Bhajarang Dal : ಪಾರ್ಕಿನಲ್ಲಿ ಕುಳಿತಿದ್ದ ಜೋಡಿಗೆ ರಾಖಿ ಕಟ್ಟಿಸಿದ ಬಜರಂಗದಳ!

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ದೇಶಾದ್ಯಂತ ಫೆಬ್ರವರಿ 14 ನೆ ತಾರೀಖು ಪ್ರೇಮಿಗಳ ದಿನವನ್ನಾಗಿ ಆಚರಿಸೋದು ಗೊತ್ತಿರುವ ವಿಚಾರವೇ!!!. ಅದರಲ್ಲೂ ಈ ದಿನ ಎಲ್ಲೇ ಕಂಡರೂ ಲವ್ ಬರ್ಡ್ಸ್ ಗಳಂತೆ ಪ್ರೇಮಿಗಳು ಕ್ಲಬ್, ಪಾರ್ಕ್ ಎಂದು ಎಲ್ಲ ಕಡೆ ಸಂಭ್ರಮಾಚರಣೆ ಮಾಡೋದು ಕಾಮನ್. ಆದರೆ, ಹೀಗೆ ಹುಡುಗ ಹುಡುಗಿ ಜೊತೆಯಾಗಿ ಕೈ ಕೈ ಹಿಡಿದುಕೊಂಡು ತಿರುಗಾಡೋದನ್ನು ಬಜರಂಗದಳದವರು ನೋಡಿದರೆ ಮುಗಿಯಿತು. ಈ ರೀತಿಯ ಆಚರಣೆಗೆ ಬ್ರೇಕ್ ಹಾಕಿ ಜೋಡಿಗಳಿಗೆ ವಾರ್ನ್ ಮಾಡಿ ಕಳಿಸುವ ಇಲ್ಲವೇ ಆ ಜೋಡಿಗಳಿಗೆ ಮದುವೆ ಮಾಡಿಸೋದು ಕೂಡ ಇದೆ. ಹೀಗೆ, ಅನೇಕ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಇದೀಗ, ಉತ್ತರಪ್ರದೇಶದಲ್ಲಿ ನೆನ್ನೆ ವ್ಯಾಲೆಂಟೈನ್ಸ್ ಡೇ ಅಂಗವಾಗಿ ಪಾರ್ಕ್ನಲ್ಲಿ ಕಾಲ ಕಳೆಯಲು ಬಂದಿದ್ದ ಪ್ರಣಯ ಜೋಡಿಗಳಿಗೆ ಬಲವಂತವಾಗಿ ಬಜರಂಗದಳದ ಕಾರ್ಯಕರ್ತರು ರಾಖಿ ಕಟ್ಟಿಸಿದ ಘಟನೆ ನಡೆದಿದೆ.

 

ವ್ಯಾಲೆಂಟೈನ್ಸ್ ಡೇ ದಿನ ಸಹಜವಾಗಿ ಪ್ರೀತಿಸುವ ಜೋಡಿಗಳು ಪಾರ್ಕ್, ಸಿನಿಮಾ ಥಿಯೇಟರ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಪ್ರೀತಿ ಪಾತ್ರರ ಜೊತೆಗೆ ವಿಶೇಷ ದಿನವನ್ನು ಸಂಭ್ರಮಿಸುವುದು ಕಾಮನ್. ಹೀಗೆ, ಉತ್ತರ ಪ್ರದೇಶದ ಮೊರಾದಾಬಾದ್‌ ಸನಿಹದ ಪಾರ್ಕ್ ನಲ್ಲಿ ಪ್ರೇಮಿಗಳ ದಿನದ ಸಂಭ್ರಮಾಚರಣೆಗೆ ಲವ್ ಬರ್ಡ್ಸ್ಗಳು ಅಡ್ಡಾಡುತ್ತಿದ್ದರು. ಈ ನಡುವೆ, ವ್ಯಾಲೆಂಟೈನ್ ಡೇ ಸಂಭ್ರಮದಲ್ಲಿ ಮುಳುಗಿದ್ದ ಜೋಡಿಗಳತ್ತ ದೌಡಾಯಿಸಿದ ಬಜರಂಗ ದಳ ಸಂಘಟನೆಯ ಸದಸ್ಯರ ಗುಂಪು ಲವರ್ಸ್ ಗಳನ್ನ ಹಿಡಿಯಲು ಯತ್ನಿಸಿದನ್ನು ಕಂಡು ಗಾಬರಿಗೊಂಡ ಪ್ರೇಮಿಗಳು ಅಲ್ಲಿಂದ ಕಾಲ್ಕಿತ್ತಿದ್ದು ಅಲ್ಲದೆ ಚೆಲ್ಲಾಪಿಲ್ಲಿಯಾಗಿ ಭಜರಂಗ ದಳದ ಸದಸ್ಯರನ್ನು ಯಾಮಾರಿಸುವ ನಿಟ್ಟಿನಲ್ಲಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದು, ಈ ಸಂದರ್ಭ ಬಜರಂಗ ದಳದ ಸದಸ್ಯರು ಒಂದೊಂದೇ ಜೋಡಿಯನ್ನು ವಿಚಾರಿಸಲು ಶುರು ಮಾಡಿದ್ದಾರೆ.

 

ಹೀಗೆ ಜೋಡಿಗಳನ್ನು ವಿಚಾರಿಸಿದಾಗ ಇವರಿಬ್ಬರೂ ಸಂಬಂಧಿಕರಾಗಿರದೆ, ಪ್ರೇಮಿಗಳೆಂದು ತಿಳಿದ ಕೂಡಲೇ ರಾಖಿಯ ಜೊತೆಗೆ ಬಂದಿದ್ದ ಬಜರಂಗದಳ ಸದಸ್ಯರು ಆ ಪ್ರೇಮಿಗಳಿಗೆ ಬಲವಂತವಾಗಿ ರಾಖಿ ಕಟ್ಟಿದ್ದಾರೆ ಎನ್ನಲಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಗಂಡ ಹೆಂಡತಿಯನ್ನು ಹೊರತುಪಡಿಸಿ, ಉಳಿದವರು ಸಹೋದರ ಸಹೋದರಿಗೆ ಸಮಾನ ಎಂಬುದು ಬಜರಂಗದಳದವರ ಅಭಿಪ್ರಾಯವಾಗಿದ್ದು, ನೀವು ಮದುವೆಗೂ ಮೊದಲೇ ಪ್ರೀತಿಸುವ ಹಾಗಿಲ್ಲ ಎಂದಿದ್ದು, ನಿಮಗೆ ಮನೆಯಲ್ಲಿ ಹೇಳುವವರು ಕೇಳುವವರು ಯಾರು ಇಲ್ಲವೇ ಎಂದು ಪ್ರಶ್ನಿಸಿ ಗದರಿದ್ದು, ಹೀಗಾಗಿ, ಬಲವಂತದಿಂದ ಪರಸ್ಪರ ರಾಖಿ ಕಟ್ಟಿಸಿ ಇನ್ಮುಂದೆ ನೀವು ಅಣ್ಣ ತಂಗಿಯೆಂದು ಬಜರಂಗದಳದವರು ಹೇಳಿದ್ದಾರೆ.

Leave A Reply

Your email address will not be published.