಸಂಭೋಗ ನಡೆಸಿದ ತಕ್ಷಣ ಸಾಯುವ ಈ ಪ್ರಾಣಿಗಳ ಬಗ್ಗೆ ನಿಮಗೆ ಗೊತ್ತೇ ?

Animal Mating : ಮನುಷ್ಯರು ಮಕ್ಕಳನ್ನು ಹುಟ್ಟಿಸಲು ಅಂದರೆ, ಸಂತಾನೋತ್ಪತ್ತಿ ಮಾಡಲು ಮಾತ್ರ ಸಂಭೋಗ ಮಾಡುವುದಲ್ಲ, ಬದಲಿಗೆ ಸುಖ ಪಡುವುದು ಕೂಡ ಮನುಷ್ಯರು ಸಂಭೋಗ ನಡೆಸಲು ಪ್ರಮುಖ ಕಾರಣ. ಸರಾಸರಿ ಲೆಕ್ಕದಲ್ಲಿ ನೋಡಿದರೆ, ದಂಪತಿಗಳು ಸುಮಾರು 30 ಸೆಕೆಂಡುಗಳಿಂದ ಹಿಡಿದು ಗರಿಷ್ಟ ಸುಮಾರು 45 ನಿಮಿಷಗಳವರೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುತ್ತಾರೆ.

ಅಬ್ಬಬ್ಬಾ, ಯಾರಪ್ಪ ಅಷ್ಟು ದೀರ್ಘಕಾಲ ಸಂಭೋಗ ಮಾಡೋರು? ನಿಜಕ್ಕೂ ಅಷ್ಟು ದೀರ್ಘ ಕಾಲ ಸ್ಖಲಿಸದೆ ಆಟ ಆಡಲು ಸಾಧ್ಯವಾ ಎಂದು ನೀವಂದುಕೊಳ್ಳಬಹುದು. ನೀವು ಈ ಬ್ರೌನ್ ಆಂಟೆಚಿನಸ್(Brown Antichinas) ಎಂಬ ಪ್ರಾಣಿಯ ಬಗ್ಗೆ ಕೇಳುವವರೆಗೆ 45 ನಿಮಿಷಗಳ ಕಾಲ ನಡೆಸುವ ಸಂಭೋಗವು ( Animal Mating ) ನಿಮಗೆ ಬಹು ದೊಡ್ಡದಾಗಿ ಕೇಳಿಸುತ್ತದೆ.

1. ಕಂದು ಬಣ್ಣದ ಗಂಡು ಆಂಟೆಚಿನಸ್ (Antichinas)

ಈ ಪ್ರಾಣಿ ಉಂಟಲ್ಲ, ಅದು ಸೆಕ್ಸ್ ನಲ್ಲಿ ಬಹು ದೊಡ್ಡ ಉನ್ಮಾದಿ. ಅದು ಒಮ್ಮೆ ಶುರು ಹಚ್ಚಿಕೊಂಡರೆ ನಿರಂತರವಾಗಿ 14 ಗಂಟೆಗಳವರೆಗೆ ಸುಖಿಸುತ್ತದೆ. ಒಮ್ಮೆ ಒಂದು ಹೆಣ್ಣಿನ ಜತೆ ಸರಸಕ್ಕೆ ಇಳಿದರೆ, ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಮತ್ತೊಂದರ ಮೇಲೆ ಎರಗುತ್ತದೆ. ಇನ್ನೊಂದಷ್ಟು ಹೊತ್ತಿನಲ್ಲಿ ಮಗದೊಂದು ಹೆಣ್ಣಿನ ಜತೆ ಪಲ್ಲಂಗ ವಾಸ. ತದನಂತರ ಮತ್ತೊಂದು ಸಂಗಾತಿಯ ಜತೆ ಮೈಥುನಕ್ಕೆ ತೊಡಗುತ್ತದೆ. ಹೀಗೆ ಸಾಧ್ಯವಾದಷ್ಟು ಹೆಣ್ಣುಗಳೊಂದಿಗೆ ಅದು ಸಂಗಾತಿಯಾಗುತ್ತದೆ.

ಮನಬಿಚ್ಚಿ ಸೊಂಟ ಸೋಲುವವರೆಗೆ, ಶಕ್ತಿ ಬೀಳುವವರೆಗೆ, ವೀರ್ಯ ಖಾಲಿಯಾಗುವವರೆಗೆ ನಿರಂತರ ಸಂಭೋಗದಲ್ಲಿ ನಿರತವಾಗುತ್ತದೆ ಇಲಿಯನ್ನು ಹೋಲುವ ಈ ಪ್ರಾಣಿ. ಆದರೆ ಖಾಲಿಯಾಗುವುದು ಕೇವಲ ವೀರ್ಯವಲ್ಲ, ಬದಲಿಗೆ ಅನಿಯಮಿತ ಲೈಂಗಿಕ ಕ್ರಿಯೆಯ ಮೂಲಕ ಅದರ ದೇಹದ ಒಟ್ಟಾರೆ ಇಮ್ಯುನಿಟಿ ಬರಿದಾಗಿ ಹೋಗಿರುತ್ತದೆ.

ನಿರಂತರ ಒಂದರ ಹಿಂದೆ ಒಂದರಂತೆ ಸಂಭೋಗ ಮಾಡಿದ ಪರಿಣಾಮ ಅವುಗಳ ದೇಹದಲ್ಲಿ ಟೆಸ್ಟೋಸ್ಟೆರೋನ್ (Testosterone) ಹಾರ್ಮೋನ್ ಖಾಲಿಯಾಗುತ್ತದೆ. ದೇಹದಲ್ಲಿ ಕೊರ್ಟಿಕೊ ಸ್ಟೆರಾಯ್ಡ್ (Cortici Steraid) ಗಳು ಅಧಿಕವಾಗಿ ಶೇಖರಣೆ ಆಗುತ್ತದೆ. ದುರದೃಷ್ಟವಶಾತ್, ಆತನ ಸುಖ ಪಡುವ ಆತುರದ ಪ್ರಯತ್ನವು ಸಾಮಾನ್ಯವಾಗಿ ಆತನ ಪ್ರತಿ ರಕ್ಷಣಾ ವ್ಯವಸ್ಥೆಯನ್ನು(Iunity System) ಅನ್ನು ಕ್ರ್ಯಾಶ್ ಮಾಡುತ್ತದೆ. ರೋಗ ಮತ್ತು ಸೋಂಕಿನಿಂದ ಆತನ ದೇಹ ಅತ್ಯಂತ ದುರ್ಬಲವಾಗುತ್ತದೆ. ಅಂತಿಮವಾಗಿ ಸುಖದ ವಿಪರೀತವಾದ ಬಯಕೆಯೇ ಅತನನ್ನು ಕೊಲ್ಲುತ್ತದೆ.

ಸೆಕ್ಸ್ ನ ಅತಿಯಾದ ಉನ್ಮಾದಕ್ಕೆ ಇಳಿದರೆ ಆರೋಗ್ಯದ ಜತೆಗೆ ಜೀವಕ್ಕೇ ಅಪಾಯ ಎನ್ನುವ ಪಾಠವನ್ನು ನಮಗೆ ತಿಳಿಸಲೋ ಏನೋ ಎಂಬಂತೆ ಇದೆ ಈ ಜೀವಿಯ ಮೈಥುನದ ವಿಧಾನ. ಆತನ ಲೈಂಗಿಕ ಉನ್ಮಾದದ ಕಾರಣದಿಂದ ಹೆಚ್ಚಿನ ಸಂದರ್ಭಗಳಲ್ಲಿ, ಆತ ತನ್ನ ಮರಿಗಳು ಹುಟ್ಟುವ ಮೊದಲೇ ಸಾಯುತ್ತಾನೆ. ವಿಜ್ಞಾನಿಗಳು ಈ ಕಾಮಿಕೇಜ್ ಸಂಯೋಗ ತಂತ್ರವನ್ನು “ಆತ್ಮಹತ್ಯೆಯ ಸಂತಾನೋತ್ಪತ್ತಿ” (Suicidal reproduction) ಎಂದು ಕರೆಯುತ್ತಾರೆ.

ಸಿಂಕ್ರೊನಸ್ ಸಂಯೋಗದ ವಿಕಾಸಕ್ಕೆ ಕೆಲವು ಸಂಭವನೀಯ ವಿಕಸನೀಯ ಅನುಕೂಲಗಳಿವೆ ಎನ್ನಲಾಗಿದೆ. ಸಂಯೋಗದ ಅವಧಿಯಲ್ಲಿ ಸಾಧ್ಯವಾದಷ್ಟು ಹೆಚ್ಚು ಸಂಯೋಗಗಳು ಸಂಭವಿಸಲು ಇದು ಸಹಾಯಕಾರಿ. ಅಂದರೆ ಪರಿಣಾಮಕಾರಿಯಾಗಿ ಗಂಡಿನ ಪರ್ಫಾರ್ಮೆನ್ಸ್ ಅನ್ನು ಬಳಸಿಕೊಳ್ಳುವಂತೆ ಅವು ಸಂಭೋಗ ನಡೆಸುತ್ತವೆ. ಪುರುಷ ಇಲಿಗಳು ತಮ್ಮ ಎಲ್ಲಾ ಪ್ರಯತ್ನಗಳನ್ನು ಮತ್ತು ಶಕ್ತಿಗಳನ್ನು ಒಂದು ಸಣ್ಣ ಸಂತಾನವೃದ್ಧಿ ಋತುವಿನಲ್ಲಿ ಕೇಂದ್ರೀಕರಿಸಬಹುದು. ಸಿಂಕ್ರೊನಸ್ ಸಂಯೋಗದ ಮತ್ತೊಂದು ಸಂಭವನೀಯ ಪ್ರಯೋಜನವೆಂದರೆ ಅದರ ಮರಿಗಳು ಹಾಲುಣಿಸುವಿಕೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಬದುಕುಳಿಯುವಂತೆ ನೋಡಿಕೊಳ್ಳುವುದು.

ಅದಕ್ಕಾಗಿ ಯರ್ರಾಬಿರ್ರಿ ಸೆಕ್ಸ್ ನಡೆಸಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳನ್ನು ಹುಟ್ಟು ಹಾಕೋದು ಮುಖ್ಯ. ಆಗ ಈ ಪ್ರಾಣಿಗಳ ವೈರಿಗಳು ಕೆಲವು ಮರಿಗಳನ್ನು ನಾಶಪಡಿಸಿದರೂ ಇನ್ನೂ ಹೆಚ್ಚಿನವು ಬದುಕುಳಿಯಲಿ ಎನ್ನುವುದು ಅವುಗಳ ಆಶಯ.

ಇದು ಜೀವ ಜಗತ್ತು ಈ ಪ್ರಾಣಿಗಳಿಗೆ ಇಟ್ಟ ವರವೂ ಹೌದು, ಅದು ಶಾಪವೂ ಹೌದು. ಶಾಪ ಏಕೆಂದರೆ ಹೆಚ್ಚಿನ ಎಲ್ಲಾ ಗಂಡು ಪ್ರಾಣಿಗಳು ಅತ್ಯಂತ ಅಧಿಕ ಸಂಭೋಗದ ಕಾರಣದಿಂದ ದೇಹದಲ್ಲಿನ ಶಕ್ತಿಯನ್ನು ಕಳಕೊಂಡು ಇನ್ಫೆಕ್ಷನ್ ಗೆ ತುತ್ತಾಗುತ್ತವೆ. ಬಹುಬೇಗ ರೋಗ ಬಂದು ಈ ಪ್ರಾಣಿಗಳು ಸತ್ತು ಹೋಗುತ್ತವೆ. ಇಂತಹಾ ಮ್ಯಾರಥಾನ್ ಸಂಭೋಗದ ನಂತರ ಗಂಡು ಪ್ರಾಣಿಗಳು ಬದುಕುಳಿಯುವ ಸಂಭವವೇ ಇಲ್ಲ ಅನ್ನುವಷ್ಟು ಸಂಖ್ಯೆಯಲ್ಲಿ ಗಂಡುಗಳು ಸಾಯುತ್ತವೆ.

2. ಜೇನುಹುಳು

ಈ ಪಾಪದ ಗಂಡು ಜೇನುನೊಣವನ್ನು ತೆಗೆದುಕೊಳ್ಳಿ. ಆತನ ಕೆಲಸವಾದರೂ ಏನು ಗೊತ್ತೇ ? ಅವನ ಪ್ರಾಥಮಿಕ ಕೆಲಸವೋ – ಆತನಿಗೇ ಪ್ರೀತಿ !! ಮಾಡುವುದು ಮಾತ್ರ ಗೊತ್ತು ಆತನಿಗೆ. ಅದು ಬಿಟ್ಟು ಆತನಿಗೆ ಇನ್ನೇನೂ ಗೊತ್ತಿಲ್ಲ. ಆತನಿಗೆ ಅದೊಂದೇ ಕೆಲಸ : ತನ್ನ ರಾಣಿಯೊಂದಿಗೆ ಸಾಂಗತ್ಯ ನಡೆಸೋದು. ಆದರೆ ತುಂಬಾ ದುಃಖಕರ ವಿಷಯವೇನೆಂದರೆ, ಆತ ಒಮ್ಮೆ ಮಾತ್ರ ಸಂಗಾತಿಯಾಗುತ್ತಾನೆ. ಜೀವಮಾನದಲ್ಲಿ ಆತ ಒಮ್ಮೆ ಮಾತ್ರ ಸುಖಿಸಬಲ್ಲ. ಏಕೆಂದರೆ, ರಾಣಿಯೊಂದಿಗೆ ಒಮ್ಮೆ ಸುಖಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲೇ, ಈ ಕ್ರಿಯೆಯ ಸಮಯದಲ್ಲಿ ಆತನ ಸಂತಾನೋತ್ಪತ್ತಿಯ ಅಂಗಗಳು ಕಿತ್ತುಹೋಗುತ್ತವೆ. ಮತ್ತು ಮುಖ್ಯವಾಗಿ ಆತನ ವೃಷಣಗಳು ಸ್ಫೋಟಗೊಳ್ಳುತ್ತವೆ.

ಈ ಪ್ರಕ್ರಿಯೆಯಲ್ಲಿ, ಅವನ ವೀರ್ಯವು ಅವಳ ಅಂಡನಾಳದ ಮೂಲಕ ಹೊಸ ಜೀವದ ಚಿಗುರು ಮೂಡಿಸಲು ಹಾತೊರೆಯುತ್ತದೆ. ಅಲ್ಲಿ ರಾಣಿಯು ಆತನ ವೀರ್ಯವನ್ನು ತನ್ನ ದೇಹದ ಒಳಗೆ ಸಂಗ್ರಹಿಸಿಟ್ಟುಕೊಳ್ಳುತ್ತಾಳೆ. ಅದನ್ನು ನಂತರದ ಬಳಕೆಗಾಗಿ ಸಂಗ್ರಹಿಸುತ್ತಾಳೆ. ಆದರೆ ಪಾಪ ಗಂಡು ಮೊದಲ ಸಂಭೋಗದ ಜತೆಯಲ್ಲೇ ಮರಣವನ್ನಪ್ಪುತ್ತಾನೆ. ಇಂತಹಾ ಸಂಭೋಗ ಯಾಕಪ್ಪಾ ಬೇಕಿತ್ತು ಎಂದು ಯೋಚನೆ ಮೂಡುವ ಮೊದಲೇ ಗಂಡು ಜೇನು ಹುಳು ಪಟಕ್ಕನೆ ನೆಲಕ್ಕೆ ಬಿದ್ದು ಸತ್ತು ಹೋಗುತ್ತದೆ.

3. ಆ್ಯಂಗ್ಲರ್ ಫಿಶ್ ಅಥವಾ ಗಾಳಗಾರ ಮೀನು

ಇದು ಇನ್ನೊಂದು ಕನಿಷ್ಠ ತ್ವರಿತ ಸಾವು. ವಿಶೇಷವಾಗಿ ಟ್ರಿಪಲ್‌ವಾರ್ಟ್ ಸೀಡೆವಿಲ್‌ನಂತಹ ಕೆಲವು ಸಮುದ್ರವಾಸಿ ಜೀವಿ ಆ್ಯಂಗ್ಲರ್ ಫಿಶ್ ಅಥವಾ ಗಾಳಗಾರ ಮೀನು. ಇಲ್ಲಿ ಹೆಣ್ಣಿನ ಗಾತ್ರ ಅಗಾಧವಾದುದು. ಗಂಡು ಪ್ರಾಣಿ ಗಾತ್ರದಲ್ಲಿ ತುಂಬಾ ಚಿಕ್ಕದು. ಮನುಷ್ಯರಿಗೆ ಹೋಲಿಸಿದರೆ, ಗಂಡು ಪ್ರಾಣಿ ಹೆಣ್ಣಿನ ಪಾದದವರೆಗೆ ಮಾತ್ರ ಬಂದರೆ ಹೇಗಿರುತ್ತೋ ಅಷ್ಟು ಮಾತ್ರದ ದೇಹಗಾತ್ರ ಗಂಡಿನದು. ಗಂಡು ಪ್ರಾಣಿಯು ತನ್ನ ಸ್ವಂತ ಆಹಾರಕ್ಕಾಗಿ ಬೇಟೆಯಾಡುವ ಬದಲು, ಗಂಡು ಹೆಣ್ಣನ್ನು ಕಚ್ಚುತ್ತದೆ. ಅವಳ ರಕ್ತ ಹೀರಿ ಗಂಡು ಬದುಕುತ್ತಾನೆ. ಆತ ಆತನ ದೇಹವನ್ನು ಅವಳೊಂದಿಗೆ ಬೆಸೆಯುತ್ತಾನೆ ಮತ್ತು ಅವಳ ರಕ್ತದಲ್ಲಿನ ಪೋಷಕಾಂಶಗಳಿಂದ ಆತ ಬದುಕುತ್ತಾನೆ.

ಆಗ ಆತ ಅದಕ್ಕೆ ಪ್ರತಿಯಾಗಿ ಆಕೆಗೆ ಏನನ್ನಾದರೂ ಕೊಡಲೇ ಬೇಕಲ್ಲವೇ ? ಆಕೆ ಕೊಟ್ಟ ಆಹಾರಕ್ಕೆ ಪ್ರತಿಯಾಗಿ, ಆಕೆಗೆ ನೀಡಲು ಆತನಲ್ಲಿ ಇರುವುದು ಅದೊಂದೇ : ವೀರ್ಯ !!! ಈ ವೀರ್ಯದಾನದ ಪ್ರಕ್ರಿಯೆಯಲ್ಲಿ (Animal mating) ಆತನ ದೇಹವು ಕುಗ್ಗುತ್ತದೆ. ಆತ ತನ್ನ ಕಣ್ಣುಗಳು, ರೆಕ್ಕೆಗಳು ಮತ್ತು ಹೆಚ್ಚಿನ ಆಂತರಿಕ ಅಂಗಗಳನ್ನು ಸ್ಕಲನದ ಸಂದರ್ಭದಲ್ಲಿ ಕಳೆದುಕೊಳ್ಳುತ್ತಾನೆ, ಅಂತಿಮವಾಗಿ ಸಾಯುತ್ತಾನೆ. ಆತನೊಬ್ಬ ಹೆಣ್ಣಿಗೆ ಪೋರ್ಟಬಲ್ ವೀರ್ಯ ಬ್ಯಾಂಕ್ ಮಾತ್ರ ಅಂತ ಆತನಿಗೆ ಕೊನೆಯ ತನಕವೂ ಗೊತ್ತಾಗುವುದಿಲ್ಲ.

Leave A Reply

Your email address will not be published.